ಆನೇಕಲ್:ಕಾವೇರಿ ನದಿ ಉಳಿವಿಗಾಗಿ ಆರಂಭವಾಗಿದ್ದ ಬೈಕ್ ಜಾಥಾಗೆ ಇಂದು ಕರ್ನಾಟಕದಿಂದ ಬೀಳ್ಕೊಡುಗೆ ಕಾರ್ಯಕ್ರಮ ನೆರವೇರಿತು.
ತಮಿಳುನಾಡಿನತ್ತ ಹೊರಟ ಕಾವೇರಿ ಕೂಗು... ರಾಜ್ಯದಿಂದ ಸದ್ಗುರು ಟೀಂಗೆ ಬೀಳ್ಕೊಡುಗೆ - ಜಗ್ಗಿ ವಾಸುದೇವ್
ಕಾವೇರಿ ನದಿ ಉಳಿವಿಗಾಗಿ ಆರಂಭವಾಗಿದ್ದ ಬೈಕ್ ರ್ಯಾಲಿಗೆ ಇಂದು ಕರ್ನಾಟಕದಿಂದ ಬೀಳ್ಕೊಡುಗೆ ಕಾರ್ಯಕ್ರಮ ನೆರವೇರಿತು.
ಕಾವೇರಿ ನದಿ ಉಳಿವಿಗಾಗಿ ಇಶಾ ಫೌಂಡೇಶನ್ನ ಜಗ್ಗಿ ವಾಸುದೇವ್ ನೆಡಸುತ್ತಿರುವ ಕಾವೇರಿ ಕೂಗು ಇಂದು ಕರ್ನಾಟಕ ದಾಟಿ ತಮಿಳುನಾಡು ಪ್ರವೇಶಿಸಿತು. ಈ ಸಂದರ್ಭದಲ್ಲಿ ವಿಎಚ್ಪಿ ಬಜರಂಗದಳ ಹಾಗೂ ಹಿಂದೂ ಸಂಘಟನೆಗಳ ಕಾರ್ಯಕರ್ತರು ಬೈಕ್ ರ್ಯಾಲಿಯನ್ನು ಬೀಳ್ಕೊಟ್ಟರು. ಇತ್ತ ತಮಿಳುನಾಡಿನ ನಾಗರಿಕರು ಹಾಗೂ ಕಾವೇರಿ ನದಿ ಪಾತ್ರದ ರೈತರು ಬೈಕ್ ರ್ಯಾಲಿಗೆ ಅದ್ಧೂರಿ ಸ್ವಾಗತ ಕೋರಿದರು.
ತಲಕಾವೇರಿಯಿಂದ ಆರಂಭವಾಗಿರುವ ಕಾವೇರಿ ಕೂಗು ಎಂಬ ಬೈಕ್ ರ್ಯಾಲಿ ಇಂದು ಕರ್ನಾಟಕ ತಮಿಳುನಾಡು ಗಡಿ ಆನೇಕಲ್ ತಾಲೂಕಿನ ಅತ್ತಿಬೆಲೆಗೆ ಆಗಮಿಸಿದ್ದು, ಈ ಸಂದರ್ಭದಲ್ಲಿ ಆನೇಕಲ್ ತಾಲೂಕಿನ ಹಿಂದೂ ಸಂಘಟನೆಗಳ ಕಾರ್ಯಕರ್ತರು ತಮಿಳುನಾಡಿಗೆ ಬೀಳ್ಕೊಟ್ಟರು. ಇನ್ನು ತಮಿಳುನಾಡು ಗಡಿಯಲ್ಲಿ ಸಹಸ್ರಾರು ಕಾವೇರಿ ನದಿ ಪಾತ್ರದ ರೈತರು ನಾಗರೀಕರು ಜಮಾವಣೆಗೊಂಡು ತಮ್ಮ ರಾಜ್ಯಕ್ಕೆ ರ್ಯಾಲಿಯನ್ನು ಸ್ವಾಗತಿಸಿದರು.ಈ ವೇಳೆ ಮಾತನಾಡಿದ ಜಗ್ಗಿ ವಾಸುದೇವ್ ಜಾತಿ ಮತ ಭಾಷೆ ರಾಜ್ಯ ಯಾವುದೇ ಇರಲಿ ಕಾವೇರಿ ನೀರು ಕುಡಿಯುವವರು ಎಲ್ಲರೂ ಒಂದೇ ಕಾವೇರಿ ನದಿ ಉಳಿವಿಗಾಗಿ ಎಲ್ಲರೂ ಒಂದಾಗಬೇಕು ಎಂದರು.