ಬೆಂಗಳೂರು:ಕೆಆರ್‌ಪುರಂ ಕ್ಷೇತ್ರದಲ್ಲಿ ಭರ್ಜರಿ ಪ್ರಚಾರ ನಡೆಸಿದ ಬಿಜೆಪಿ ಅಭ್ಯರ್ಥಿ ಬೈರತಿ ಬಸವರಾಜುಗೆ ಕಾರ್ಯಕರ್ತರು 1 ಸಾವಿರ ಕೆಜಿ ತೂಕದ ಹಣ್ಣಿನ ಹಾರ ಹಾಕಿದ್ದಾರೆ.
ಬೈರತಿ ಭರ್ಜರಿ ಪ್ರಚಾರ.. ಸಾವಿರ ಕೆಜಿ ತೂಕದ ಹಣ್ಣಿನಹಾರ ಹಾಕಿದ ಕಾರ್ಯಕರ್ತರು.. - ಬೈರತಿ ಬಸವರಾಜು ಲೇಟೆಸ್ಟ್ ನ್ಯೂಸ್
ಕೆಆರ್‌ಪುರಂ ಬಿಜೆಪಿ ಅಭ್ಯರ್ಥಿ ಬೈರತಿ ಬಸವರಾಜು ಅವರಿಗೆ ಕಾರ್ಯಕರ್ತರು 1 ಸಾವಿರ ಕೆಜಿ ತೂಕದ ಹಣ್ಣಿನಹಾರ ಹಾಕಿದ್ದಾರೆ.

ಬೈರತಿ ಬಸವರಾಜು ಹೊರಮಾವು ಬಳಿಯಿಂದ ಭರ್ಜರಿ ಪ್ರಚಾರ ಆರಂಭಿಸಿದ್ದಾರೆ. ಈ ವೇಳೆ ಬಿಜೆಪಿ ಕಾರ್ಯಕರ್ತರು 1 ಸಾವಿರ ಕೆಜಿ ತೂಕದ ಮೂಸಂಬಿ ಮತ್ತು ಗ್ರೀನ್ ಆ್ಯಪಲ್ ಹಾರ ಹಾಕಿ ಜೈಕಾರ ಕೂಗಿದ್ದಾರೆ. ಅಲ್ಲದೆ ಬಸವರಾಜ್ ಮೇಲೆ ಹೂವಿನ ಮಳೆ ಸುರಿಸಿದ್ದಾರೆ.
ಇದೇ ವೇಳೆ ಮಾತನಾಡಿದ ಬೈರತಿ ಬಸವರಾಜು ಅವರು, ಈ ಬಾರಿ ನೂರಕ್ಕೆ ನೂರರಷ್ಟು ನಾನು ಗೆದ್ದೇ ಗೆಲ್ಲುತ್ತೇನೆ. ಸಿದ್ದರಾಮಯ್ಯ ಅಲ್ಲ ಯಾರೇ ಬರಲಿ, ನಾನು ಅವರ ಬಗ್ಗೆ ಏನೂ ಮಾತನಾಡುವುದಿಲ್ಲ. ಜನರೇ ಡಿ.9ಕ್ಕೆ ಉತ್ತರ ಕೊಡುತ್ತಾರೆ. ಯಡಿಯೂರಪ್ಪನವರು ಈಗಾಗಲೇ ಐದು ಜನ ಕುರುಬರು ಮಂತ್ರಿ ಆಗುತ್ತಾರೆ ಎಂದು ಹೇಳಿದ್ದಾರೆ. ಜನ ನಮ್ಮ ಕೈ ಹಿಡೀತಾರೆ ಎಂಬ ಭರವಸೆ ಇದೆ ಎಂದಿದ್ದಾರೆ.