ಬೆಂಗಳೂರು :ಕಳೆದ 6 ದಿನಗಳಿಂದ ವಲಸೆ ಕಾರ್ಮಿಕರಿಗೆ ಇದ್ದ ಬಸ್ ಸೌಲಭ್ಯ ನಿನ್ನೆಗೆ ಕೊನೆಯಾಗಿದೆ. ಆದರೆ, ಇಂದೂ ಕೂಡ ಮೆಜೆಸ್ಟಿಕ್‌ಗೆ ಕೂಲಿ ಕಾರ್ಮಿಕರ ಕುಟುಂಬಗಳು ಊರಿಗೆ ಹೋಗುವ ಉದ್ದೇಶದಿಂದ ಬರುತ್ತಿದ್ದಾರೆ.
ಬಸ್ ಇಲ್ಲದಿದ್ರೂ ಮೆಜೆಸ್ಟಿಕ್ನತ್ತ ಕಾರ್ಮಿಕರು.. ಮನವೊಲಿಸಿ ಮನೆಗೆ ಕಳುಹಿಸಿದ ಪೊಲೀಸರು.. - ಬೆಂಗಳೂರು
ನಗರದ ಬೂದಗೆರೆಯಿಂದ 8 ಗಂಟೆಗೆ ಮೆಜೆಸ್ಟಿಕ್‌ಗೆ ಬಂದಿರೋ ಕಾರ್ಮಿಕರು, ರಾಯಚೂರಿಗೆ ತೆರಳುವ ಬಸ್ಗಾಗಿ ಕಾಯುತ್ತಿದ್ದಾರೆ. ಇಂದು ಬಸ್ ಸೌಲಭ್ಯ ಇದೆ ಎಂದು ತಿಳಿದು ಮೆಜೆಸ್ಟಿಕ್‌ಗೆ ಬಂದಿದ್ದಾರೆ. ಪುಟ್ಟ ಕಂದಮ್ಮ, ಹೆಂಡತಿ ಮಕ್ಕಳ ಜೊತೆ ಬಸ್ಗಾಗಿ ಕಾಯುತ್ತಿದ್ದರು. ಈ ವೇಳೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಕಷ್ಟ ವಿಚಾರಿಸಿದ್ದಾರೆ.
![ಬಸ್ ಇಲ್ಲದಿದ್ರೂ ಮೆಜೆಸ್ಟಿಕ್ನತ್ತ ಕಾರ್ಮಿಕರು.. ಮನವೊಲಿಸಿ ಮನೆಗೆ ಕಳುಹಿಸಿದ ಪೊಲೀಸರು.. Majestic](https://etvbharatimages.akamaized.net/etvbharat/prod-images/768-512-7111044-thumbnail-3x2-bng.jpg)
ನಗರದ ಬೂದಗೆರೆಯಿಂದ 8 ಗಂಟೆಗೆ ಮೆಜೆಸ್ಟಿಕ್‌ಗೆ ಬಂದಿರೋ ಕಾರ್ಮಿಕರು, ರಾಯಚೂರಿಗೆ ತೆರಳುವ ಬಸ್ಗಾಗಿ ಕಾಯುತ್ತಿದ್ದಾರೆ. ಇಂದು ಬಸ್ ಸೌಲಭ್ಯ ಇದೆ ಎಂದು ತಿಳಿದು ಮೆಜೆಸ್ಟಿಕ್‌ಗೆ ಬಂದಿದ್ದಾರೆ. ಪುಟ್ಟ ಕಂದಮ್ಮ, ಹೆಂಡತಿ ಮಕ್ಕಳ ಜೊತೆ ಬಸ್ಗಾಗಿ ಕಾಯುತ್ತಿದ್ದರು. ಈ ವೇಳೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಕಷ್ಟ ವಿಚಾರಿಸಿದ್ದಾರೆ.
ಬೂದನಗೆರೆಯಲ್ಲಿ ಮನೆ ಖಾಲಿ ಮಾಡಿಕೊಂಡು ಬಂದಿದ್ದೇವೆ. ನಮ್ಮೂರಿಗೆ ನಮ್ಮನ್ನು ಕಳಿಸಿ ಎಂದು ಪೊಲೀಸರ ಮುಂದೆ ಅಳಲು ತೋಡಿಕೊಂಡರು. ಒಂದು ತಿಂಗಳ ದಿನಸಿ ನೀಡ್ತೀವಿ, ಬೂದನಗೆರೆಗೆ ತೆರಳಿ ಎಂದು ಪೊಲೀಸರು ಮನವೊಲಿಸಿದರು. ಬಳಿಕ ಆಟೋ ಸೌಲಭ್ಯ ಮಾಡಿ ಕಾರ್ಮಿಕರನ್ನು ಬೂದನಗೆರೆಗೆ ವಾಪಸು ಕಳುಹಿಸಲಾಯಿತು.