ಬೆಂಗಳೂರು: ರಾಜ್ಯ ವಿಧಾನಸಭೆಯ 15 ಕ್ಷೇತ್ರಗಳಿಗೆ ನಡೆಯುವ ಉಪಚುನಾವಣೆಗೆ ನಾಮಪತ್ರ ಸಲ್ಲಿಕೆಗೆ ಕಡೆಯದಿನವಾದ ಸೋಮವಾರದವರೆಗೆ ಒಟ್ಟು 248 ಅಭ್ಯರ್ಥಿಗಳಿಂದ ಬರೋಬ್ಬರಿ 353 ನಾಮಪತ್ರ ಸಲ್ಲಿಕೆಯಾಗಿವೆ.
ನಾಮಪತ್ರ ಸಲ್ಲಿಕೆಗೆ ಕಡೆಯ ದಿನವಾದ ನ. 18 ಸೋಮವಾರದಂದು ಒಂದೇ ದಿನ 15 ಕ್ಷೇತ್ರಗಳಲ್ಲಿ ಒಟ್ಟು 152 ಅಭ್ಯರ್ಥಿಗಳಿಂದ 237 ನಾಮಪತ್ರಗಳು ಸಲ್ಲಿಕೆಯಾಗಿದ್ದು ದಾಖಲೆಯಾಗಿದೆ. ಒಂದೇ ದಿನ ರಾಷ್ಟ್ರೀಯ ಪಕ್ಷಗಳು, ಪ್ರಾದೇಶಿಕ ಪಕ್ಷಗಳ ಅಭ್ಯರ್ಥಿಗಳು ಸಾಲು ಸಾಲಾಗಿ ನಾಮಪತ್ರ ಸಲ್ಲಿಕೆಗೆ ಮುಂದಾದದರು. ಟಿಕೆಟ್ ಘೋಷಣೆಗೆ ವಿಳಂಬ ಮಾಡಿದ್ದು ಹಾಗೂ ಕಡೆಯ ಕ್ಷಣದಲ್ಲಿ ಪಕ್ಷೇತರರು ಹಾಗೂ ಈಗಾಗಲೇ ಸಲ್ಲಿಸಿದ ಅಭ್ಯರ್ಥಿಗಳು ಇನ್ನೊಮ್ಮೆ ನಾಮಪತ್ರ ಸಲ್ಲಿಸಿದ್ದು, ಈ ಭಾರಿ ಪ್ರಮಾಣದ ನಾಮಪತ್ರ ಸಲ್ಲಿಕೆಗೆ ಕಾರಣವಾಯಿತು.