ಕರ್ನಾಟಕ

karnataka

ETV Bharat / state

ಮಹಾರಾಷ್ಟ್ರ ಚುನಾವಣಾ ಪ್ರಚಾರಕ್ಕೆ ಬಿಎಸ್​​ವೈ; ಫಡ್ನವೀಸ್ ಋಣ ತೀರಿಸಲು ಮಂದಾದ್ರ ಸಿಎಂ ? - ಮಹಾರಾಷ್ಟ್ರ ಸಿಎಂ ದೇವೇಂದ್ರ ಋಣ ತೀರಿಸಲು ಮುಂದಾದ ಸಿಎಂ

ಮಹಾರಾಷ್ಟ್ರದಲ್ಲಿ ವಿಧಾನಸಭೆ ಚುನಾವಣೆ ನಡೆಯುವ  ಹಿನ್ನೆಲೆ‌ಯಲ್ಲಿ ದೇವೇಂದ್ರ ಫಡ್ನವೀಸ್ ಪರ ಪ್ರಚಾರಕ್ಕೆ ಸಿಎಂ ಬಿ.ಎಸ್.ಯಡಿಯೂರಪ್ಪ‌ ಸಿದ್ದರಾಗಿದ್ದಾರೆ. ಸರ್ಕಾರ ರಚನೆಗೆ ಪರೋಕ್ಷ ಸಹಕಾರ ನೀಡಿದ್ದ ಮಹಾರಾಷ್ಟ್ರ ಸಿಎಂ ಋಣ ತೀರಿಸಲು ಮುಂದಾಗಿದ್ದಾರೆ.

ಮಹಾರಾಷ್ಟ್ರ ಚುನಾವಣಾ ಪ್ರಚಾರಕ್ಕೆ ಸಿದ್ಧರಾದ್ರು  ಬಿಎಸ್ವೈ; ಫಡ್ನವೀಸ್  ಋಣ ತೀರಿಸಲು ಮಂದಾದ್ರ ಸಿ,ಎಂ

By

Published : Oct 11, 2019, 11:36 PM IST

Updated : Oct 11, 2019, 11:58 PM IST

ಬೆಂಗಳೂರು: ಮಹಾರಾಷ್ಟ್ರದಲ್ಲಿ ವಿಧಾನಸಭೆ ಚುನಾವಣೆ ನಡೆಯುವ ಹಿನ್ನೆಲೆ‌ಯಲ್ಲಿ ದೇವೇಂದ್ರ ಫಡ್ನವೀಸ್ ಪರ ಪ್ರಚಾರಕ್ಕೆ ಸಿಎಂ ಬಿ.ಎಸ್. ಯಡಿಯೂರಪ್ಪ‌ ಸಿದ್ದರಾಗಿದ್ದಾರೆ.

ಮಹಾರಾಷ್ಟ್ರ ಚುನಾವಣಾ ಪ್ರಚಾರಕ್ಕೆ ಸಿದ್ಧರಾದ್ರು ಬಿಎಸ್ವೈ; ಫಡ್ನವೀಸ್ ಋಣ ತೀರಿಸಲು ಮಂದಾದ್ರ ಸಿ,ಎಂ

ಅಕ್ಟೋಬರ್ 15,16 ರಂದು ಮಹಾರಾಷ್ಟ್ರದಲ್ಲಿ ಸಿಎಂ ಬಿಎಸ್​​ವೈ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ‌ ನಡೆಸಲಿದ್ದಾರೆ. ಮಹಾರಾಷ್ಟ್ರದ 13 ಜಿಲ್ಲೆಗಳಲ್ಲಿ ಲಿಂಗಾಯತ ಮತದಾರರ ಪ್ರಾಬಲ್ಯವಿದ್ದು, ಈ 13 ಜಿಲ್ಲೆಗಳಲ್ಲಿ ಲಿಂಗಾಯತರೇ ನಿರ್ಣಾಯಕರು.1.20 ಕೋಟಿ ಲಿಂಗಾಯತ ಮತದಾರರು ಮಹಾರಾಷ್ಟ್ರದಲ್ಲಿದ್ದಾರೆ. ಲಿಂಗಾಯತ ಪ್ರಾಬಲ್ಯ ಇರೋ ಜಿಲ್ಲೆಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲಿದ್ದಾರೆ.

ಮಹಾರಾಷ್ಟ್ರ ಸಿಎಂ ದೇವೇಂದ್ರ ಋಣ ತೀರಿಸಲು ಮುಂದಾದ ಸಿಎಂ ಬಿಎಸ್ವೈ?
ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಯಾಗುವಾಗ, ಅನರ್ಹ ಶಾಸಕರಿಗೆ ಮುಂಬೈನಲ್ಲಿ ಆಶ್ರಯ ಕೊಟ್ಟಿದ್ದ ದೇವೇಂದ್ರ ಫಡ್ನವಿಸ್ ಪೊಲೀಸ್ ಭದ್ರತೆ ನೀಡಿ ಕೈ ನಾಯಕರ ಸಂಪರ್ಕಕ್ಕೆ ಅನರ್ಹ ಶಾಸಕರು ಸಿಗದಂತೆ ನೋಡಿಕೊಂಡಿದ್ದರು. ಇದೀಗ ಅವರ ಉಪಕಾರ ತೀರಿಸಲು ಮುಂದಾಗಿರುವ ಯಡಿಯೂರಪ್ಪ ಮಹಾರಾಷ್ಟ್ರ ಚುನಾವಣೆಯ ಪ್ರಚಾರಕ್ಕಾಗಿ ತೆರಳುತ್ತಿದ್ದಾರೆ.
ಮಹಾರಾಷ್ಟ್ರ ಚು‌ನಾವಣೆಗಾಗಿಅಧಿವೇಶನ ಮೊಟಕು?
ಮಹಾರಾಷ್ಟ್ರ ಚು‌ನಾವಣೆಗಾಗಿ ರಾಜ್ಯದಲ್ಲಿ ವಿಧಾನಸಭೆ ಅಧಿವೇಶನ ಮೊಟಕುಗೊಳಿಸಲಾಯಿತಾ? ಎನ್ನುವ ಮಾತುಗಳು ಕೇಳಿಬರುತ್ತಿವೆ. ಪ್ರತಿಪಕ್ಷಗಳು ಎಷ್ಟೇ ಒತ್ತಡ ಹಾಕಿದ್ರೂ ಸದನ ಮುಂದುವರೆಸುವುದಕ್ಕೆ ಒಪ್ಪದ ಬಿಎಸ್ವೈ ಬೇರೆ ರಾಜ್ಯಕ್ಕಾಗಿ ತಮ್ಮ ರಾಜ್ಯದ ಸಮಸ್ಯೆಗಳ ಬಗ್ಗೆ ‌ನಿರ್ಲಕ್ಷ್ಯ ಮಾಡ್ತಿದ್ದಾರಾ ಎನ್ನುವ ಪ್ರಶ್ನೆ ಮೂಡಿಸಿದೆ.
Last Updated : Oct 11, 2019, 11:58 PM IST

ABOUT THE AUTHOR

...view details