ಬೆಂಗಳೂರು:ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದು ಮಂಡಿಸಿದ ಬಜೆಟ್ ಟೀಕಿಸಿರುವ ಪ್ರತಿಪಕ್ಷ ಕಾಂಗ್ರೆಸ್, ''ಸರ್ಕಾರ ಕಿವಿ ಮೇಲೆ ಹೂ ಇಟ್ಟಿದೆ. ಜನರಿಗೆ ಚಿಪ್ಪು ಸಿಕ್ಕಿದೆ'' ಎಂದರೆ, ''ಖಾಲಿ ಡಬ್ಬಾ ಬಜೆಟ್'' ಎಂದು ಜೆಡಿಎಸ್ ವ್ಯಂಗ್ಯವಾಡಿದೆ. ಕಾಂಗ್ರೆಸ್ ನಾಯಕ ಯು.ಟಿ.ಖಾದರ್ ಪ್ರತಿಕ್ರಿಯಿಸಿ, ''ಜಾತ್ರೆಯಲ್ಲಿ ಜನಾಕರ್ಷಣೆಗೆ ಮ್ಯೂಸಿಕ್ ಬ್ಯಾಂಡ್ ಬಾರಿಸಿದ್ದಾರೆ. ಶಬ್ದದಿಂದ ಯಾವುದೂ ಪ್ರಯೋಜನ ಇಲ್ಲ" ಎಂದರು.
ಕರಾವಳಿಗೆ ದ್ರೋಹ:''ಎರಡು ವರ್ಷದಲ್ಲಿ ಘೋಷಣೆ ಮಾಡಿದ್ದನ್ನೇ ಮತ್ತೆ ಘೋಷಿಸಿದ್ದಾರೆ. ಯಾವುದೇ ಯೋಜನೆ ಇಲ್ಲದ ನಿರಾಶಾದಾಯಕ ಬಜೆಟ್. ಆಲೋಚನೆ ಇಲ್ಲದ ಸರ್ಕಾರ ಅಂತ ಜನ ತೀರ್ಮಾನಿಸುತ್ತಾರೆ. ಕರಾವಳಿ ಜಿಲ್ಲೆಗೆ, ಮೀನುಗಾರರಿಗೆ ಸಂಪೂರ್ಣ ದ್ರೋಹ ಬಗೆದಿದ್ದಾರೆ'' ಎಂದು ಖಾದರ್ ಹೇಳಿದ್ದಾರೆ.