ಕರ್ನಾಟಕ

karnataka

ETV Bharat / state

ಸ್ಥಾನಮಾನದ ಆಸೆ ಇಟ್ಟುಕೊಂಡು ಕೆಲಸ‌ ಮಾಡಲು ಇಷ್ಟ ಪಡಲ್ಲ .. ಬಿ ವೈ ವಿಜಯೇಂದ್ರ - ರಾಜ್ಯ ಬಿಜೆಪಿ ಉಪಾಧ್ಯಕ್ಷರಾಗಿ ಬಿವೈ ವಿಜಯೇಂದ್ರ ಆಯ್ಕೆ

ಪಕ್ಷದ ಶಿಸ್ತಿನ ಸಿಪಾಯಿ ಆಗಿ ಬರುವ ದಿನಗಳಲ್ಲಿ ಪಕ್ಷದ ಸಂಘಟನೆ ದೃಷ್ಟಿಯಿಂದ ರಾಜ್ಯಾದ್ಯಂತ ಪ್ರವಾಸ ಮಾಡುವ ಕೆಲಸ ಮಾಡುತ್ತೇನೆ ಎಂದು ಇದೇ ವೇಳೆ ತಿಳಿಸಿದರು..

by-vijayendra-appointed-as-state-bjp-voice-president
ಬಿವೈ ವಿಜಯೇಂದ್ರ

By

Published : Aug 1, 2020, 3:33 PM IST

ಬೆಂಗಳೂರು :ಸ್ಥಾನಮಾನದ ಆಸೆ ಇಟ್ಟುಕೊಂಡು ನಾನು ಯಾವುದೇ ಕೆಲಸ ಮಾಡಲು ಇಷ್ಟ ಪಡಲ್ಲ‌ ಎಂದು ರಾಜ್ಯ ಬಿಜೆಪಿ ನೂತನ ಉಪಾಧ್ಯಕ್ಷ ಬಿ ವೈ ವಿಜಯೇಂದ್ರ ಸ್ಪಷ್ಟಪಡಿಸಿದರು.

ಮಲ್ಲೇಶ್ವರಂ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಪಕ್ಷ ನನಗೆ ಏನೇ ಜವಾಬ್ದಾರಿ ಕೊಟ್ಟರು ಅದನ್ನು ಯಶಸ್ವಿಯಾಗಿ ನಿಭಾಯಿಸುವ ಶಕ್ತಿ, ಇಚ್ಛಾಶಕ್ತಿ ಹಿಡಿದುಕೊಂಡು ಕೆಲಸ‌ ಮಾಡುವ ಆಸೆ ನನಗಿದೆ. ಬರುವ ದಿನಗಳಲ್ಲಿ ಕೆಲಸ‌ ಮಾಡಿ ತೋರಿಸುತ್ತೇನೆ.‌ ಪ್ರಧಾನ ಕಾರ್ಯದರ್ಶಿ ಅಥವಾ ಬೇರೆ ಯಾವುದೇ ಸ್ಥಾನಮಾನ ಸಿಗಬೇಕು ಎಂಬ ಆಸೆ ಇಟ್ಟುಕೊಂಡಿಲ್ಲ. ಪಕ್ಷ ಕೊಟ್ಟ ಜವಾಬ್ದಾರಿಯನ್ನು ಬಹಳ ಜವಾಬ್ದಾರಿಯುತವಾಗಿ ನಿಭಾಯಿಸುತ್ತೇನೆ ಎಂದು ತಿಳಿಸಿದರು.

ಸ್ಥಾನಮಾನದ ಆಸೆ ಇಟ್ಟುಕೊಂಡು ಕೆಲಸ‌ ಮಾಡಲ್ಲ

ಈಗ ಪಕ್ಷ ರಾಜ್ಯ ಉಪಾಧ್ಯಕ್ಷ ಸ್ಥಾನ ನೀಡಿದೆ. ಪಕ್ಷ ಕೊಟ್ಟ ಜವಾಬ್ದಾರಿಯನ್ನು ನಿಭಾಯಿಸುತ್ತೇನೆ. ಬಿಜೆಪಿಯ ಉಪಾಧ್ಯಕ್ಷರಾಗಿ ಘೋಷಣೆ ಮಾಡಿರುವುದು ನನಗೆ ಸಂತೋಷ ತಂದಿದೆ. ನನ್ನನ್ನು ಗುರಿತಿಸಿ ಹೊಸ ಜವಾಬ್ದಾರಿ ನೀಡಿರುವುದಕ್ಕೆ ಎಲ್ಲ ರಾಷ್ಟ್ರೀಯ ಹಿರಿಯ ನಾಯಕರು, ಬಿ ಎಲ್‌ ಸಂತೋಷ್, ನಳಿನ್ ಕುಮಾರ್ ಕಟೀಲ್​​ಗೆ ಅಭಿನಂದಿಸುತ್ತೇನೆ ಎಂದರು.

ಪಕ್ಷದ ಶಿಸ್ತಿನ ಸಿಪಾಯಿ ಆಗಿ ಬರುವ ದಿನಗಳಲ್ಲಿ ಪಕ್ಷದ ಸಂಘಟನೆ ದೃಷ್ಟಿಯಿಂದ ರಾಜ್ಯಾದ್ಯಂತ ಪ್ರವಾಸ ಮಾಡುವ ಕೆಲಸ ಮಾಡುತ್ತೇನೆ ಎಂದು ಇದೇ ವೇಳೆ ತಿಳಿಸಿದರು. ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಆಗುತ್ತಾ ಅನ್ನೋ ಪ್ರಶ್ನೆಗೆ ಪ್ರತಿಕ್ರಿಯಿಸುತ್ತಾ, ಆ ವಿಚಾರದ ಬಗ್ಗೆ ಮುಖ್ಯಮಂತ್ರಿಗಳನ್ನೇ ಕೇಳಿ ಎಂದು ತಿಳಿಸಿದರು.

ABOUT THE AUTHOR

...view details