ಕರ್ನಾಟಕ

karnataka

ETV Bharat / state

ಬಜೆಟ್ ಗಾತ್ರ ಕಳೆದ ಬಾರಿಗಿಂತ ಹೆಚ್ಚಿರಲಿದೆ: ಸಿಎಂ ಬಿ.ಎಸ್.ಯಡಿಯೂರಪ್ಪ - ಬಜೆಟ್ ಸಿದ್ದತೆ ಕುರಿತು ಸಿ ಎಂ ಬಿ ಎಸ್ ಯಡಿಯೂರಪ್ಪ ಹೇಳಿಕೆ

ಕೊರೊನಾ ಕಾರಣದಿಂದ ಆರೇಳು ತಿಂಗಳು ತೆರಿಗೆ ಸಂಗ್ರಹ ಕುಸಿತವಾಗಿದ್ದು, ಐದಾರು ಸಾವಿರ ಕೋಟಿ ಸೋಂಕಿಗೆ ಖರ್ಚಾಯಿತು. ಇಷ್ಟಾದರೂ ಕಳೆದ ಬಜೆಟ್‌ಗೂ ಮೀರಿ ಉತ್ತಮ ಬಜೆಟ್ ಕೊಡುವ ಪ್ರಯತ್ನ ಮಾಡಿದ್ದೇನೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.

b-s-yadiyurappa
ಬಿ. ಎಸ್.​ ಯಡಿಯೂರಪ್ಪ

By

Published : Mar 5, 2021, 9:20 PM IST

ಬೆಂಗಳೂರು:ಕೊರೊನಾ ಆರ್ಥಿಕ ಕುಸಿತದ ನಡುವೆಯೂ ಈ ಬಾರಿ ಕಳೆದ ಬಾರಿಗಿಂತ ಬಜೆಟ್ ಗಾತ್ರ ಹೆಚ್ಚಾಗಿರಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

ಬಜೆಟ್ ಸಿದ್ಧತೆ ಪೂರ್ಣವಾಗಿದ್ದು, ನಾಳೆಯಿಂದ ಬಜೆಟ್ ಪ್ರತಿ ಮುದ್ರಣವಾಗಲಿದೆ. ರಾಜ್ಯದ ಹಣಕಾಸು ಸ್ಥಿತಿ‌ ಸುಧಾರಣೆಯಾಗಿದೆ. ಉತ್ತಮ ಬಜೆಟ್ ಕೊಡುವ ಪ್ರಯತ್ನ ಮಾಡುತ್ತಿದ್ದೇನೆ. ಎಲ್ಲಾ ಇಲಾಖೆಗಳ ಜೊತೆ ಸಾಕಷ್ಟು ಚರ್ಚೆ ಆದ ಮೇಲೆ ಈ ಬಾರಿ ಮಹಿಳೆಯರಿಗೆ ಹೆಚ್ಚಿನ ಒತ್ತು ನೀಡಿದ್ದೇವೆ. ಪ್ರವಾಸೋದ್ಯಮಕ್ಕೆ ಒತ್ತು ಕೊಡಲು ಯೋಚಿಸಲಾಗಿದೆ. ಎಲ್ಲರ ಸಲಹೆ ಪಡೆದು ನಮ್ಮ ಹಣಕಾಸು ಇತಿಮಿತಿಯಲ್ಲಿ ಏನೇನು ಸಾಧ್ಯವೋ ಅಷ್ಟು ಮಾಡುತ್ತೇನೆ ಎಂದು ಅವರು ಭರವಸೆ ನೀಡಿದ್ದಾರೆ.

ಕೊರೊನಾ ಕಾರಣದಿಂದ ಆರೇಳು ತಿಂಗಳು ತೆರಿಗೆ ಸಂಗ್ರಹ ಕುಸಿತವಾಗಿದ್ದು, ಐದಾರು ಸಾವಿರ ಕೋಟಿ ರೂ ಕೊರೊನಾಗೆ ಖರ್ಚಾಯಿತು. ಇಷ್ಟಾದರೂ ಕಳೆದ ಬಜೆಟ್‌ಗೂ ಮೀರಿ ಉತ್ತಮ ಬಜೆಟ್ ಕೊಡುವ ಪ್ರಯತ್ನ ಮಾಡಿದ್ದೇನೆ. ಹೆಚ್ಚು ಸಾಲ ಪಡೆಯಲು ಕೇಂದ್ರ ಅವಕಾಶ ನೀಡಿದ್ದು, ಅದನ್ನು ಬಳಸಿಕೊಂಡು ಬಜೆಟ್ ಗಾತ್ರ ಹೆಚ್ಚಿಸುತ್ತಿದ್ದೇನೆ ಎಂದರು.

ಪ್ರತಿ ಜಿಲ್ಲೆಗೆ ಎರಡಾದರೂ ವಿಶೇಷ ಕಾರ್ಯಕ್ರಮ ಕೊಡುತ್ತೇನೆ. 31 ಜಿಲ್ಲೆಗೂ ಆದ್ಯತೆ ನೀಡಲಿದ್ದೇವೆ. ಈ ಬಾರಿ ಮಹಿಳೆಯರಿಗೆ ಹೆಚ್ಚಿನ ಆದ್ಯತೆ ಮತ್ತು ಅಷ್ಟೇ ಆದ್ಯತೆ ಕೃಷಿ ಕ್ಷೇತ್ರ ಮತ್ತು ರೈತರಿಗೆ ಕೊಡಲಿದ್ದೇವೆ. ನೀರಾವರಿ ಕ್ಷೇತ್ರಕ್ಕೂ ಪ್ರೋತ್ಸಾಹ ನೀಡಿದ್ದೇನೆ ಎಂದು ತಿಳಿಸಿದ್ದಾರೆ.

ಏಳೆಂಟು ತಿಂಗಳಲ್ಲಿ ಬೆಂಗಳೂರು‌ ಚಿತ್ರಣ ಬದಲಾಗಲಿದೆ. ಅದಕ್ಕೆ ಪೂರಕ ಕಾರ್ಯಕ್ರಮ‌ ಬಜೆಟ್​ನಲ್ಲಿ ರೂಪಿಸಿದ್ದೇವೆ. ರಾಜಕಾಲುವೆ, ರಸ್ತೆ ಸೇರಿ ಎಲ್ಲದಕ್ಕೂ ಆದ್ಯತೆ ನೀಡಿದ್ದೇನೆ. ಬೆಂಗಳೂರಿನ ಸರ್ವಾಂಗೀಣ ಅಭಿವೃದ್ಧಿಗೆ ಕ್ರಮ ಕೈಗೊಂಡು ವಿಶೇಷ ಕಾರ್ಯಕ್ರಮಗಳ ಘೋಷಣೆ ಮಾಡುತ್ತೇನೆ ಎಂದರು.

ಕಳೆದ ಬಾರಿಗಿಂತ ಒಳ್ಳೆಯ ಬಜೆಟ್ ಮಂಡಿಸುತ್ತೇನೆ ಎಂದ ಅವರು, ಜನ ಈಗಾಗಲೇ ಪೆಟ್ರೋಲ್, ಡೀಸೆಲ್ ದರ ಹೆಚ್ಚಳ ಇತ್ಯಾದಿಗಳಿಂದ ಹೈರಾಣಾಗಿದ್ದಾರೆ. ಹಾಗಾಗಿ, ರಾಜ್ಯದಿಂದ ನಮ್ಮ ಜನರಿಗೆ ಹೊಸ ತೆರಿಗೆ ಇರುವುದಿಲ್ಲ ಎಂದು ತಿಳಿಸಿದರು.

ಇದನ್ನೂ ಓದಿ:ನನಗೆ ಸಿಡಿ ಕೊಟ್ಟಿದ್ದು ಸಂತ್ರಸ್ತೆ ಕುಟುಂಬಸ್ಥರು: ದಿನೇಶ್ ಕಲ್ಲಹಳ್ಳಿ

ಹಿಂದಿನ ಯಾವುದೇ ಕಾರ್ಯಕ್ರಮ ನಿಲ್ಲಿಸುವುದಿಲ್ಲ. ಆದ್ಯತೆ ಮೇಲೆ ಹಣಕಾಸು ಲಭ್ಯತೆ ನೋಡಿಕೊಂಡು ಯೋಜನೆಗಳನ್ನು ರೂಪಿಸಲಾಗುತ್ತದೆ ಎಂದ ಅವರು, ಪೆಟ್ರೋಲ್ ಮೇಲಿನ ಸೆಸ್ ಕಡಿಮೆ ಮಾಡುವ ಸ್ಥಿತಿಯಲ್ಲಿ ರಾಜ್ಯ ಸರ್ಕಾರ ಇಲ್ಲ. ಹಾಗಾಗಿ, ಸೆಸ್ ಕಡಿಮೆ ಮಾಡಲ್ಲ, ಏನೇ ಮಾಡುವುದಿದ್ದರೂ ಅದನ್ನು ಕೇಂದ್ರ ಸರ್ಕಾರವೇ ಮಾಡಬೇಕೆಂದರು.

For All Latest Updates

TAGGED:

ABOUT THE AUTHOR

...view details