ಬೆಂಗಳೂರು :ರಾಜೀನಾಮೆ ನೀಡಿ ವಾಪಾಸ್ಸಾಗುತ್ತಿದ್ದ ವೇಳೆ ಚಿಕ್ಕಬಳ್ಳಾಪುರ ಶಾಸಕ ಸುಧಾಕರ್ ಅವರನ್ನು ಎಳೆದು ಕೂಡಿಹಾಕಿ ಗೂಂಡಾಗಿರಿ ಮಾಡಿದ್ದಾರೆ. ರಾಜ್ಯದಲ್ಲಿ ಪ್ರಜಾಪ್ರಭುತ್ವ ಇಲ್ಲ ಎಂಬುದಕ್ಕೆ ಇದೊಂದು ತಾಜಾ ಉದಾಹರಣೆ. ಕುಮಾರಸ್ವಾಮಿ ರಾಜೀನಾಮೆ ಕೊಟ್ಟಿದ್ದರೆ ಇಂತಹ ಘಟನೆ ತಡೆಯಬಹುದಾಗಿತ್ತು ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿ ಪ್ರಜಾಪ್ರಭುತ್ವವಿಲ್ಲ ಎಂಬುದಕ್ಕೆ ಇಂದಿನ ಬೆಳವಣಿಗೆ ತಾಜಾ ಉದಾಹರಣೆ: ಬಿಎಸ್‌ವೈ - ಕುಮಾರಸ್ವಾಮಿ
ರಾಜೀನಾಮೆ ನೀಡಿ ವಾಪಾಸಾಗುತ್ತಿದ್ದ ವೇಳೆ ಶಾಸಕ ಸುಧಾಕರ್ ಅವರನ್ನು ಎಳೆದು ಕೂಡಿಹಾಕಿ ಗೂಂಡಾಗಿರಿ ಮಾಡಿದ್ದಾರೆ. ರಾಜ್ಯದಲ್ಲಿ ಪ್ರಜಾಪ್ರಭುತ್ವ ಇಲ್ಲ ಎಂಬುದಕ್ಕೆ ಇದು ತಾಜಾ ಉದಾಹರಣೆ. ಕುಮಾರಸ್ವಾಮಿ ರಾಜೀನಾಮೆ ಕೊಟ್ಟಿರುತ್ತಿದ್ದರೆ ಇಂತಹ ಘಟನೆ ತಡೆಯಬಹುದಾಗಿತ್ತು ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಗರಂ ಆದರು.
ಬಿ.ಎಸ್.ಯಡಿಯೂರಪ್ಪ
ಸ್ಪೀಕರ್ ಕೆ ಆರ್ ರಮೇಶ್ ಕುಮಾರ್ ನಗುತ್ತಾ ತನಗೆ ಸಂಬಂಧ ಇಲ್ಲ ಎಂದು ಹೋದರೆ ರಕ್ಷಣೆ ಕೊಡೋರು ಯಾರು ಎಂದು ಸ್ಪೀಕರ್ ನಡೆಯನ್ನು ಬಿಎಸ್‌ವೈ ಖಾರವಾಗಿ ಪ್ರಶ್ನಿಸಿದರು. ಕೂಡಲೇ ಸುಧಾಕರ್ ಅವರನ್ನು ಬಿಡುಗಡೆ ಮಾಡಬೇಕು, ಜೊತೆಗೆ ಅವರಿಗೆ ಪೊಲೀಸ್ ರಕ್ಷಣೆ ಒದಗಿಸಬೇಕು ಎಂದು ಅವರು ಆಗ್ರಹಿಸಿದರು.
ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ನಿರ್ಬಂಧ ವಿಚಾರವಾಗಿ ಪ್ರತಿಕ್ರಿಯಿಸಿದ ಬಿಎಸ್‌ವೈ, ಇದು ಪ್ರಜಾಪ್ರಭುತ್ವದ ಕಗ್ಗೊಲೆ, ಅಕ್ಷಮ್ಯ ಅಪರಾಧ. ಈ ಬೆಳವಣಿಗೆ ಪುನರಾವರ್ತನೆಯಾದರೆ ನಾವೂ ಕೂಡ ತಕ್ಕ ಉತ್ತರ ಕೊಡಬೇಕಾಗುತ್ತದೆ ಎಂದು ಎಚ್ಚರಿಸಿದರು.