ಬೆಂಗಳೂರು:ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು 2022-23ನೇ ಸಾಲಿನ ರಾಜ್ಯ ಬಜೆಟ್ ಮಂಡಿಸಿದ್ದಾರೆ. ನಗರಾಭಿವೃದ್ಧಿಗೆ ಕ್ಷೇತ್ರಕ್ಕೆ ಸರ್ಕಾರದ ಘೋಷಣೆಗಳು ಹೀಗಿವೆ..
- ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ ಯೋಜನೆಗೆ ಮುಂದಿನ ಎರಡು ವರ್ಷಗಳಲ್ಲಿ ಒಟ್ಟು 3,885 ಕೋಟಿ ರೂ. ವೆಚ್ಚದಲ್ಲಿ ಅನುಷ್ಠಾನ
- ಕೇಂದ್ರ ಪುರಸ್ಕೃತ ಅಮೃತ್ 2.0 ಯೋಜನೆಯಡಿ ಆಯ್ದ ನಗರಗಳಲ್ಲಿ ನೀರು ಹಾಗೂ ಒಳಚರಂಡಿ ವ್ಯವಸ್ಥೆ ಕಲ್ಪಿಸಲು ರಾಜ್ಯಕ್ಕೆ 4,615 ಕೋಟಿ ರೂ. ಹಂಚಿಕೆ
- ಕೇಂದ್ರ ಪುರಸ್ಕೃತ ಸ್ವಚ್ಛ ಭಾರತ ಮಿಷನ್-2.0 ಅನುಷ್ಠಾನಕ್ಕೆ ಮುಂದಿನ 5 ವರ್ಷಗಳ ಅವಧಿಗೆ ಕೇಂದ್ರದಿಂದ 2,245 ಕೋಟಿ ಮೀಸಲು
- ವಿದ್ಯುತ್ ಸ್ವಾವಲಂಬನೆಗೆ 5 ಜಿಲ್ಲೆಗಳ 15 ಕೈಗಾರಿಕಾ ಪ್ರದೇಶಗಳ ವಿದ್ಯುತ್ ಅಡಚಣೆ ನಿವಾರಣೆಗೆ ಕೆಪಿಟಿಸಿಎಲ್ ಮತ್ತು ಎಸ್ಕಾಂಗಳಿಂದ ಕ್ರಮ
- ಶರಾವತಿ ಸಂಕೀರ್ಣದಲ್ಲಿ 5,391 ಕೋಟಿ ರೂ. ಅಂದಾಜು ವೆಚ್ಚದಲ್ಲಿ KPCL ನಿಂದ 2,000 ಮೆ.ವ್ಯಾ. ಸಾಮರ್ಥ್ಯದ ಭೂಗರ್ಭ ವಿದ್ಯುತ್ ಕೇಂದ್ರ ಸ್ಥಾಪನೆ
- ಕೆಪಿಟಿಸಿಎಲ್ ವತಿಯಿಂದ 64 ಹೊಸ ಉಪಕೇಂದ್ರಗಳ ಸ್ಥಾಪನೆಗೆ ಗ್ರೀನ್ ಹೈಡ್ರೋಜನ್ ನೀತಿ ರೂಪಿಸಲು ರಾಜ್ಯ ಸರ್ಕಾರದ ಚಿಂತನೆ
- ರಾಜ್ಯದ 8 ಜಿಲ್ಲೆಗಳಲ್ಲಿ 5,000 ಮೆಗಾವ್ಯಾಟ್ ಸಾಮರ್ಥ್ಯದ ಹೈಬ್ರಿಡ್ ಪಾರ್ಕ್ ಸ್ಥಾಪನೆಯ ಕಾರ್ಯ ಸಾಧ್ಯತೆ
ರಸ್ತೆ ಮತ್ತು ರೈಲು ಮಾರ್ಗ ಅಭಿವೃದ್ಧಿ:
- ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ ಹಂತ-4ರ ಘಟ್ಟ-2 ರಡಿ ಒಟ್ಟು 2,275 ಕಿ.ಮೀ. ರಾಜ್ಯ ಹೆದ್ದಾರಿ ಅಭಿವೃದ್ಧಿಗೆ 3,500 ಕೋಟಿ ಮೀಸಲು
- ಜೀವಿತಾವಧಿ ಮೀರಿದ 1,008 ಕಿ.ಮೀ ಉದ್ದದ ರಾಜ್ಯ ಹೆದ್ದಾರಿಗಳ ಮರುಡಾಂಬರೀಕರಣಕ್ಕೆ 440 ಕೋಟಿ ರೂ. ಅನುದಾನ
- 640 ಕೋಟಿ ಅಂದಾಜು ವೆಚ್ಚದ 55 ಕಿ.ಮೀ. ಉದ್ದದ ಗದಗ-ಯಲವಿಗಿ ನೂತನ ರೈಲು ಮಾರ್ಗ ಯೋಜನೆಗೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ
- 927 ಕೋಟಿ ರೂ. ವೆಚ್ಚದ ಧಾರವಾಡ-ಕಿತ್ತೂರು-ಬೆಳಗಾವಿ ನೂತನ ರೈಲು ಮಾರ್ಗ ಯೋಜನೆಯ ತ್ವರಿತ ಅನುಷ್ಠಾನಕ್ಕೆ ಕ್ರಮ
- ಚೆನ್ನೈ-ಬೆಂಗಳೂರು-ಮೈಸೂರು ಹೈಸ್ಪೀಡ್ ರೈಲು ಕಾರಿಡಾರ್ ಯೋಜನೆ ಅನುಷ್ಠಾನಕ್ಕೆ ಕೇಂದ್ರದೊಂದಿಗೆ ಸಹಯೋಗ
- ರಾಷ್ಟ್ರೀಯ ಹೆದ್ದಾರಿ ಅಕ್ಕಪಕ್ಕದಲ್ಲಿರುವ ನದಿಗಳ ಹೂಳೆತ್ತುವಿಕೆ ಮತ್ತು ಹೊಸ ನಿರ್ಮಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸಹಭಾಗಿತ್ವದಲ್ಲಿ ಹೊಸ ಯೋಜನೆ