ಕರ್ನಾಟಕ

karnataka

ETV Bharat / state

ಉಪ ಚುನಾವಣೆ.. ಏಪ್ರಿಲ್‌ 9ರಿಂದ ಮಸ್ಕಿ, ಬಸವಕಲ್ಯಾಣ ಕ್ಷೇತ್ರದಲ್ಲಿ ಸಿಎಂ‌ ಪ್ರಚಾರ - ಉಪ ಚುನಾವಣೆ ಪ್ರಚಾರದಲ್ಲಿ ಸಿಎಂ ಭಾಗಿ

ಏಪ್ರಿಲ್ 11ರ ಭಾನುವಾರ ಬೆಳಗ್ಗೆ 11 ಗಂಟೆಗೆ ರಾಯಚೂರು ಜಿಲ್ಲಾ ಬಿಜೆಪಿ ವತಿಯಿಂದ ಆಯೋಜಿಸಿರುವ ವಿವಿಧ ಸಮುದಾಯಗಳ ಮುಖಂಡರ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಸಂಜೆ 5 ಗಂಟೆಗೆ ರಾಯಚೂರು ಜಿಲ್ಲಾ ಬಿಜೆಪಿ ಪಕ್ಷದ ವತಿಯಿಂದ ಆಯೋಜಿಸಿರುವ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಅಂದು ರಾತ್ರಿಯೂ ಮುದಗಲ್​ನಲ್ಲಿ ಸಿಎಂ ವಾಸ್ತವ್ಯ ಇರಲಿದ್ದಾರೆ..

by-election-cm-to-campaign-from-april-9th
ಏ. 9ರಿಂದ ಮಸ್ಕಿ, ಬಸವಕಲ್ಯಾಣ ಕ್ಷೇತ್ರದಲ್ಲಿ ಸಿಎಂ‌ ಪ್ರಚಾರ

By

Published : Apr 7, 2021, 7:52 PM IST

ಬೆಂಗಳೂರು :ಏಪ್ರಿಲ್ 9 ರಿಂದ 13ರವರೆಗೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಉಪ ಚುನಾವಣಾ ಪ್ರಚಾರ ಕಾರ್ಯದಲ್ಲಿ ಭಾಗಿಯಾಗಲಿದ್ದಾರೆ. ಮಸ್ಕಿ, ಬಸವಕಲ್ಯಾಣ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಮತ ಯಾಚಿಸಲಿದ್ದಾರೆ.

ಏಪ್ರಿಲ್ 9ರ ಶುಕ್ರವಾರ 3:30ಕ್ಕೆ ಜಕ್ಕೂರು ಏರೊಡ್ರಮ್​ನಿಂದ ಹೆಲಿಕಾಪ್ಟರ್ ಮೂಲಕ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲೂಕಿನ ಮುದುಗಲ್​ಗೆ ತೆರಳಲಿದ್ದಾರೆ. ಅಂದು ಮುದಗಲ್​ನಲ್ಲೇ ಸಿಎಂ ವಾಸ್ತವ್ಯ ಹೂಡಲಿದ್ದಾರೆ.

ಶನಿವಾರ ಬೆಳಗ್ಗೆ 10 ಗಂಟೆಗೆ ಮುದಗಲ್​​ನಿಂದ ತೆರಳಲಿರುವ ಮುಖ್ಯಮಂತ್ರಿ ಯಡಿಯೂರಪ್ಪ, 11 ಗಂಟೆಗೆ ಮಸ್ಕಿ ಕ್ಷೇತ್ರದ ತುರುವಿಹಾಳದಲ್ಲಿ ಪ್ರಚಾರ ನಡೆಸಲಿದ್ದಾರೆ. ರಾಯಚೂರು ಜಿಲ್ಲಾ ಬಿಜೆಪಿ ವತಿಯಿಂದ ಮಸ್ಕಿ ವಿಧಾನಸಭಾ ಕ್ಷೇತ್ರದ ತುರವಿಹಾಳ ಮತ್ತು ತಿಡಿಗೋಳ ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ನಂತರ ಮಧ್ಯಾಹ್ನ 2.30ಕ್ಕೆ ತುರುವಿಹಾಳದಿಂದ ಹೊರಟು 3.15ಕ್ಕೆ ಬಳಗಾನೂರು ತಲುಪಲಿದ್ದಾರೆ. ಅಲ್ಲಿ ರಾಯಚೂರು ಜಿಲ್ಲಾ ಬಿಜೆಪಿ ವತಿಯಿಂದ ಮಸ್ಕಿ ವಿಧಾನಸಭಾ ಕ್ಷೇತ್ರದ ಬಳಗಾನೂರು ಪಟ್ಟಣ ಪಂಚಾಯತ್‌ ಮತ್ತು ತೋರಣದಿನ್ನಿ ಹಾಗೂ ಗುಡದೂರು ಜಿಪಂ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಸಂಜೆ 6:00 ಗಂಟೆಗೆ ಮಸ್ಕಿ ತಾಲೂಕಿನ ಸಂತೆಕಲ್ಲೂರುಗೆ ಆಗಮಿಸಲಿರುವ ಯಡಿಯೂರಪ್ಪ, ಸಂತೆಕಲ್ಲೂರು ಮತ್ತು ಮೆದಿಕಿನಾಳ ಜಿಪಂ ವ್ಯಾಪ್ತಿಯಲ್ಲಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

ಅಂದು ರಾತ್ರಿ 8 ಗಂಟೆಗೆ ರಾಯಚೂರು ಜಿಲ್ಲಾ ಬಿಜೆಪಿ ವತಿಯಿಂದ ಆಯೋಜಿಸಿರುವ ಪ್ರಮುಖರ ಸಭೆಯಲ್ಲಿ ಸಿಎಂ ಯಡಿಯೂರಪ್ಪ ಭಾಗವಹಿಸಲಿದ್ದು, ಅಂದು ರಾತ್ರಿ ಮುದಗಲ್​ನಲ್ಲಿ ವಾಸ್ತವ್ಯ ಹೂಡಲಿದ್ದಾರೆ.

ಏಪ್ರಿಲ್ 11ರ ಭಾನುವಾರ ಬೆಳಗ್ಗೆ 11 ಗಂಟೆಗೆ ರಾಯಚೂರು ಜಿಲ್ಲಾ ಬಿಜೆಪಿ ವತಿಯಿಂದ ಆಯೋಜಿಸಿರುವ ವಿವಿಧ ಸಮುದಾಯಗಳ ಮುಖಂಡರ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಸಂಜೆ 5 ಗಂಟೆಗೆ ರಾಯಚೂರು ಜಿಲ್ಲಾ ಬಿಜೆಪಿ ಪಕ್ಷದ ವತಿಯಿಂದ ಆಯೋಜಿಸಿರುವ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಅಂದು ರಾತ್ರಿಯೂ ಮುದಗಲ್​ನಲ್ಲಿ ಸಿಎಂ ವಾಸ್ತವ್ಯ ಇರಲಿದ್ದಾರೆ.

ಇದನ್ನೂ ಓದಿ:ನನ್ನನ್ನು ಕೂಡಿ ಹಾಕಿ ಕೆಲಸ ಮಾಡಿಸ್ತಿದ್ದಾರೆ : ಉಡುಪಿ ಕೆಎಸ್​ಆರ್​ಟಿಸಿ ಡಿಪೋ ಮೆಕ್ಯಾನಿಕ್ ಅಳಲು

ಏಪ್ರಿಲ್ 12ರ ಸೋಮವಾರ 10:45ಕ್ಕೆ ಬಸವಕಲ್ಯಾಣ ತಲುಪಲಿರುವ ಮುಖ್ಯಮಂತ್ರಿ ಯಡಿಯೂರಪ್ಪ, ಬೀದರ್ ಜಿಲ್ಲಾ ಬಿಜೆಪಿ ವತಿಯಿಂದ ಆಯೋಜಿಸಿರುವ ಪ್ರಮುಖರೊಂದಿಗೆ ಸಭೆ ನಡೆಸಲಿದ್ದಾರೆ. ಮಧ್ಯಾಹ್ನ 12:30ಕ್ಕೆ ಬೀದರ್ ಜಿಲ್ಲಾ ಬಿಜೆಪಿ ಪಕ್ಷದ ವತಿಯಿಂದ ಆಯೋಜಿಸಿರುವ ಸಾರ್ವಜನಿಕ ಸಭೆ ಹಾಗೂ 3.40ಕ್ಕೆ ಬೀದರ್​ ಜಿಲ್ಲಾ ಬಿಜೆಪಿ ವತಿಯಿಂದ ಮುಡಬಿಯಲ್ಲಿ ಆಯೋಜಿಸಿರುವ ಸಾರ್ವಜನಿಕ ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಸಂಜೆ 6 ಗಂಟೆಗೆ ಹಲಸೂರಿನಲ್ಲಿ ಬೀದರ್ ಜಿಲ್ಲಾ ಬಿಜೆಪಿ ವತಿಯಿಂದ ಆಯೋಜಿಸಿರುವ ಸಾರ್ವಜನಿಕ ಸಭೆ ಹಾಗೂ ಸಂಜೆ 7.45ಕ್ಕೆ ಬಸವಕಲ್ಯಾಣದಲ್ಲಿ ಪಟ್ಟಣದ ಗಣ್ಯರೊಂದಿಗೆ ನಡೆಯುವ ಸಭೆಯಲ್ಲಿ ಭಾಗವಹಿಸಲಿದ್ದು, ಅಂದು ರಾತ್ರಿ ಅಲ್ಲೇ ವಾಸ್ತವ್ಯ ಹೂಡಲಿದ್ದಾರೆ.

ಏಪ್ರಿಲ್ 13ರ ಮಂಗಳವಾರ 9 ಗಂಟೆಗೆ ಬಸವಕಲ್ಯಾಣದ ತಾಲೂಕು ಕ್ರೀಡಾಂಗಣ ಹೆಲಿಪ್ಯಾಡ್​ನಿಂದ ಹೊರಡಲಿರುವ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ12.20ಕ್ಕೆ ಬೆಂಗಳೂರಿನ ಜಕ್ಕೂರು ಏರೊಡ್ರಮ್​ಗೆ ಬಂದು ತಲುಪಿದ್ದಾರೆ.

ABOUT THE AUTHOR

...view details