ಕರ್ನಾಟಕ

karnataka

ETV Bharat / state

ಬೆಂಗಳೂರಲ್ಲಿ ಮದವೇರಿದ ಗೂಳಿಯ ರಂಪಾಟ: ಇಬ್ಬರಿಗೆ ಗಂಭೀರ ಗಾಯ - ವಿಡಿಯೋ - ಬೆಂಗಳೂರಿನ ಅನ್ನಸಂದ್ರಪಾಳ್ಯದಲ್ಲಿ ಗೂಳಿ ದಾಳಿ

ಬೆಂಗಳೂರಲ್ಲಿ ಕೊಬ್ಬಿದ ಗೂಳಿವೊಂದು ಅಟ್ಟಹಾಸ ಮೆರೆದಿದೆ. ಅನ್ನಸಂದ್ರಪಾಳ್ಯದಲ್ಲಿ ಓಡಾಡುತ್ತಿದ್ದ ಗೂಳಿ ಇಬ್ಬರ ಮೇಲೆ ಮಾರಣಾಂತಿಕ ದಾಳಿ ಮಾಡಿದೆ.

Bull Attack in Bengaluru
ಸಾರ್ವಜನಿಕರ ಮೇಲೆ ದಾಳಿ ಮಾಡಿದ ಗೂಳಿ

By

Published : Sep 6, 2020, 10:39 AM IST

ಬೆಂಗಳೂರು: ಮದವೇರಿದ ಗೂಳಿಯ ತಿವಿತದಿಂದ ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಹೆಚ್​​ಎಎಲ್ ಠಾಣಾ ವ್ಯಾಪ್ತಿಯ ಅನ್ನಸಂದ್ರಪಾಳ್ಯದಲ್ಲಿ ನಡೆದಿದೆ.

ಸಾರ್ವಜನಿಕರ ಮೇಲೆ ದಾಳಿ ಮಾಡಿದ ಗೂಳಿ

ಘಟನೆಯಲ್ಲಿ ಗುರಪ್ಪಾ, ಸೆಲ್ವಕುಮಾರ್ ಎಂಬವರು ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಶನಿವಾರ ಬೆಳಗ್ಗೆಯಿಂದಲೂ ಅನ್ನಸಂದ್ರಪಾಳ್ಯದಲ್ಲಿ ಬೆದರಿಸಿದ ಸ್ಥಿತಿಯಲ್ಲಿ ಗೂಳಿ ಓಡಾಡುತ್ತಿತ್ತು.‌ ಹಲವು ಅಂಗಡಿ ಮುಂಗಟ್ಟು ಹಾಗೂ ವಾಹನಗಳನ್ನು ಜಖಂಗೊಳಿಸಿತ್ತು. ಈ ವೇಳೆ ಅಂಗಡಿಯೊಂದರ ಬಳಿ ಕುಳಿತಿದ್ದ ಗುರಪ್ಪ ಹಾಗೂ ಸೆಲ್ವಕುಮಾರ್ ಅವರಿಗೆ ಕೊಂಬಿನಿಂದ ತಿವಿದು ಗಾಯಗೊಳಿಸಿದೆ.

ABOUT THE AUTHOR

...view details