ಬೆಂಗಳೂರು:ಸಾರ್ವಜನಿಕರ ಉಪಯೋಗಕ್ಕಾಗಿ ಬೌನ್ಸ್ ಕಂಪನಿಯು ಬಾಡಿಗೆಗೆ ಬೈಕ್ ವ್ಯವಸ್ಥೆ ಕಲ್ಪಿಸಿದೆ. ಆದರೆ ಅದರ ಬಳಕೆಗಿಂತ ದುರ್ಬಳಕೆಯೇ ಹೆಚ್ಚಾಗುತ್ತಿದೆ.
ಸುಟ್ಟ ಸ್ಥಿತಿಯಲ್ಲಿ ಬೌನ್ಸ್ ಬೈಕ್ ಪತ್ತೆ... ಕ್ರಮಕ್ಕೆ ಆಗ್ರಹಿಸಿದ ಕಂಪನಿ - ಸುಟ್ಟ ಸ್ಥಿತಿಯಲ್ಲಿ ಬೌನ್ಸ್ ಬೈಕ್ ಪತ್ತೆ
ಬೌನ್ಸ್ ಕಂಪನಿ ಸಾರ್ವಜನಿಕರ ಉಪಯೋಗಕ್ಕಾಗಿ ಬಾಡಿಗೆಗೆ ಬೈಕ್ ವ್ಯವಸ್ಥೆ ಕಲ್ಪಿಸಿದೆ. ಆದರೆ ನಗರದ ಹೊರವಲಯ ಹೀಲಲಿಗೆ ರೈಲ್ವೆ ನಿಲ್ದಾಣ ಬಳಿಯ ನಿರ್ಜನ ಪ್ರದೇಶದಲ್ಲಿ ಅಪರಿಚಿತರು ಬೈಕ್ ಸುಟ್ಟಿ ಹಾಕಿದ್ದು, ಬೈಕ್ ಪಳೆಯುಳಿಕೆ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಬೌನ್ಸ್ ಕಂಪನಿಯ ಬೈಕ್ಗಳನ್ನು ಬಳಸುವ ಸವಾರರು ಎಲ್ಲೆಂದರಲ್ಲಿ ಬೈಕ್ ನಿಲ್ಲಿಸುತ್ತಾರೆ ಎಂಬ ಆರೋಪ ಒಂದೆಡೆಯಾದರೆ, ಮತ್ತೊಂದೆಡೆ ಬೈಕ್ ಸುಟ್ಟು ವಿಕೃತಿ ಮೆರೆಯುವವರ ಸಂಖ್ಯೆಯೂ ಅಧಿಕವಾಗುತ್ತಿದೆ. ಇದಕ್ಕೆ ಪೂರಕವಾಗಿ ನಗರದ ಹೊರವಲಯದ ಹೀಲಲಿಗೆ ರೈಲ್ವೆ ನಿಲ್ದಾಣ ಬಳಿಯ ನಿರ್ಜನ ಪ್ರದೇಶದಲ್ಲಿ ಅಪರಿಚಿತರು ಬೈಕ್ ಸುಟ್ಟು ಹಾಕಿದ್ದು, ಬೈಕ್ ಪಳೆಯುಳಿಕೆ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಪಳೆಯುಳಿಕೆ ಸ್ಥಿತಿಯಲ್ಲಿರುವ ಬೈಕ್ ಫೋಟೋವನ್ನು ಬೆಂಗಳೂರು ಟ್ರೈನ್ ಯೂಸರ್ಸ್ ಗ್ರೂಪ್ ಟ್ವಿಟರ್ನಲ್ಲಿ ಪೋಸ್ಟ್ ಮಾಡಿದ್ದು, ಇದರ ವಿರುದ್ಧ ಸೂಕ್ತ ಕ್ರಮಕ್ಕೆ ಬೌನ್ಸ್ ಕಂಪನಿ ಆಗ್ರಹಿಸಿದೆ.