ಕರ್ನಾಟಕ

karnataka

ETV Bharat / state

ಮತ್ತೆ ರಮ್ಯಾ ಕಾಲೆಳೆದ ಹಾಸ್ಯನಟ ಬುಲೆಟ್ ಪ್ರಕಾಶ್​​ - undefined

ನಟಿ, ಮಾಜಿ ಸಂಸದೆ ರಮ್ಯಾ ತಮ್ಮ ಟ್ವಿಟರ್ ಅಕೌಂಟ್ ಡಿಲೀಟ್ ಮಾಡಿರುವುದರ ಸಂಬಂಧ ಹಾಸ್ಯನಟ ಬುಲೆಟ್ ಪ್ರಕಾಶ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕುವ ಮೂಲಕ ರಮ್ಯಾ ಕಾಲೆಳೆದಿದ್ದಾರೆ.

ರಮ್ಯಾ , ಬುಲೆಟ್ ಪ್ರಕಾಶ್​​

By

Published : Jun 4, 2019, 10:03 PM IST

ಮೋದಿ ಬಗ್ಗೆ ಪೋಸ್ಟ್ ಹಾಕಿದ್ದ ರಮ್ಯಾಗೆ ಬುದ್ಧಿ ಹೇಳಿದ್ದ ಹಾಸ್ಯನಟ ಬುಲೆಟ್ ಪ್ರಕಾಶ್ ಇದೀಗ ಮತ್ತೆ ರಮ್ಯಾ ಕಾಲೆಳೆದಿದ್ದಾರೆ. ರಮ್ಯಾ ತಮ್ಮ ಟ್ವಿಟರ್ ಅಕೌಂಟ್ ಡಿಲೀಟ್ ಮಾಡಿರುವುದರ ಸಂಬಂಧ ಬುಲೆಟ್ ಪ್ರಕಾಶ್ ತಮ್ಮ ಸೋಷಿಯಲ್​​​ ಮೀಡಿಯಾದಲ್ಲಿ ಪೋಸ್ಟ್ ಹಾಕಿಕೊಂಡಿದ್ದಾರೆ.

ಎಐಸಿಸಿ ಸಾಮಾಜಿಕ ಜಾಲತಾಣದ ಮುಖ್ಯಸ್ಥೆ ರಮ್ಯಾ ಆ ಸ್ಥಾನಕ್ಕೂ ರಾಜೀನಾಮೆ ನೀಡಿದ್ದಾರೆಂಬ ವದಂತಿ ಹಬ್ಬಿತ್ತು. ಈ ಬಗ್ಗೆ ತಮ್ಮ ಟ್ವಿಟ್ಟರ್ ಹಾಗೂ ಫೇಸ್​​​​ಬುಕ್​​ನಲ್ಲಿ ಬರೆದುಕೊಂಡಿರುವ ಬುಲೆಟ್ ಪ್ರಕಾಶ್ ಮತ್ತೆ ರಮ್ಯಾಗೆ ಟಾಂಗ್ ನೀಡಿದ್ದಾರೆ. ಕೆಲವು ದಿನಗಳ ಹಿಂದೆ ಅಡಾಲ್ಫ್​ ಹಿಟ್ಲರ್ ಹಾಗೂ ಮೋದಿ ಫೋಟೋವನ್ನು ಜೊತೆ ಸೇರಿಸಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದ ರಮ್ಯಾ ವಿರುದ್ಧ ಬುಲೆಟ್ ಪ್ರಕಾಶ್ ಕಿಡಿ ಕಾರಿದ್ದರು. ಜಗತ್ತೇ ಮೆಚ್ಚುವ ನಾಯಕನ ಬಗ್ಗೆ ನೀವು ಈ ರೀತಿ ಮಾತನಾಡುವುದು ತಪ್ಪು ಎಂದು ಬುಲೆಟ್ ಪ್ರಕಾಶ್ ರಮ್ಯಾಗೆ ಬುದ್ಧಿ ಹೇಳಿದ್ದರು. ಇದೀಗ ಅವರು ಟ್ವಿಟರ್ ಖಾತೆಯನ್ನು ಡಿಲೀಟ್ ಮಾಡಿರುವ ಬಗ್ಗೆ ಕಾಲೆಳೆದಿದ್ದಾರೆ.

For All Latest Updates

TAGGED:

ABOUT THE AUTHOR

...view details