ಕರ್ನಾಟಕ

karnataka

ETV Bharat / state

ಉಕ್ರೇನ್​ನಿಂದ ನವೀನ್ ಪಾರ್ಥಿವ ಶರೀರ ತರಿಸಲು ನೆರವು: ಕುಟುಂಬಕ್ಕೆ ಬಿಎಸ್​ವೈ ಸಾಂತ್ವನ - ಉಕ್ರೇನ್ ನಲ್ಲಿ ರಷ್ಯಾ ನಡೆಸಿದ ಬಾಂಬ್ ದಾಳಿಯಲ್ಲಿ ಮೃತಪಟ್ಟ ಕನ್ನಡಿಗ ನವೀನ್

Karnataka student dies in Russia Ukraine War.. ರಷ್ಯಾ-ಉಕ್ರೇನ್ ಯುದ್ಧದಲ್ಲಿ ಬಾಂಬ್ ದಾಳಿಗೆ ಬಲಿಯಾಗಿರುವ ಕರ್ನಾಟಕದ ನವೀನ್ ಕುಟುಂಬಕ್ಕೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕರೆ ಮಾಡಿ ಸಾಂತ್ವನ ಹೇಳಿದ್ದಾರೆ.

ಉಕ್ರೇನ್​ನಿಂದ ನವೀನ್ ಪಾರ್ಥೀವ ಶರೀರ ತರಿಸಲು ನೆರವು: ಬಿಎಸ್​ವೈ
ಉಕ್ರೇನ್​ನಿಂದ ನವೀನ್ ಪಾರ್ಥೀವ ಶರೀರ ತರಿಸಲು ನೆರವು: ಬಿಎಸ್​ವೈ

By

Published : Mar 1, 2022, 5:26 PM IST

Updated : Mar 1, 2022, 5:42 PM IST

ಬೆಂಗಳೂರು/ಹಾವೇರಿ: ಉಕ್ರೇನ್ ನಲ್ಲಿ ರಷ್ಯಾ ನಡೆಸಿದ ಬಾಂಬ್ ದಾಳಿಯಲ್ಲಿ ಮೃತಪಟ್ಟ ಕನ್ನಡಿಗ, ಹಾವೇರಿ ಜಿಲ್ಲೆ ಚಳಗೇರಿ ಗ್ರಾಮದ ನವೀನ್ ಪಾರ್ಥಿವ ಶರೀರವನ್ನು ರಾಜ್ಯಕ್ಕೆ ತರಿಸಲು ಅಗತ್ಯ ನೆರವು ಕಲ್ಪಿಸುವುದಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ನವೀನ್​ ತಂದೆ ಶೇಖರಪ್ಪ ಅವರಿಗೆ ಭರವಸೆ ನೀಡಿದ್ದಾರೆ.

ಉಕ್ರೇನ್​ನಿಂದ ನವೀನ್ ಪಾರ್ಥಿವ ಶರೀರ ತರಿಸಲು ನೆರವು: ಕುಟುಂಬಕ್ಕೆ ಬಿಎಸ್​ವೈ ಸಾಂತ್ವನ

ರಷ್ಯಾ-ಉಕ್ರೇನ್ ಯುದ್ಧದಲ್ಲಿ ಬಾಂಬ್ ದಾಳಿಗೆ ಬಲಿಯಾಗಿರುವ ಕರ್ನಾಟಕದ ನವೀನ್ ಕುಟುಂಬಕ್ಕೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕರೆ ಮಾಡಿ ನವೀನ್​ ತಂದೆಗೆ ಸಾಂತ್ವನ ಹೇಳಿದರು.

ನವೀನ್ ಕುಟುಂಬಕ್ಕೆ ಧೈರ್ಯ ಹೇಳಿದ ಮಾಜಿ ಮುಖ್ಯಮಂತ್ರಿ, ಮೃತದೇಹ ತರಿಸಲು ಎಲ್ಲಾ ರೀತಿಯ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ. ಹಾಗೆ ಕುಟುಂಬದ ಜೊತೆ ನಾವಿದ್ದೇವೆ ಎನ್ನುವ ಅಭಯ ನೀಡಿದ್ದಾರೆ.

Last Updated : Mar 1, 2022, 5:42 PM IST

For All Latest Updates

ABOUT THE AUTHOR

...view details