ಕರ್ನಾಟಕ

karnataka

ETV Bharat / state

ಬಿಜೆಪಿ ನೋಟು, ಕಾಂಗ್ರೆಸ್​ಗೆ ವೋಟು ಹಾಕಿ: ಬಿಜೆಪಿ ವಿರುದ್ಧ ಖಂಡ್ರೆ ವಾಗ್ದಾಳಿ - ಬಿಜೆಪಿ ವಿರುದ್ಧ ಹರಿಹಾಯ್ದ ಈಶ್ವರ ಖಂಡ್ರೆ,

ಬಿಜೆಪಿಗೆ ತಕ್ಕ ಪಾಠ ಕಲಿಸಿ ಕಾಂಗ್ರೆಸ್​ನ್ನು ಬಹುಮತದಿಂದ ಗೆಲ್ಲಿಸಬೇಕೆಂದು ಈಶ್ವರ್​ ಖಂಡ್ರೆ ಜನರ ಬಳಿ ಕೇಳಿದ್ದಾರೆ.

By election money dealing issue, By election money dealing issue news, Eshwar Khandre spark on BJP, Eshwar Khandre spark on BJP news, ಉಪಚುನಾವಣೆಯಲ್ಲಿ ಹಣ ಹಂಚಿಕೆ ವಿವಾದ, ಉಪಚುನಾವಣೆಯಲ್ಲಿ ಹಣ ಹಂಚಿಕೆ ವಿವಾದ ಸುದ್ದಿ, ಬಿಜೆಪಿ ವಿರುದ್ಧ ಹರಿಹಾಯ್ದ ಈಶ್ವರ ಖಂಡ್ರೆ, ಬಿಜೆಪಿ ವಿರುದ್ಧ ಹರಿಹಾಯ್ದ ಈಶ್ವರ ಖಂಡ್ರೆ ಸುದ್ದಿ,
ಬಿಜೆಪಿ ವಿರುದ್ಧ ಖಂಡ್ರೆ ವಾಗ್ದಾಳಿ

By

Published : Apr 16, 2021, 4:48 AM IST

ಬೆಂಗಳೂರು:ಬಿಜೆಪಿ ವಿರುದ್ಧ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ವಾಗ್ದಾಳಿ ನಡೆಸಿದ್ದಾರೆ.

ಕೊರೊನಾ ಪಾಸಿಟಿವ್ ಬಂದಿದ್ದ ಹಿನ್ನೆಲೆ ಬೆಂಗಳೂರಿನ ನಿವಾಸದಲ್ಲಿ ಕ್ವಾರಂಟೈನ್ ಆಗಿರುವ ಅವರು ವಿಡಿಯೋ ಸಂದೇಶ ಬಿಡುಗಡೆ ಮಾಡಿದ್ದು, ಬಿಜೆಪಿಗೆ ಸೋಲಿನ ಭೀತಿ ಎದುರಾಗಿದೆ. ಹಾಗಾಗಿ ಒಂದೊಂದು ಕ್ಷೇತ್ರದಲ್ಲಿ 150 ಕೋಟಿ ಹಣ ಹಂಚಿಕೆ‌ ಮಾಡುತ್ತಿದ್ದಾರೆ. ಬಿಜೆಪಿ ಬೆನ್ನಿಗೆ ಚುನಾವಣಾ ಆಯೋಗ ನಿಂತಿದೆ ಎಂದು ಆರೋಪಿಸಿದರು.

ಬಿಜೆಪಿ ವಿರುದ್ಧ ಖಂಡ್ರೆ ವಾಗ್ದಾಳಿ

ವೀಕ್ಷಕರು, ಜಿಲ್ಲಾಡಳಿಗಳು ಬಿಜೆಪಿ ಬೆನ್ನಿಗಿವೆ. ಹಾಗಾಗಿ ಸುಪ್ರೀಂ ಕೋರ್ಟ್ ನಿಗಾದಲ್ಲಿ ತನಿಖೆ ಆಗಬೇಕು. ಅಕ್ರಮದಲ್ಲಿ ಭಾಗಿಯಾಗಿರುವ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಉಪಚುನಾವಣೆಯಲ್ಲಿ ಸಾವಿರಾರು ರೂಪಾಯಿ ಕೋಟಿ ಖರ್ಚು ಮಾಡಿದ್ರು ಜನ ತಕ್ಕ ಪಾಠ ಕಲಿಸುತ್ತಾರೆ ಎಂದಿದ್ದಾರೆ.

ಬಸವಕಲ್ಯಾಣದಲ್ಲಿ ಬಿಜೆಪಿ ಗೆ ಸೋಲಿ ಭೀತಿ ಎದುರಾಗಿದೆ. 60-100 ಕೋಟಿ ಹಣ ಖರ್ಚು ಮಾಡುತ್ತಿದ್ದಾರೆ. ಬಿಜೆಪಿ ಅಕ್ರಮದಿಂದ ಗೆಲ್ಲಲು ಪ್ರಯತ್ನ ಮಾಡುತ್ತಿದೆ. ಹಣದ ಹೊಳೆ ಹರಿಸುತ್ತಿದ್ದಾರೆ. ಒಂದೊಂದು ಮತಕ್ಕೆ ಎರಡು ಸಾವಿರ ರೂಪಾಯಿ ಕೊಡುತ್ತಿದ್ದಾರೆ ಎಂದು ಆರೋಪಿಸಿದರು.

ಶಾಸಕರ ಖರೀದಿ ಆಯಿತು. ಅಕ್ರಮವಾಗಿ ಸರ್ಕಾರ ರಚನೆ ಮಾಡಿದ್ದು ಆಯಿತು. ಇದೀಗ ಮತಗಳ ಖರೀದಿ ಮಾಡುತ್ತಿದ್ದಾರೆ. ಒತ್ತಾಯ ಪೂರ್ವಕವಾಗಿ ಹಣ ನೀಡಿದ್ರೆ ತೆಗೆದುಕೊಳ್ಳಿ. ಬಿಜೆಪಿಗೆ ತಕ್ಕ ಪಾಠ ಕಲಿಸಬೇಕು. ಬಿಜೆಪಿ ನೋಟು, ಕಾಂಗ್ರೆಸ್​ಗೆ ವೋಟು ಹಾಕಬೇಕು ಎಂದು ಮತಪ್ರಭುಗಳ ಬಳಿ ಮನವಿ ಮಾಡಿಕೊಂಡರು.

ABOUT THE AUTHOR

...view details