ಕರ್ನಾಟಕ

karnataka

ETV Bharat / state

ಕಂಕಣ ಸೂರ್ಯ ಗ್ರಹಣ: ಪೂರ್ವ ನಿಯೋಜಿತ ಕಾರ್ಯಕ್ರಮಗಳಿಗೆ ಸಿಎಂ ಬ್ರೇಕ್​

ಕಂಕಣ ಸೂರ್ಯ ಗ್ರಹಣದ ಹಿನ್ನಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರವರು ಯಾವುದೇ ಪೂರ್ವ ನಿಯೋಜಿತ ಕಾರ್ಯಕ್ರಮಕ್ಕೆ ಒಪ್ಪಿಕೊಳ್ಳದೇ ಸಂಜೆವರೆಗೂ ಮನೆಯಲ್ಲೇ ಇರಲು ನಿರ್ಧರಿಸಿದ್ದಾರೆ.

solar eclips
ಸೂರ್ಯಗ್ರಹಣದ ಹಿನ್ನಲೆ: ಪೂರ್ವ ನಿಯೋಜಿತ ಕಾರ್ಯಕ್ಕೆ ಸಿಎಂ ಬ್ರೇಕ್

By

Published : Dec 26, 2019, 9:31 AM IST

Updated : Dec 26, 2019, 10:14 AM IST

ಬೆಂಗಳೂರು:ಕಂಕಣ ಸೂರ್ಯ ಗ್ರಹಣದ ಹಿನ್ನಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಯಾವುದೇ ಪೂರ್ವ ನಿಯೋಜಿತ ಕಾರ್ಯಕ್ರಮಕ್ಕೆ ತೆರಳದೇ ಸಂಜೆವರೆಗೂ ಮನೆಯಲ್ಲೇ ಇರಲು ನಿರ್ಧರಿಸಿದ್ದಾರೆ.

ಈ ಸೂರ್ಯ ಗ್ರಹಣ ವೃಶ್ಚಿಕ ರಾಶಿಯವರಿಗೆ ಹೆಚ್ಚಿನ ಪ್ರಭಾವ ಬೀರುತ್ತೆ ಎಂದು ಜ್ಯೋತಿಷಿಗಳ ಹೇಳಿಕೆ‌ ಬೆನ್ನಲ್ಲೇ ಕೇರಳದ ದೇವಸ್ಥಾನಗಳಿಗೆ ತೆರಳಿ ವಿಶೇಷ ಪೂಜೆ‌ ಸಲ್ಲಿಸಿ ಬಂದಿರುವ ಸಿಎಂ, ಗ್ರಹಣ ಮುಗಿಯುವ ತನಕ ಮನೆ ಬಿಟ್ಟು ಹೊರಗಡೆ ಬರದಿರಲು ನಿರ್ಧರಿಸಿದ್ದಾರೆ. ಗ್ರಹಣ ಮುಗಿದ ಬಳಿಕ ತಮ್ಮ ಧವಳಗಿರಿ ನಿವಾಸಲ್ಲೇ ಪೂಜಾ ಕಾರ್ಯ ನೆರವೇರಿಸುವ ಸಾಧ್ಯತೆಯಿದೆ ಎನ್ನಲಾಗಿದೆ.

ಗ್ರಹಣ ಮುಗಿಯುವವರೆಗೂ ಯಾವುದೇ ರೀತಿಯ ರಾಜಕೀಯ ಚಟುವಟಿಕೆಯಲ್ಲಿಯೂ ಸಿಎಂ ತೊಡಗುವುದಿಲ್ಲ ಎಂಬ ಕಾರಣಕ್ಕೆ ಸಿಎಂ ನಿವಾಸಕ್ಕೆ ರಾಜಕಾರಣಿಗಳು ಸಹ ಆಗಮಿಸಿಲ್ಲ.

Last Updated : Dec 26, 2019, 10:14 AM IST

ABOUT THE AUTHOR

...view details