ಬೆಂಗಳೂರು :ಯುಗಾದಿ ಹಬ್ಬದ ಪ್ರಯುಕ್ತ ಉದ್ಯಮಿಯೊಬ್ಬರು ತಮ್ಮ ಸಂಬಂಧಿಕರ ಮನೆಗೆ ಹೋಗಿದ್ದಾರೆ. ಈ ವೇಳೆ ಮನೆಗೆ ನುಗ್ಗಿರುವ ಕಳ್ಳರು 10 ಲಕ್ಷ ರೂ. ಮೌಲ್ಯದ ಡೈಮಂಡ್ ಕಳ್ಳತನ ಮಾಡಿದ್ದಾರೆ. ಈ ಘಟನೆ ಬೆಂಗಳೂರಿನ ಕೋರಮಂಗಲದಲ್ಲಿ ಬೆಳಕಿಗೆ ಬಂದಿದೆ.
ಉದ್ಯಮಿಯಾಗಿರುವ ರಂಜಿತಾ ಮೆಟ್ರಾನಿ ಎಂಬುವರು ಯುಗಾದಿ ಹಬ್ಬದ ಹಿನ್ನೆಲೆ ತಮಿಳುನಾಡಿನ ಸಂಬಂಧಿಕರ ಮನೆಗೆ ತೆರಳಿದ್ದಾರೆ. ಅವರು ಹಬ್ಬ ಮುಗಿಸಿಕೊಂಡು ನಿನ್ನೆ ಸಂಜೆ ಕೋರಮಂಗಲದಲ್ಲಿರುವ 3ನೇ ಬ್ಲಾಕ್ನಲ್ಲಿರುವ ಮನೆಗೆ ಬಂದಾಗ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ.