ಕರ್ನಾಟಕ

karnataka

ETV Bharat / state

ಬೆಂಗಳೂರಲ್ಲಿ 100 ಉಚಿತ ವೈಫೈ ಹಾಟ್‌ಸ್ಪಾಟ್‌ಗಳಿಗೆ ಚಾಲನೆ.... - ಈಟಿವಿ ಭಾರತ ಕರ್ನಾಟಕ

ಮಲ್ಲೇಶ್ವರ ಕ್ಷೇತ್ರ ವ್ಯಾಪ್ತಿಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಅಭಿವೃದ್ಧಿಪಡಿಸಿರುವ 100 ಹಾಟ್‌ಸ್ಪಾಟ್‌ ತಾಣಗಳಿಗೆ ಸ್ಥಳೀಯ ಶಾಸಕ ಅಶ್ವತ್ಥನಾರಾಯಣ ಶುಕ್ರವಾರ ಚಾಲನೆ ನೀಡಿದರು.

c-n-ashwathnarayan-inaugurate-100-free-wifi-hotspots-in-malleswar
ಬೆಂಗಳೂರು: ನಗರದಲ್ಲಿ 100 ಉಚಿತ ವೈಫೈ ಹಾಟ್‌ಸ್ಪಾಟ್‌ಗಳಿಗೆ ಚಾಲನೆ....

By

Published : Mar 24, 2023, 9:36 PM IST

ಬೆಂಗಳೂರು:ಸಾರ್ವಜನಿಕರಿಗೆ ವೈಫೈ ಸೌಲಭ್ಯವು ಸುಗಮವಾಗಿ ಸಿಗಬೇಕು ಎನ್ನುವ ಸದುದ್ದೇಶದೊಂದಿಗೆ ನಗರದ ಮಲ್ಲೇಶ್ವರ ಕ್ಷೇತ್ರ ವ್ಯಾಪ್ತಿಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಅಭಿವೃದ್ಧಿಪಡಿಸಿರುವ 100 ಹಾಟ್‌ಸ್ಪಾಟ್‌ ತಾಣಗಳಿಗೆ ಸ್ಥಳೀಯ ಶಾಸಕ ಹಾಗೂ ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ ಶುಕ್ರವಾರ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅಶ್ವತ್ಥನಾರಾಯಣ, ಇಂದು ತಂತ್ರಜ್ಞಾನವು ನೀರಿಗಿಂತಲೂ ಹೆಚ್ಚಿನ ಮೂಲಭೂತ ಅಗತ್ಯವಾಗಿ ಪರಿಣಮಿಸಿದೆ. ಹೀಗಾಗಿ ಆಕ್ಟ್‌ ಫೈಬರ್​ನೆಟ್‌ ಕಂಪನಿಯ ಸಹಯೋಗದಲ್ಲಿ ಉದ್ಯಾನ, ಮೆಟ್ರೋ ನಿಲ್ದಾಣಗಳು, ಬಸ್‌ ನಿಲ್ದಾಣಗಳು, ಶಿಕ್ಷಣ ಸಂಸ್ಥೆಗಳು, ಮಾಲ್‌ಗಳು ಮತ್ತು ಇತರ ಸಾರ್ವಜನಿಕ ತಾಣಗಳಲ್ಲಿ ಈ ಹಾಟ್‌ಸ್ಪಾಟ್‌ ಸೌಲಭ್ಯ ಕೊಡಲಾಗುತ್ತಿದೆ. ಇದರಡಿಯಲ್ಲಿ ಸಾರ್ವಜನಿಕರು 25 ಎಂಬಿಪಿಎಸ್‌ ವೇಗದಲ್ಲಿ ಕೆಲಸ ಮಾಡುವ ಇಂಟರ್​ನೆಟ್​ 45 ನಿಮಿಷಗಳ ಕಾಲ ಉಚಿತವಾಗಿ ಬಳಸಿಕೊಳ್ಳಬಹುದು ಎಂದರು.

ಆಕ್ಟ್‌ ಫೈಬರ್ ನೆಟ್​​ಗಾಗಿ ಸಾಮರ್ಥ್ಯವುಳ್ಳ ಕಂಪನಿಯಾಗಿದೆ. ಸರ್ಕಾರವು ಈ ಕಂಪನಿಯ ಸಹಯೋಗದಲ್ಲಿ ನೀಡುತ್ತಿರುವ ಸೌಲಭ್ಯದಿಂದ ವಿಡಿಯೋ ಕಾಲಿಂಗ್, ಸ್ಟ್ರೀಮಿಂಗ್, ತ್ವರಿತ ಗತಿಯಲ್ಲಿ ಕಡತಗಳ ರವಾನೆ ಎಲ್ಲವನ್ನೂ ತಾವಿದ್ದಲ್ಲಿಂದಲೇ ಮಾಡಬಹುದು. ಮುಖ್ಯವಾಗಿ ಇದು ಸಮಾಜದಲ್ಲಿರುವ ಡಿಜಿಟಲ್ ಕಂದಕವನ್ನು ಮುಚ್ಚಲಿದೆ. ಜತೆಗೆ ಮೂಲಸೌಲಭ್ಯಗಳನ್ನು ಒದಗಿಸಲು ಪದೇಪದೇ ರಸ್ತೆ ಅಗೆಯುವ ಪ್ರಮೇಯ ತಪ್ಪಲಿದೆ. ಕಂಪನಿಯು ಒಟ್ಟು ಆರು ಕೇಬಲ್‌ ಇರುವ ಡಕ್ಟ್‌ ಅಳವಡಿಸಿದ್ದು, ಈ ಪೈಕಿ ಮೂರು ಕೇಬಲ್‌ಗಳನ್ನು ಮುಕ್ತವಾಗಿಟ್ಟಿದೆ ಎಂದು ಮಾಹಿತಿ ನೀಡಿದರು.

ಆಕ್ಟ್ ಫೈಬರ್ ನೆಟ್ ಕಂಪನಿಯವರು ಹಿಂದೆ ಕೋವಿಡ್‌ ನಿರ್ವಹಣೆ ಮತ್ತು ಲಸಿಕೆ ನೀಡುವ ಸಂದರ್ಭದಲ್ಲೂ ಸರ್ಕಾರದೊಂದಿಗೆ ಕೈ ಜೋಡಿಸಿದ್ದರು. ಈಗ ಮಲ್ಲೇಶ್ವರ ವ್ಯಾಪ್ತಿಯಲ್ಲಿ ಎರಡು ಉದ್ಯಾನಗಳನ್ನು ಕಂಪನಿಯು ಅಭಿವೃದ್ಧಿ ಪಡಿಸಿದ್ದು, ಅವುಗಳನ್ನು ದತ್ತು ತೆಗೆದುಕೊಂಡಿದೆ. ಉದ್ಯಮಗಳಿಗೆ ಇಂತಹ ಸಮಾಜಮುಖಿ ಚಿಂತನೆಗಳು ಇರಬೇಕು ಎಂದು ಆಶಿಸಿದರು. ಕಾರ್ಯಕ್ರಮದಲ್ಲಿ ಕಂಪನಿಯ ಸಿಇಒ ಬಾಲ ಮಲ್ಲಾಡಿ, ಬಿಬಿಎಂಪಿ ಪಶ್ಚಿಮ ವಲಯದ ಆಯುಕ್ತ ಡಾ.ಆರ್ ಎಲ್‌ ದೀಪಕ್‌, ಡಿಸಿಪಿ ಡಿ.ದೇವರಾಜ್‌, ಬಿಬಿಎಂಪಿ ಜಂಟಿ ಆಯುಕ್ತ ಲೋಕನಾಥ ಮುಂತಾದವರು ಉಪಸ್ಥಿತರಿದ್ದರು.

ಇದನ್ನೂ ಓದಿ:ನಾಳೆ ಸಿಲಿಕಾನ್ ಸಿಟಿಗೆ ಮೋದಿ ಆಗಮನ: ಈ ಮಾರ್ಗದ ರಸ್ತೆಗಳಲ್ಲಿ ಸಂಚಾರ ನಿರ್ಬಂಧ

ABOUT THE AUTHOR

...view details