ಬೆಂಗಳೂರು: ಬಿಜೆಪಿ ಸಂಸ್ಥಾಪನಾ ದಿನದ ಪ್ರಯುಕ್ತ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ. ನಡ್ಡಾ ನೀಡಿರುವ ಕರೆಯಂತೆ ಒಂದು ದಿನ ಒಪ್ಪತ್ತಿನ ಉಪವಾಸ ಮಾಡುತ್ತಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪಕ್ಷದ ಕಾರ್ಯಕರ್ತರೆಲ್ಲರೂ ಒಪ್ಪೊತ್ತಿನ ಊಟ ತ್ಯಜಿಸುವಂತೆ ಕರೆ ನೀಡಿದ್ದಾರೆ.
ಬಿಜೆಪಿ ಸಂಸ್ಥಾಪನಾ ದಿನಾಚರಣೆ ಸರಳವಾಗಿ ಆಚರಣೆ ಮಾಡಲಾಗುತ್ತಿದ್ದು, ಈ ಸಂದರ್ಭದಲ್ಲಿ ಕೊರೊನಾ ವಿರುದ್ಧ ಹೋರಾಟ ನಡೆಸುತ್ತಿರುವ ವೈದ್ಯರು, ನರ್ಸ್ , ಪೊಲೀಸರು, ಆಶಾ ಕಾರ್ಯಕರ್ತೆಯರು, ಸರ್ಕಾರಿ ನೌಕರರು, ಮಾಧ್ಯಮದವರು ಹಗಲಿರುಳು ದುಡಿಯುತ್ತಿದ್ದಾರೆ, ಅವರಿಗೆ ಒಪ್ಪತ್ತಿನ ಉಪವಾಸದ ಮೂಲಕ ಗೌರವ ಸೂಚಿಸಿ ಬೆಂಬಲ ನೀಡುವಂತೆ ಕಾರ್ಯಕರ್ತರಿಗೆ ಜೆ.ಪಿ ನಡ್ಡಾ ಕರೆ ನೀಡಿದ್ದಾರೆ. ಅದರಂತೆ ನಾನು ಇಂದು ಉಪವಾಸ ಮಾಡುತ್ತಿದ್ದೇನೆ ಕಾರ್ಯಕರ್ತರು ಕೂಡ ಒಪ್ಪತ್ತಿನ ಉಪವಾಸ ಮಾಡಬೇಕೆಂದು ವೀಡಿಯೋ ಸಂದೇಶದ ಮೂಲಕ ಸಿಎಂ ಕರೆ ನೀಡಿದ್ದಾರೆ.