ಲಾಕ್ಡೌನ್ ನಡ್ವೆ ರಾಜಾರೋಷವಾಗಿ ಬೈಕ್ ವ್ಹೀಲಿಂಗ್: ಹೈವೆಯಲ್ಲಿ ಭಂಡರ ಹುಚ್ಚು ಪೌರುಷ - byke wheeling
ಕೊರೊನಾ ವೈರಸ್ ನಿಯಂತ್ರಣಕ್ಕಾಗಿ ಜಾರಿಗೆ ತಂದ ಲಾಕ್ಡೌನ್ ಧಿಕ್ಕರಿಸಿ ಬೆಂಗಳೂರಿನ ಖಾಲಿ ರಸ್ತೆಗಳಲ್ಲಿ ಯುವಕರು ಬೈಕ್ ವ್ಹೀಲಿಂಗ್ ಮಾಡಿ ದೃಶ್ಯಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದಾರೆ.
ಬೈಕ್ ವ್ಹೀಲಿಂಗ್
ಬೆಂಗಳೂರು:ರಾಜಧಾನಿಯಲ್ಲಿ ಲಾಕ್ಡೌನ್ಗೆ ಕ್ಯಾರೇ ಎನ್ನದ ಯುವಕರು ಬೈಕ್ ವ್ಹೀಲಿಂಗ್ ಮಾಡಿ ಪುಂಡಾಟ ಮೆರೆದಿದ್ದಾರೆ.
ಬೈಕ್ ವ್ಹೀಲಿಂಗ್ ಹಾವಳಿಗೆ ಕಡಿವಾಣ ಹಾಕಲು ರಸ್ತೆಗಳಲ್ಲಿ ಬ್ಯಾರಿಕೇಡ್ ಹಾಕಲಾಗಿದೆ. ಆದರೆ ಇದನ್ನು ಪರಿಗಣನೆಗೆ ತೆಗೆದುಕೊಳ್ಳದ ಈ ಯುವಕರು ರಾಜಾರೋಷವಾಗಿ ವೀಲಿಂಗ್ ಮಾಡಿದ್ದಾರೆ.
ಚಿಕ್ಕಬಾಣಾವರದ ತಾಯೆಲ್ ಪಾಷಾ ಮತ್ತಿತರರು ಕಾನೂನು ಉಲ್ಲಂಘಿಸಿ ಬೆಂಗಳೂರು-ತುಮಕೂರು ರಾಷ್ಟ್ರೀಯ ಹೆದ್ದಾರಿಗಳಲ್ಲಿ ರಾತ್ರಿ ವೇಳೆ ಪುಂಡಾಟ ನಡೆಸಿದ್ದಾರೆ.
ಚಿಕ್ಕಬಾಣಾವಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ವಿಡಿಯೋ ಪರಿಶೀಲಿಸಿ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ.