ಕರ್ನಾಟಕ

karnataka

ETV Bharat / state

ಉಪಸಭಾಪತಿ ಕತ್ತು ಹಿಡಿದು ಎಳೆದಾಡಿದ್ದು, ಕಾಂಗ್ರೆಸ್​​ನ ಸಂಸ್ಕೃತಿ ತೋರಿಸುತ್ತೆ.. ಸಿಎಂ ಬಿಎಸ್‌ವೈ ಕಿಡಿ - Legislature Council Incident

ನಿನ್ನೆಯೇ ಬಹಿರಂಗವಾಗಿ ಉಪಸಭಾಪತಿಗಳನ್ನು ಕೂರಿಸುವುದಾಗಿ ಹೇಳಿದ್ದೇವೆ. ಅವಿಶ್ವಾಸ ನಿರ್ಣಯ ಮಂಡನೆ ಆದ ಮೇಲೆ ಉಪಸಭಾಪತಿಗಳೇ ಮುಂದುವರೆಯುತ್ತಾರೆ. ಬೆಲ್ ಆದ ಮೇಲೆ ಬಂದರು, ಮೊದಲು ಬಂದರು ಅದೆಲ್ಲ ಮುಖ್ಯವಲ್ಲ. ಬಹುಮತ ಇಲ್ಲ ಅನ್ನುವುದಷ್ಟೇ ಮುಖ್ಯ..

BSY Reactions About Legislature Council Incident
ಸಿಎಂ ಯಡಿಯೂರಪ್ಪ

By

Published : Dec 15, 2020, 3:15 PM IST

Updated : Dec 15, 2020, 3:26 PM IST

ಬೆಂಗಳೂರು :ಉಪ ಸಭಾಪತಿಗಳನ್ನು ಕತ್ತು ಹಿಡಿದು ಎಳೆದಾಡಿದ್ದು ದೇಶದಲ್ಲೇ ಮೊದಲು. ಇದು ಕಾಂಗ್ರೆಸ್​​ನವರ ಸಂಸ್ಕೃತಿ ತೋರಿಸುತ್ತದೆ ಎಂದು ಸಿಎಂ ಯಡಿಯೂರಪ್ಪ ಕಿಡಿ ಕಾರಿದರು‌.

ವಿಧಾನಸೌಧದಲ್ಲಿ ಮಾತನಾಡಿದ ಅವರು, ಹಾಲಿ ಸಭಾಪತಿಗಳಿಗೆ ಜೆಡಿಎಸ್ ಬಹಿರಂಗವಾಗಿ ಅವಿಶ್ವಾಸ ನಿರ್ಣಯ ಬೆಂಬಲಿಸಿದೆ. ಬೆಂಬಲ ಇಲ್ಲದ ಮೇಲೆ, ಬಹುಮತ ಇಲ್ಲದ ಮೇಲೆ ಸಭಾಪತಿ ಸ್ಥಾನಕ್ಕೆ ರಾಜೀನಾಮೆ ಕೊಡಿಸುವುದು ಕಾಂಗ್ರೆಸ್​​ನವರ ಕರ್ತವ್ಯ.

ಕಾನೂನಿನ ಚೌಕಟ್ಟಿನ ಪ್ರಕಾರ ಒಂದು ಸಾರಿ ನಿಮ್ಮ ಮೇಲೆ ಅವಿಶ್ವಾಸ ನಿರ್ಣಯ ಕೈಗೊಂಡ ಮೇಲೆ ನಿಮಗೆ ಆ ಕುರ್ಚಿಯಲ್ಲಿ ಕೂರಲು ಅರ್ಹತೆಯಿಲ್ಲ. ಇದು ಇಡೀ ಜಗತ್ತಿಗೆ ಗೊತ್ತಿದೆ ಎಂದರು.

ಇದನ್ನೂ ಓದಿ :ಪರಿಷತ್ ಗದ್ದಲಕ್ಕೆ ಮೂರು ಪಕ್ಷದ ಸದಸ್ಯರು ಜವಾಬ್ದಾರಿ: ಶ್ರೀಕಂಠೇಗೌಡ

ಸುಪ್ರೀಂಕೋರ್ಟ್​ನಲ್ಲಿ ಈ ಬಗ್ಗೆ ಅನೇಕ ತೀರ್ಮಾನಗಳಿವೆ. ನಿನ್ನೆಯೇ ಬಹಿರಂಗವಾಗಿ ಉಪಸಭಾಪತಿಗಳನ್ನು ಕೂರಿಸುವುದಾಗಿ ಹೇಳಿದ್ದೇವೆ. ಅವಿಶ್ವಾಸ ನಿರ್ಣಯ ಮಂಡನೆ ಆದ ಮೇಲೆ ಉಪಸಭಾಪತಿಗಳೇ ಮುಂದುವರೆಯುತ್ತಾರೆ. ಬೆಲ್ ಆದ ಮೇಲೆ ಬಂದರು, ಮೊದಲು ಬಂದರು ಅದೆಲ್ಲ ಮುಖ್ಯವಲ್ಲ. ಬಹುಮತ ಇಲ್ಲ ಅನ್ನುವುದಷ್ಟೇ ಮುಖ್ಯ.

ಉಪಸಭಾಪತಿಗಳನ್ನು ಕತ್ತು ಹಿಡಿದು ಎಳೆದಾಡಿದ್ದು, ದೇಶದ ಇತಿಹಾಸದಲ್ಲೇ ಮೊದಲು. ಕಾಂಗ್ರೆಸ್​​ನವರು ಸಭಾಪತಿಗಳಿಗೆ ರಾಜೀನಾಮೆ ಬಿಸಾಕುವುದಕ್ಕೆ ಹೇಳಿ ಎಂದು ವಾಗ್ದಾಳಿ ನಡೆಸಿದರು.

ಸಿಎಂ ಯಡಿಯೂರಪ್ಪ

ರಾಜ್ಯಪಾಲರಿಗೆ ಮೆರವಣಿಗೆಯಲ್ಲಿ ಹೋಗಿ ಜೆಡಿಎಸ್-ಬಿಜೆಪಿಯ ಪರಿಷತ್ ಸದಸ್ಯರು ಮನವಿ ಕೊಡ್ತಾರೆ. ಇಲ್ಲಿ ನಡೆದ ಪ್ರತಿ ಘಟನೆ ರಾಜ್ಯಪಾಲರಿಗೆ ಹೇಳ್ತಾರೆ ಎಂದು ಸ್ಪಷ್ಟಪಡಿಸಿದರು.

Last Updated : Dec 15, 2020, 3:26 PM IST

ABOUT THE AUTHOR

...view details