ಬೆಂಗಳೂರು:ವೀರಶೈವ ಲಿಂಗಾಯತ ಸಮುದಾಯಕ್ಕೆ ಮೀಸಲಾತಿ ವಿಚಾರವಾಗಿ ಇಂದಿನ ಸಂಪುಟದಲ್ಲಿ ಯಾವುದೇ ನಿರ್ಣಯ ಕೈಗೊಳ್ಳುವುದಿಲ್ಲ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಸ್ಪಷ್ಟಪಡಿಸಿದರು.
ವೀರಶೈವ ಲಿಂಗಾಯತ ಮೀಸಲಾತಿ ತೀರ್ಮಾನ ದಿಢೀರ್ ಕೈಬಿಟ್ಟ ಬಿಎಸ್ವೈ - 'CM BSY MEETING
ಇಂದಿನ ಸಂಪುಟ ಸಭೆಯಲ್ಲಿ ವೀರಶೈವ ಲಿಂಗಾಯತ ಸಮುದಾಯಕ್ಕೆ ಒಬಿಸಿ ಮೀಸಲಾತಿ ಕುರಿತು ನಿರ್ಣಯ ಕೈಗೊಳ್ಳದಿರಲು ಸಿಎಂ ಬಿಎಸ್ವೈ ನಿರ್ಧರಿಸಿದ್ದಾರೆ. ದೆಹಲಿಗೆ ತೆರಳಿ ಈ ಕುರಿತು ಚರ್ಚಿಸುವುದಾಗಿ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಮಾತನಾಡಿದ ಅವರು, ದೆಹಲಿಗೆ ಹೋಗಿ ಸಮಾಲೋಚನೆ ಮಾಡಿದ ಬಳಿಕ ಈ ಬಗ್ಗೆ ತೀರ್ಮಾನ ಮಾಡ್ತೇವೆ. ಕ್ಯಾಬಿನೆಟ್ ಸಹೋದ್ಯೋಗಿಗಳ ತೀರ್ಮಾನವೂ ಅದೇ ಆಗಿದೆ. ಇದೊಂದು ವಿಶೇಷ ತೀರ್ಮಾನ ಆಗಲಿದೆ. ಮಹತ್ವದ ಕಾರಣಕ್ಕೋಸ್ಕರ ಈ ತೀರ್ಮಾನ ಮಾಡಿದ್ದೇವೆ. ಆದರೆ ದೆಹಲಿಗೆ ಹೋಗಿ ಬಂದ ಬಳಿಕ ಮೀಸಲಾತಿ ಈ ವಿಚಾರವನ್ನು ಅಂತಿಮ ಮಾಡುತ್ತೇವೆ. ಇಂದಿನ ಸಂಪುಟದಲ್ಲಿ ಯಾವುದೇ ನಿರ್ಣಯ ಕೈಗೊಳ್ಳೋದಿಲ್ಲ ಎಂದರು.
ಸಂಪುಟ ವಿಸ್ತರಣೆ ಸಂಬಂಧ ಮಾತನಾಡಿದ ಸಿಎಂ, ಈಗಷ್ಟೇ ಅಮಿತ್ ಶಾ ಜೊತೆ ಮಾತನಾಡಿದ್ದೇನೆ. ಎರಡು ದಿನದಲ್ಲಿ ಸಂಪುಟ ವಿಸ್ತರಣೆ ಬಗ್ಗೆ ಅಂತಿಮಗೊಳಿಸಿ ಪಟ್ಟಿ ಕಳುಹಿಸುತ್ತೀವಿ ಎಂದು ಶಾ ಹೇಳಿದ್ದಾರೆ ಎಂದು ಬಿಎಸ್ವೈ ಮಾಹಿತಿ ನೀಡಿದರು.