ಕರ್ನಾಟಕ

karnataka

ETV Bharat / state

ಆರ್.ಆರ್. ನಗರ ಬೈ ಎಲೆಕ್ಷನ್ ಮತ ಎಣಿಕೆಗೆ ಕ್ಷಣಗಣನೆ; ಕ್ಷೇತ್ರದಲ್ಲಿ ಖಾಕಿ ಸರ್ಪಗಾವಲು - ಆರ್.ಆರ್​.ನಗರ ಕ್ಷೇತ್ರದಲ್ಲಿ ಖಾಕಿ ಬಿಗಿ ಭದ್ರತೆ

ತೀವ್ರ ಕುತೂಹಲ ಕೆರಳಿಸಿರುವ ಉಪಚುನಾವಣಾ ಫಲಿತಾಂಶಕ್ಕೆ ಕೆಲವೇ ಗಂಟೆಗಳು ಬಾಕಿ ಉಳಿದಿವೆ. ನಾಳೆ ಬೆಳಗ್ಗೆಯಿಂದ ಮತ ಎಣಿಕೆ ನಡೆಯಲಿದ್ದು, ಅಹಿತಕರ ಘಟನೆ ನಡೆಯದಂತೆ ಆರ್.ಆರ್. ನಗರದಲ್ಲಿ ಖಾಕಿ ಬಿಗಿ ಭದ್ರತೆ ನಿಯೋಜಿಸಲಾಗಿದೆ.

ecurit
ಆರ್​.ಆರ್​​.ನಗರದಲ್ಲಿ ಖಾಕಿ ಭದ್ರತೆ

By

Published : Nov 9, 2020, 6:00 PM IST

ಬೆಂಗಳೂರು : ರಾಜಕೀಯ ಪಕ್ಷಗಳಪ್ರತಿಷ್ಠೆಯ ಕಣವಾಗಿರುವ ಆರ್.ಆರ್. ನಗರ ಉಪಚುನಾವಣೆಯ ಫಲಿತಾಂಶ ನಾಳೆ ಹೊರಬೀಳಲಿದೆ. ಶಾಂತಿಯುತ ಮತ ಎಣಿಕೆ ಹಾಗೂ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗದಂತೆ‌ ಪೊಲೀಸ್ ಇಲಾಖೆ ಭಾರಿ ಕಟ್ಟೆಚ್ಚರ ವಹಿಸಿದೆ.

3 ಡಿಸಿಪಿ, 8 ಎಸಿಪಿ, 41 ಇನ್​ಸ್ಪೆಕ್ಟರ್, 105 ಪಿಎಸ್ಐ, 179 ಎಎಸ್ಐ, 1,068 ಪೊಲೀಸ್ ಕಾನ್​ಸ್ಟೇಬಲ್, 83 ಮಫ್ತಿ ಪೊಲೀಸರು‌ ಸೇರಿದಂತೆ ಒಟ್ಟು 1670 ಪೊಲೀಸರನ್ನು ಭದ್ರತೆಗಾಗಿ‌ ನಿಯೋಜನೆ ಮಾಡಲಾಗಿದೆ.

ಜತೆಗೆ 9 ಕೆಎಸ್​ಆರ್​ಪಿ ತುಕಡಿ ಹಾಗೂ 9 ಸಿಎಆರ್ ತುಕಡಿಗಳು, 104 ಚೀತಾ ವಾಹನ ಹಾಗೂ 60 ಹೊಯ್ಸಳ ವಾಹನಗಳನ್ನು ಗಸ್ತಿಗೆ ನಿಯೋಜಿಸಲಾಗಿದೆ.

ಆರ್​.ಆರ್​​.ನಗರದಲ್ಲಿ ಖಾಕಿ ಭದ್ರತೆ

ಆರ್.ಆರ್. ನಗರದ ಜಾನಾಕ್ಷಿ‌ ವಿದ್ಯಾನಿಕೇತನ ಶಾಲೆಯಲ್ಲಿ ಮತ ಎಣಿಕೆ ನಡೆಯುತ್ತಿದೆ. ಮತ ಎಣಿಕೆ ನಡೆಯುವ ಪ್ರದೇಶದಲ್ಲಿ ನಾಳೆ ಬೆಳಗ್ಗೆ 6 ಗಂಟೆಯಿಂದ ಮಧ್ಯರಾತ್ರಿ 12 ಗಂಟೆವರೆಗೂ 144 ಸೆಕ್ಷನ್ ಜಾರಿಯಲ್ಲಿರಲಿದೆ. ನಾಳೆ ಒಂದು ದಿನ ಮದ್ಯ ಮಾರಾಟ ನಿಷೇಧಿಸಲಾಗಿದೆ.

ನಾಳೆಯೇ ವಿಧಾನ ಪರಿಷತ್ತಿನ ಶಿಕ್ಷಕರ ಕ್ಷೇತ್ರದ ಚುನಾವಣೆ‌ ಫಲಿತಾಂಶ ಪ್ರಕಟವಾಗಲಿದ್ದು ಇಲ್ಲಿಯೂ‌ ಪೊಲೀಸ್ ಬಂದೋಬಸ್ತ್ ಮಾಡಲಾಗುತ್ತದೆ.
ಸರ್ಕಾರಿ ಕಲಾ‌ ಕಾಲೇಜಿನಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದೆ. ‌ಮುಂಜಾಗ್ರತಾ ಕ್ರಮವಾಗಿ ಡಿಸಿಪಿ, ಎಸಿಪಿ, ಇನ್‌ಸ್ಪೆಕ್ಟರ್ ಒಳಗೊಂಡಂತೆ 197 ಪೊಲೀಸರು, 2 ಕೆಎಸ್​​ಆರ್​ಪಿ ಹಾಗೂ 2 ಸಿಎಆರ್ ತುಕಡಿಗಳನ್ನು ನಿಯೋಜಿಸಲಾಗಿದೆ.

ABOUT THE AUTHOR

...view details