ಬೆಂಗಳೂರು: ಲೋಕಸಭಾ ಚುನಾವಣೆ-2019ರ ಮೊದಲನೇ ಹಂತದ ಮತದಾನವು ಕರ್ನಾಟಕ ರಾಜ್ಯ ವ್ಯಾಪ್ತಿಯ ಹಲವಾರು ಜಿಲ್ಲೆಗಳಲ್ಲಿ ನಾಳೆ ನಡೆಯಲಿದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಚುನಾವಣೆ ಕಾರ್ಯಕ್ಕೆ ಮತ್ತು ಪೊಲೀಸ್ ಇಲಾಖೆಗೆ ಹೆಚ್ಚಿನ ಸಂಖ್ಯೆಯಲ್ಲಿ ಬಸ್ಸುಗಳನ್ನು ಒದಗಿಸುತ್ತಿದೆ. ಆದರಿಂದ ಇಂದಿನಿಂದ 18ರವರೆಗೆ ನಿಗಮದ ವಾಹನಗಳು ಬಳಕೆಯಾಗಲಿದ್ದು, ಸಂಚಾರದಲ್ಲಿ ವ್ಯತ್ಯಯ ಉಂಟಾಗುತ್ತದೆ. ಪ್ರಯಾಣಿಕರು ಸಹಕರಿಸುವಂತೆ ನಿಗಮ ಮನವಿ ಮಾಡಿದೆ.
ಕೆಎಸ್‍ಆರ್‌ಟಿಸಿ ಹಾಗೂ ಬಿಎಂಟಿಸಿ ನಿಗಮ ಚುನಾವಣೆ ಕಾರ್ಯಕ್ಕೆ ಮತ್ತು ಪೊಲೀಸ್ ಇಲಾಖೆಗೆ ಹೆಚ್ಚಿನ ಸಂಖ್ಯೆಯ ಬಸ್ಗಳನ್ನು ಒದಗಿಸಿದೆ. ಆದ್ದರಿಂದ ಕೆಎಸ್‍ಆರ್‌ಟಿಸಿ, ಬಿಎಂಟಿಸಿ ಬಸ್ ಕಾರ್ಯಾಚರಣೆಯಲ್ಲಿ ಹೆಚ್ಚಿನ ರೀತಿಯಲ್ಲಿ ವ್ಯತ್ಯಯ ಉಂಟಾಗಲಿದೆ. ಊರಿಗೆ ತೆರಳುವ ಮತದಾರರಿಗೆ ಬಸ್ ವ್ಯವಸ್ಥೆ ಕಡಿಮೆ ಇರುತ್ತದೆ. ಚುನಾವಣೆಗೆ ಶೇ. 70ರಷ್ಟು ಬಸ್‍ಗೆ ಚುನಾವಣಾ ಆಯೋಗದಿಂದ ಬೇಡಿಕೆ ಬಂದಿತ್ತು. ಆದರೆ ಜನರಿಗೆ ಹೆಚ್ಚಾಗಿ ಸಮಸ್ಯೆ ಆಗುತ್ತೆ ಅನ್ನೋ ಕಾರಣಕ್ಕೆ ಶೇ. 50ರಷ್ಟು ಬಸ್ ನೀಡಲು ಸಾರಿಗೆ ನಿಗಮಗಳು ಸಮ್ಮತಿಸಿವೆ. ರಜೆ ದಿನ ಮತದಾನ ನಡೆಯುವ ಕಾರಣ ನಾನಾ ಊರುಗಳಿಗೆ ತೆರಳುವವರು ಸಾಕಷ್ಟು ಮಂದಿ ಇರುತ್ತಾರೆ. ಅದಾಗಲೇ ಮುಂಗಡ ಪಾವತಿ ಫುಲ್ ಆಗಿದ್ದು, ಹೆಚ್ಚುವರಿ ಬಸ್‍ಗಳ ಅಗತ್ಯ ಎದುರಾಗಲಿದೆ. ಎರಡು ದಿನ ಬಸ್ ಸಂಚಾರದಲ್ಲಿ ವ್ಯತ್ಯಯ ಕಂಡುಬರಲಿದ್ದು, ಜನರು ಸಹಕರಿಸಬೇಕು ಎಂದು ಕೆಎಸ್ಆರ್ ಟಿಸಿಯ ವಿಭಾಗೀಯ ನಿಯಂತ್ರಣಾಧಿಕಾರಿ ಇನಾಯತ್ ಬಾಗಬಾತ್ ತಿಳಿಸಿದರು.