ಕರ್ನಾಟಕ

karnataka

ETV Bharat / state

ಉಪಚುನಾವಣೆ ಸರ್ಕಾರಕ್ಕೆ ಒಂದು ರೀತಿಯ ಚಾಲೆಂಜ್: ಸಚಿವ ಆರ್.ಅಶೋಕ್

ಉಪಚುನಾವಣೆ ಘೋಷಣೆ ಸ್ವಾಗತ ಮಾಡುತ್ತೇವೆ. ನಮಗೂ ಇದು ಪ್ರಮುಖ ಚುನಾವಣೆ. ಸರ್ಕಾರಕ್ಕೂ ಈ ಉಪಚುನಾವಣೆ ಒಂದು ರೀತಿಯ ಚಾಲೆಂಜ್ ಎಂದು ಸಚಿವ ಆರ್.ಅಶೋಕ್ ಹೇಳಿದರು.

Minister R. Ashok
ಸಚಿವ ಆರ್. ಅಶೋಕ್

By

Published : Mar 16, 2021, 8:28 PM IST

ಬೆಂಗಳೂರು: ರಾಜ್ಯದಲ್ಲಿ ಉಪಚುನಾವಣೆ ಘೋಷಣೆಯಾಗಿದೆ. ಇದು ಸರ್ಕಾರಕ್ಕೆ ಒಂದು ರೀತಿಯ ಚಾಲೆಂಜ್. ನಾವು ದೊಡ್ಡ ಅಂತರದಲ್ಲಿ ಗೆಲುತ್ತೇವೆ ಎಂದು ಕಂದಾಯ ಸಚಿವ ಆರ್.ಅಶೋಕ್ ವಿಶ್ವಾಸ ವ್ಯಕ್ತಪಡಿಸಿದರು.

ಸಚಿವ ಆರ್.ಅಶೋಕ್ ಪ್ರತಿಕ್ರಿಯೆ

ವಿಧಾನಸೌಧದಲ್ಲಿ ಇಂದು ಸಂಜೆ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಉಪಚುನಾವಣೆ ಘೋಷಣೆ ಸ್ವಾಗತ ಮಾಡುತ್ತೇವೆ. ಚುನಾವಣಾ ಉಸ್ತುವಾರಿಗಳ‌ ನೇಮಕ ಆಗಿದೆ. ನಾವೆಲ್ಲರೂ ಚುನಾವಣಾ ಪ್ರಚಾರಕ್ಕೆ ಹೋಗುತ್ತೇವೆ. ಇನ್ನೊಂದು ವಾರದಲ್ಲಿ ಅಭ್ಯರ್ಥಿಗಳ‌ ಆಯ್ಕೆಯಾಗುತ್ತದೆ. ಈ ಬಗ್ಗೆ ಮುಖ್ಯಮಂತ್ರಿಗಳು ಹಾಗೂ ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದರು.

ಮಹಾನಾಯಕ, ಮಹಾನಾಯಕಿ ಬಿಜೆಪಿ ಟ್ವೀಟ್ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಆ ಯಾವ ಟ್ವೀಟ್​​ಗಳನ್ನೂ ನಾನು ನೋಡಿಲ್ಲ ಎಂದರು. ಇದೇ ವೇಳೆ ಮಾತನಾಡಿದ ಡಿಸಿಎಂ ಗೋವಿಂದ ಕಾರಜೋಳ, ಚುನಾವಣಾ ಆಯೋಗ ಬೆಳಗಾವಿ ಲೋಕಸಭಾ, ಮಸ್ಕಿ, ಬಸವಕಲ್ಯಾಣ ಉಪಚುನಾವಣೆ ಘೋಷಣೆ ಮಾಡಿದೆ. ಏಪ್ರಿಲ್​ನಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಬಿಜೆಪಿ ಸ್ವಂತ ಬಲದಿಂದ ಗೆಲ್ಲಲಿದೆ. ಪ್ರಧಾನಿ ಮತ್ತು ಮುಖ್ಯಮಂತ್ರಿಗಳು ಜನಪರ ಕೆಲಸ ಮಾಡಿದ್ದಾರೆ ಎಂದರು.

ಓದಿ:ಮೂರು ಕ್ಷೇತ್ರಗಳ ಉಪ ಚುನಾವಣೆ.. ಹೈಕಮಾಂಡ್‌ನತ್ತ ಬಿಜೆಪಿ ಟಿಕೆಟ್‌ ಆಕಾಂಕ್ಷಿಗಳ‌ ಚಿತ್ತ..

ABOUT THE AUTHOR

...view details