ಬೆಂಗಳೂರು : ಆಫ್ಘಾನಿಸ್ಥಾನ ಮಾಡಿದ್ದು, ಪಾಕಿಸ್ತಾನ ಮಾಡಿದ್ದು, ಬಾಂಗ್ಲಾದೇಶ ಮಾಡಿದ್ದು ಇದೇ ಮನಸ್ಥಿತಿ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ.
ಮಲ್ಲೇಶ್ವರಂ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಹಿಜಾಬ್ ವಿಚಾರದಲ್ಲಿ ಕಾನೂನು ಪಾಲಿಸಲು ಅವರಿಗೆ ಇಷ್ಟ ಅಲ್ಲ ಅನ್ನೋ ಮನಸ್ಥಿತಿಯನ್ನು ತೋರಿಸುತ್ತದೆ. ಈ ಬೆಳವಣಿಗೆ ನಮ್ಮ ದೇಶವನ್ನು ಹಲವು ತುಂಡು ಮಾಡಿದ್ದು ಇದೇ ಬೆಳವಣಿಗೆ. ಆಫ್ಘಾನಿಸ್ಥಾನ ಮಾಡಿದ್ದು, ಪಾಕಿಸ್ತಾನ ಮಾಡಿದ್ದು, ಬಾಂಗ್ಲಾ ಮಾಡಿದ್ದು ಇದೇ ಮನಸ್ಥಿತಿ.
ಈ ದೇಶದಲ್ಲಿ ಅಂಬೇಡ್ಕರ್ ಅವರು ಬರೆದ ಸಂವಿಧಾನವನ್ನು ಪಾಲಿಸುವುದಿಲ್ಲ ಎನ್ನುವುದು ಯಾವ ಮನಸ್ಥಿತಿ. ಇವತ್ತು ಹಿಜಾಬ್ ಬೇಡಿಕೆ ಇಡುತ್ತಾರೆ. ನಾಳೆ ಇನ್ನೊಂದು ಬೇಡುತ್ತಾರೆ. ಕೋರ್ಟ್ ಯಾವುದೇ ರೀತಿಯ ಧಾರ್ಮಿಕ ಸೂಚಿತ ಬಟ್ಟೆಗಳನ್ನು ಹಾಕಬಾರದು ಎಂದು ಹೇಳಿದ ಮೇಲೂ ಈ ರೀತಿಯ ಮನಸ್ಥಿತಿ ಬಹಳ ಅಪಾಯಕಾರಿ ಎಂದರು.
ಕಾಂಗ್ರೆಸ್ ಪಕ್ಷ ಇದನ್ನು ರಾಜಕೀಯ ಲಾಭಕ್ಕಾಗಿ ಮತ ಬ್ಯಾಂಕ್ಗಾಗಿ ರೀತಿ ಮಾಡಿಕೊಂಡಿದೆ. ಒಂದು ಸಮುದಾಯದ ವಿದ್ಯಾರ್ಥಿಗಳು ಹಿಜಾಬ್ ಹಾಕಿಕೊಂಡು ಬರಲು ಅವಕಾಶ ನೀಡಿದರೆ ನಾಳೆ ದಿಗಂಬರ್ ಅನುಯಾಯಿಗಳು ನಾಗಾ ಸಾಧು ಅನುಯಾಯಿಗಳು ತಮ್ಮ ಹುಟ್ಟುಡುಗೆಯಲ್ಲಿ ಶಾಲೆಗೆ ಬರುತ್ತೇವೆ ಎಂದರೆ ಪರಿಸ್ಥಿತಿ ಏನಾಗುತ್ತದೆ ಯೋಚನೆ ಮಾಡಿ.