ಕರ್ನಾಟಕ

karnataka

ETV Bharat / state

2020ರ ಮಾರ್ಚ್ ವೇಳೆಗೆ ಪೊಲೀಸ್​ ಇಲಾಖೆಯಲ್ಲಿರುವ ಎಲ್ಲಾ ಖಾಲಿ ಹುದ್ದೆ ಭರ್ತಿ - Vacancy in the Police Department

ರಾಜ್ಯದ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನ 2019ರ ನವೆಂಬರ್‌ನಿಂದ 2020ರ ಮಾರ್ಚ್ ವೇಳೆಗೆ ಪೂರ್ಣಗೊಳಿಸುವುದಾಗಿ ಹೈಕೋರ್ಟ್‌ಗೆ ಮಾಹಿತಿ ನೀಡಿದೆ.

ಕರ್ನಾಟಕ ಪೊಲೀಸ್​ ಇಲಾಖೆ ,  By March 2020, all vacancies in the Police Department will be filled
ಕರ್ನಾಟಕ ಪೊಲೀಸ್​ ಇಲಾಖೆ

By

Published : Dec 13, 2019, 2:50 AM IST

ಬೆಂಗಳೂರು: ಖಾಲಿ ಇರುವ ಪೊಲೀಸ್ ಹುದ್ದೆಗಳ ಭರ್ತಿ ವಿಚಾರಕ್ಕೆ ಸಂಬಂಧಿಸಿಂತೆ ಆದಷ್ಟು ಬೇಗ ಹುದ್ದೆಗಳನ್ನು ಭರ್ತಿ ಮಾಡಲಾಗುವುದು ಎಂದು ರಾಜ್ಯ ಸರ್ಕಾರ ಹೈಕೋರ್ಟ್​ಗೆ ಪ್ರಮಾಣ ಪತ್ರ ಸಲ್ಲಿಕೆ ಮಾಡಿದೆ.

ರಾಜ್ಯದ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನ 2019ರ ನವೆಂಬರ್‌ನಿಂದ 2020ರ ಮಾರ್ಚ್ ವೇಳೆಗೆ ಪೂರ್ಣಗೊಳಿಸುವುದಾಗಿ ಹೈಕೋರ್ಟ್‌ಗೆ ಮಾಹಿತಿ ನೀಡಿದೆ. ಈ ಸಂಬಂಧ ಸುಪ್ರೀಂಕೋರ್ಟ್ ನಿರ್ದೇಶನದಂತೆ ಹೈಕೋರ್ಟ್ ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ, ನ್ಯಾಯಮೂರ್ತಿ ರವಿ ಮಳಿಮಠ ನೇತತ್ವದ ವಿಭಾಗೀಯ ನ್ಯಾಯಪೀಠದ ಮುಂದೆ ನಡೆಯಿತು.

ರಾಜ್ಯದಲ್ಲಿ ಖಾಲಿ ಇರುವ ವಿವಿಧ ಪೊಲೀಸ್ ಹುದ್ದೆಗಳ ಭರ್ತಿಗೆ ನಿಗದಿಪಡಿಸಿದ ವಿವರವನ್ನ ಸರ್ಕಾರ ಪ್ರಮಾಣ ಪತ್ರ ‌ಮೂಲಕ‌ ನ್ಯಾಯಪೀಠಕ್ಕೆ ಹಾಜರುಪಡಿಸಿದೆ. ಡಿವೈಎಸ್ಪಿ, ಎಎಸ್‌ಐ, 2,868 ಹೆಡ್‌ಕಾನ್ಸ್‌ಟೇಬಲ್ಸ್​ ಹಾಗೂ 16,838 ಪಿಎಸ್‌ಐ ಹುದ್ದೆಯನ್ನು 2020ರ ಮಾರ್ಚ್ ವೇಳೆಗೆ ಭರ್ತಿ‌ಮಾಡಲಾಗುವುದೆಂದು ಉಲ್ಲೇಖಿಸಿದೆ.

ABOUT THE AUTHOR

...view details