ಕರ್ನಾಟಕ

karnataka

ETV Bharat / state

ಉಪ ಚುನಾವಣೆ: ಆರ್​ಆರ್ ನಗರ ಮತಗಟ್ಟೆಗಳ ಬದಲಾವಣೆ - ಉಪ ಚುನಾವಣೆ 2020,

ಉಪ ಚುನಾವಣೆ ಕಾವು ಜೋರಾಗಿದೆ. ಆರ್​ಆರ್ ನಗರ ಮತಗಟ್ಟೆಗಳು ಬದಲಾವಣೆಯಾಗಿವೆ ಎಂದು ಬಿಬಿಎಂಪಿ ಆಯುಕ್ತರು ತಿಳಿಸಿದ್ದಾರೆ.

RR Nagar election booth, RR Nagar election booth is change, RR Nagar election booth news, By election, By election 2020, By election 2020 news, ಆರ್​ಆರ್ ನಗರ ಮತಗಟ್ಟೆಗಳ ಬದಲಾವಣೆ, ಆರ್​ಆರ್ ನಗರ ಮತಗಟ್ಟೆಗಳ ಬದಲಾವಣೆ ಸುದ್ದಿ, ಉಪ ಚುನಾವಣೆ, ಉಪ ಚುನಾವಣೆ 2020, ಉಪ ಚುನಾವಣೆ 2020 ಸುದ್ದಿ,
ಆರ್​ಆರ್ ನಗರ ಮತಗಟ್ಟೆಗಳ ಬದಲಾವಣೆ

By

Published : Oct 6, 2020, 4:51 PM IST

ಬೆಂಗಳೂರು:ಬಿಬಿಎಂಪಿ ವ್ಯಾಪ್ತಿಯ ರಾಜರಾಜೇಶ್ವರಿ ನಗರದ ಉಪಚುನಾವಣೆ ನವೆಂಬರ್ 3 ರಂದು ನಡೆಯಲಿದೆ. ಈ ಹಿನ್ನೆಲೆ ಚುನಾವಣಾ ಸಿದ್ಧತೆ ನಡೆಸಲು, ಬಸವೇಶ್ವರ ನಗರ ಅಂಬೇಡ್ಕರ್ ಕ್ರೀಡಾಂಗಣದಲ್ಲಿರುವ ಸ್ಟ್ರಾಂಗ್ ರೂಂಗೆ ಬಿಬಿಎಂಪಿ ಆಯುಕ್ತ ಎನ್​. ಮಂಜುನಾಥ್​ ಪ್ರಸಾದ್​ ಭೇಟಿ ನೀಡಿ, ಇವಿಎಮ್, ವಿವಿಪ್ಯಾಟ್ ಯಂತ್ರಗಳ ಪರಿಶೀಲನೆ ನಡೆಸಿದರು.

ಆರ್​ಆರ್ ನಗರ ಮತಗಟ್ಟೆಗಳ ಬದಲಾವಣೆ

ಬಳಿಕ ಮಾತನಾಡಿದ ಆಯುಕ್ತರು, ಈ ಹಿಂದಿನ ಚುನಾವಣೆಗಳಿಗೆ ಇದ್ದ ಮತಗಟ್ಟೆಗಳಲ್ಲಿ ಕೆಲವು ಮತಗಟ್ಟೆಗಳು ಬದಲಾಗಲಿವೆ. ಕೋವಿಡ್ ಹಿನ್ನೆಲೆ, ಕಿರಿದಾದ ಕೋಣೆಯ ಬದಲು ಸಾಮಾಜಿಕ ಅಂತರ ಕಾಪಾಡಲು ವಿಶಾಲವಾದ ಕಟ್ಟಡಗಳಿಗೆ ಜಾಗ ಬದಲಾವಣೆ ಮಾಡಲಾಗುವುದು ಎಂದರು.

ರಾಜರಾಜೇಶ್ವರಿ ನಗರ ಉಪಚುನಾವಣೆ ನವೆಂಬರ್ 3ರಂದು ನಡೆಯುತ್ತದೆ. ನ.10 ರಂದು ಮತ ಎಣಿಕೆ ನಡೆಯಲಿದೆ. ಇದರ ಸಿದ್ಧತೆಗಳು ಮಾಡಿಕೊಳ್ಳಲಾಗುತ್ತಿದೆ. ಈ ಸೆಕ್ಟರ್​ಗೆ ಬಿಇಎಲ್​ನಿಂದ ಇಂಜಿನಿಯರ್ಸ್ ಬಂದಿದ್ದಾರೆ. ಕಂಟ್ರೋಲ್ ಯೂನಿಟ್, ಬ್ಯಾಲೆಟ್ ಯೂನಿಟ್, ವಿವಿ ಪ್ಯಾಟ್​ಗಳನ್ನು ಮೊದಲ ಹಂತದ ಚೆಕ್ಕಿಂಗ್​ ನಡೆದಿದೆ. ಎಲ್ಲ ಯಂತ್ರಗಳು ಸರಿ ಇದೆಯಾ, ಕೆಲಸ ಮಾಡ್ತಿದೆಯಾ ಎಂದು ಪರೀಕ್ಷಿಸಲಾಗಿದೆ ಎಂದರು.

ಚುನಾವಣೆಗೆ 381 ಮತಗಟ್ಟೆಗಳು ಹಾಗೂ ಕೋವಿಡ್ ಹಿನ್ನೆಲೆ 297 ಆಕ್ಸಿಲರಿ ಪೋಲಿಂಗ್ ಸ್ಟೇಷನ್ ಸೇರಿ 678 ಮತಗಟ್ಟೆಗಳು ಏರ್ಪಡಿಸಲಾಗಿದೆ. ಎಲ್ಲ ಮತಗಟ್ಟೆಗಳಿಗೆ ಶೇ 200 ರಂತೆ 1,356 ಯಂತ್ರಗಳನ್ನು ಚೆಕ್ಕಿಂಗ್ ಮಾಡಿ, ಅಳವಡಿಸಲಾಗುತ್ತದೆ. 10ನೇ ದಿನಾಂಕದೊಳಗೆ ಈ ಚೆಕ್ಕಿಂಗ್ ಪ್ರಕ್ರಿಯೆ ಮುಗಿಯಲಿದೆ ಎಂದರು.

1,356 ಮತಗಟ್ಟೆಗಳಲ್ಲಿ ವಿವಿ ಪ್ಯಾಟ್​ನ ಶೇ 150ರ ಜೊತೆಗೆ ಶೇಕಡಾ 50 ರಷ್ಟು ಹೆಚ್ಚುವರಿ ಯಂತ್ರಗಳನ್ನು ಚುನಾವಣೆಗೆ ಬಳಸಲಾಗುತ್ತದೆ. ಬ್ಯಾಲೆಟ್ ಯೂನಿಟ್, ಕಂಟ್ರೋಲ್ ಯೂನಿಟ್ ಶೇ.140 ಬಳಸಲಾಗುತ್ತದೆ. ರ‍್ಯಾಂಡಮ್ ಆಗಿ, ಜನಪ್ರತಿನಿಧಿಗಳ ಸಮ್ಮುಖದಲ್ಲಿ, ಕಂಪ್ಯೂಟರ್​ನಲ್ಲಿ ಆಯ್ಕೆ ಮಾಡಿ ಆಯಾ ಮತಗಟ್ಟೆಗಳಲ್ಲಿ ಅಳವಡಿಸಲಾಗುತ್ತದೆ. ಅಂತಿಮವಾಗಿ ಯಾವ್ಯಾವ ಮತಗಟ್ಟೆಗಳಿಗೆ ಯಾವ್ಯಾವ ಮಷಿನ್​ಗಳು ಹೋಗುತ್ತವೆ ಎಂಬುದನ್ನೂ ರ‍್ಯಾಂಡಮೈಸೇಷನ್ ಮೂಲಕ ನಿರ್ಧರಿಸಲಾಗ್ತದೆ ಎಂದರು.

9 ನೇ ದಿನಾಂಕ ನೋಟಿಫಿಕೇಷನ್ ಹೊರಡಿಸಲಾಗುವುದು. ಚುನಾವಣಾ ಆಯೋಗ ಜಾರ್ಖಂಡ್​ನಿಂದ ಇಲ್ಲಿಗೆ ಚುನಾವಣಾ ಅಬ್ಸರ್ವರ್​ನ ನೇಮಕ ಮಾಡಿದ್ದು, ಚುನಾವಣಾ ದಿನ ಇವರೆಲ್ಲ ಬರಲಿದ್ದಾರೆ ಎಂದರು.

ಕೋವಿಡ್ ಹಿನ್ನೆಲೆ ವಿಶಾಲವಾದ ಜಾಗ ಅಗತ್ಯ ಇರುವುದರಿಂದ, 68 ಹಳೇ ಮತಗಟ್ಟೆಗಳ ಜಾಗವನ್ನು ಬೇರೆ ಕಟ್ಟಡಗಳಿಗೆ ವರ್ಗಾಯಿಸಲಾಗುತ್ತದೆ. ಇದನ್ನು ಮತದಾರರು ಹಾಗೂ ರಾಜಕೀಯ ಪಕ್ಷಗಳ ಗಮನಕ್ಕೂ ತರಲಾಗುವುದು ಎಂದರು.

297 ಹೆಚ್ಚುವರಿ ಆಕ್ಸಿಲರ್ ಮತಗಟ್ಟೆ ಮಾಡಲಾಗುತ್ತದೆ. ಕೋವಿಡ್ ರೋಗಿಗಳು ಮತ ಮತಗಟ್ಟೆಗಳಿಗೆ ಬರುವ ಅಗತ್ಯ ಇಲ್ಲ. ಚುನಾವಣಾ ಆಯೋಗ ಪೋಸ್ಟಲ್ ಬ್ಯಾಲೆಟ್​ಗೆ ಅವಕಾಶ ಕೊಟ್ಟಿರುವುದರಿಂದ ಮನೆಯಿಂದಲೇ ಮತ ಚಲಾಯಿಸಬಹುದು ಎಂದರು.

ABOUT THE AUTHOR

...view details