ಬೆಂಗಳೂರು: ಉಪ ಚುನಾವಣೆಯ ಮತ ಎಣಿಕೆ ನಾಳೆ ನಡೆಯಲಿದ್ದು, ಹೀಗಾಗಿ ಬೆಂಗಳೂರಿನ 4 ಕ್ಷೇತ್ರಗಳಲ್ಲಿ ಮತ ಎಣಿಕೆ ಕೇಂದ್ರದ ಸುತ್ತ ಆಯಾ ವಲಯದ ಡಿಸಿಪಿಗಳು ಭದ್ರತಾ ಪರಿಶೀಲನೆ ನಡೆಸಿದ್ದಾರೆ.
ಉಪ ಚುನಾವಣೆ ಮತ ಎಣಿಕೆ ಹಿನ್ನೆಲೆ ಡಿಸಿಪಿಗಳಿಂದ ಭದ್ರತೆ ಪರಿಶೀಲನೆ - ಡಿಸಿಪಿಗಳಿಂದ ಭದ್ರತೆ ಪರಿಶೀಲನೆ
ಉಪ ಚುನಾವಣೆಯ ಮತ ಎಣಿಕೆ ನಾಳೆ ನಡೆಯಲಿದೆ. ಹೀಗಾಗಿ ಬೆಂಗಳೂರಿನ 4 ಕ್ಷೇತ್ರಗಳ ಮತ ಎಣಿಕೆ ಕೇಂದ್ರದ ಸುತ್ತಮುತ್ತ ಆಯಾ ವಲಯದ ಡಿಸಿಪಿಗಳು ಭದ್ರತೆಯನ್ನು ಪರಿಶೀಲಿಸಿದ್ದಾರೆ.
ಶಿವಾಜಿನಗರದ ಮೌಂಟ್ ಕಾರ್ಮೆಲ್, ಯಶವಂತಪುರದ ಕೆಂಗೇರಿಯ ಆರ್. ವಿ. ಕಾಲೇಜು, ಮಹಾಲಕ್ಷ್ಮಿ ಲೇಔಟ್ ಮತ್ತು ಕೆ ಆರ್ ಪುರದ ಸೈಂಟ್ ಜೋಸೆಫ್ ಕಾಲೇಜು, ಹೊಸಕೋಟೆಯ ದೇವನಹಳ್ಳಿಯ ಆಕಾಶ್ ಇಂಟರ್ ನ್ಯಾಷನಲ್ ಕಾಲೇಜುಗಳಲ್ಲಿ ಮತ ಎಣಿಕೆ ನಡೆಯಲಿದೆ. ಹೀಗಾಗಿ ನಗರ ಪೊಲೀಸ್ ಆಯುಕ್ತರ ಸೂಚನೆಯಂತೆ ಇಂದು ಕ್ಷೇತ್ರಗಳ ಇವಿಎಂ ಇಟ್ಟಿರುವ ಸ್ಥಳಗಳಲ್ಲಿ ಕೇಂದ್ರ ವಿಭಾಗ ಡಿಸಿಪಿ ಚೇತನ್ ಸಿಂಗ್ ರಾಥೋರ್, ಉತ್ತರ ವಿಭಾಗ ಡಿಸಿಪಿ ಶಶಿಕುಮಾರ್, ಪೂರ್ವ ವಿಭಾಗ ಡಿಸಿಪಿ ಶರಣಪ್ಪ ಭದ್ರತೆಯನ್ನ ಪರಿಶೀಲಿಸಿದ್ದಾರೆ.
ಹಿರಿಯ ಪೊಲೀಸ್ ಅಧಿಕಾರಿಗಳು ಸೇರಿದಂತೆ ಒಟ್ಟು 1300 ಮಂದಿಯಿದ್ದು, ಒಂದೊಂದು ಕ್ಷೇತ್ರದ ಮತ ಎಣಿಕೆ ಕೇಂದ್ರದಲ್ಲಿ ಒಟ್ಟು 80 ಪೊಲೀಸ್ ಅಧಿಕಾರಿಗಳು, 600 ಪಿಎಸ್ ಐ, ಕಾನ್ಸ್ಟೇಬಲ್, ಹೆಡ್ಕಾನ್ಸ್ಟೇಬಲ್ , ಪ್ಯಾರಾಮಿಲಿಟರಿ, ಕೆಎಸ್ಆರ್ಪಿ ತುಕಡಿಯನ್ನ ನಿಯೋಜಿಸಲಾಗಿದೆ. ಆಯಾ ಕ್ಷೇತ್ರಗಳಿಂದ ಬರುವ ಜನರ ವಾಹನಗಳ ಪಾರ್ಕಿಂಗ್ಗೆ ಸ್ಥಳೀಯ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದ್ದು, ಮತ ಎಣಿಕೆ ಕೇಂದ್ರದ ಸುತ್ತಲೂ 144 ಸೆಕ್ಷನ್ ಜಾರಿಯಲ್ಲಿರುತ್ತೆ. ಹಾಗೆ ಪಾಸ್ ಹೊಂದಿರೊ ಏಜೆಂಟ್ಗಳು ಮತ್ತು ಚುನಾವಣಾ ಸಿಬ್ಬಂದಿಗೆ ಮಾತ್ರ ಪ್ರವೇಶ ಕಲ್ಪಿಸಲಾಗಿದೆ.