ಬೆಂಗಳೂರು: ಬ್ಯಾಡರಹಳ್ಳಿ ಪೊಲೀಸ್ ಠಾಣೆ ಬೆಂಗಳೂರು ನಗರ ವ್ಯಾಪ್ತಿಗೆ ಇಂದು ಅಧಿಕೃತವಾಗಿ ಸೇರ್ಪಡೆಗೊಂಡಿದೆ.
ಬ್ಯಾಡರಹಳ್ಳಿ ಪೊಲೀಸ್ ಠಾಣೆ ಬೆಂಗಳೂರು ವ್ಯಾಪ್ತಿಗೆ ಅಧಿಕೃತ ಸೇರ್ಪಡೆ - ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್
ರಾಮನಗರ ಎಸ್ಪಿ ವ್ಯಾಪ್ತಿಯಲ್ಲಿದ್ದ ಬ್ಯಾಡರಹಳ್ಳಿ ಪೊಲೀಸ್ ಠಾಣೆ, ನಗರ ಪೊಲೀಸ್ ವ್ಯಾಪ್ತಿಗೆ ಅಧಿಕೃತ ಸೇರ್ಪಡೆಯಾಗಿದೆ. ಈ ಹಿನ್ನೆಲೆಯಲ್ಲಿ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಬ್ಯಾಡರಹಳ್ಳಿ ಪೊಲೀಸ್ ಠಾಣೆಗೆ ತೆರಳಿ ಬ್ಯಾಡರಹಳ್ಳಿ ಪೊಲೀಸ್ ಠಾಣೆಯನ್ನ ಪಶ್ಚಿಮ ವಿಭಾಗಕ್ಕೆ ಸೇರಿಸಿದ್ದಾರೆ.
![ಬ್ಯಾಡರಹಳ್ಳಿ ಪೊಲೀಸ್ ಠಾಣೆ ಬೆಂಗಳೂರು ವ್ಯಾಪ್ತಿಗೆ ಅಧಿಕೃತ ಸೇರ್ಪಡೆ Bangalore jurisdiction](https://etvbharatimages.akamaized.net/etvbharat/prod-images/768-512-5810259-thumbnail-3x2-mng.jpg)
ಇದುವರೆಗೂ ರಾಮನಗರ ಎಸ್ಪಿ ವ್ಯಾಪ್ತಿಯಲ್ಲಿದ್ದ ಬ್ಯಾಡರಹಳ್ಳಿ ಪೊಲೀಸ್ ಠಾಣೆ, ನಗರ ಪೊಲೀಸ್ ವ್ಯಾಪ್ತಿಗೆ ಅಧಿಕೃತ ಸೇರ್ಪಡೆಯಾಗಿದೆ. ಹೀಗಾಗಿ ಇಂದು ಅಧಿಕೃತವಾಗಿ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಬ್ಯಾಡರಹಳ್ಳಿ ಪೊಲೀಸ್ ಠಾಣೆಗೆ ತೆರಳಿ ಬ್ಯಾಡರಹಳ್ಳಿ ಪೊಲೀಸ್ ಠಾಣೆಯನ್ನ ಪಶ್ಚಿಮ ವಿಭಾಗಕ್ಕೆ ಸೇರಿಸಿದ್ದಾರೆ.
ಬ್ಯಾಡರಹಳ್ಳಿ ಪೊಲೀಸ್ ಠಾಣೆ ನಗರದ ವ್ಯಾಪ್ತಿಯಲ್ಲಿದ್ದು ರಾಮನಗರ ಜಿಲ್ಲೆಗೆ ಬಹಳ ದೂರವಾಗುತ್ತಿತ್ತು. ಯಾವುದೇ ಪ್ರಕರಣ ಪತ್ತೆ ಮಾಡಿದಾಗ ಹಿರಿಯ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಲು ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ಸರ್ಕಾರಕ್ಕೆ ಈ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಹೀಗಾಗಿ ಇಂದು ಅಧಿಕೃತವಾಗಿ ಸೇರ್ಪಡೆಗೊಂಡಿದೆ.