ಕರ್ನಾಟಕ

karnataka

ETV Bharat / state

ದಾವೋಸ್ ವಿಶ್ವ ಆರ್ಥಿಕ ಸಮ್ಮೇಳನ: ಹಲವು ಭರವಸೆಗಳೊಂದಿಗೆ ರಾಜ್ಯದತ್ತ ಬಿಎಸ್​​ವೈ - ದಾವೋಸ್ ಪ್ರವಾಸಿ ತಾಣಗಳಿಗೆ ಯಡಿಯೂರಪ್ಪ ಭೇಟಿ ಸುದ್ದಿ

ವಿಶ್ವ ಆರ್ಥಿಕ ಸಮ್ಮೇಳನದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಲವು ಜಾಗತಿಕ ಕಂಪನಿಗಳ ಮುಖ್ಯಸ್ಥರೊಂದಿಗೆ ಮಾತುಕತೆ ನಡೆಸಿದ್ದಾರೆ.

bsy meeting with GEMINI_UBER_COMPANY in davos
ದಾವೋಸ್ ವಿಶ್ವ ಆರ್ಥಿಕ ಸಮ್ಮೇಳನ.

By

Published : Jan 23, 2020, 11:27 PM IST

ದಾವೋಸ್/ಬೆಂಗಳೂರು:ವಿಶ್ವ ಆರ್ಥಿಕ ಸಮ್ಮೇಳನದ ಮೂರನೇ ದಿನವಾದ ಗುರುವಾರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಉನ್ನತ ಮಟ್ಟದ ನಿಯೋಗವು ಹಲವು ಜಾಗತಿಕ ಕಂಪನಿಗಳ ಮುಖ್ಯಸ್ಥರೊಂದಿಗೆ ಮಾತುಕತೆ ನಡೆಸಿತು.

ದಾವೋಸ್ ವಿಶ್ವ ಆರ್ಥಿಕ ಸಮ್ಮೇಳನ

ಜೆಮಿನಿ ಕಾರ್ಪೊರೇಷನ್, ಕೋಕಾಕೋಲಾ ಕಂಪನಿ, ಉಬರ್, ಎಸ್ಎಪಿ ಲ್ಯಾಬ್ಸ್, ಜನರಲ್ ಎಲೆಕ್ಟ್ರಿಕ್ (ಜಿಇ), ಸ್ವಿಸ್ ರೆ ಮತ್ತು ಮಿತ್ಸುಬಿಷಿ ಹೆವಿ ಇಂಡಸ್ಟ್ರೀಸ್​​ನ ಪ್ರಮುಖರೊಂದಿಗೆ ಕರ್ನಾಟಕದಲ್ಲಿ ಬಂಡವಾಳ ತೊಡಗಿಸುವ ಬಗ್ಗೆ ಸಿಎಂ ಚರ್ಚೆ ನಡೆಸಿದರು.

ದಾವೋಸ್ ವಿಶ್ವ ಆರ್ಥಿಕ ಸಮ್ಮೇಳನ

ಕರ್ನಾಟಕದಲ್ಲಿ ಉದ್ದಿಮೆಗಳ ವಿಸ್ತರಣೆ ಯೋಜನೆಗಳ ಬಗ್ಗೆ ಮಾಹಿತಿ ಪಡೆದುಕೊಂಡ ಸಿಎಂ ಬಿಎಸ್​​ವೈ, ರಾಜ್ಯದಲ್ಲಿ ಕೈಗಾರಿಕೆಗಳ ಬೆಳವಣಿಗೆಗೆ ತಮ್ಮ ಸರ್ಕಾರ ಸಂಪೂರ್ಣ ಬೆಂಬಲ ನೀಡಲಿದೆ. ಸರ್ಕ್ಯೂಲರ್ ಎಕಾನಮಿ, ಇಂಧನ ಮತ್ತು ಮೊಬಿಲಿಟಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಸುಸ್ಥಿರ ಅಭಿವೃದ್ಧಿಗೆ ಒತ್ತು ನೀಡುವ ಭರವಸೆ ನೀಡಿದರು.

ಇದೇ ವೇಳೆ, ಉಬರ್​​ನ ಮುಖ್ಯಕಾರ್ಯನಿರ್ವಹಣಾಧಿಕಾರಿ ಡಾರಾ ಖೋಸ್ರೋವ್ ಶಾಹಿ ಬೆಂಗಳೂರಿನಲ್ಲಿ ತಮ್ಮ ಉದ್ಯಮದ ವಿಸ್ತರಣೆ ಮಾಡಲಾಗುತ್ತದೆ ಮತ್ತು ಇನ್ನೂ ಹೆಚ್ಚಿನ ಬಂಡವಾಳ ಹೂಡಿಕೆ ಮಾಡಲಾಗುವುದು ಎಂದು ಮುಖ್ಯಮಂತ್ರಿಗಳಿಗೆ ಭರವಸೆ ನೀಡಿದರು.

ನಂತರ ಜಿಇ ಕಂಪನಿಯ ವಿಲಿಯಂ ಮೊ ಕೊವನ್ ಅವರನ್ನು ಭೇಟಿ ಮಾಡಿದ ಯಡಿಯೂರಪ್ಪ, ಆರೋಗ್ಯ ಕ್ಷೇತ್ರ, ವಿದ್ಯುತ್ ವಿತರಣೆ ಮತ್ತು ಪವನ ವಿದ್ಯುತ್ ಉತ್ಪಾದನೆಗೆ ಸಂಬಂಧಿಸಿದಂತೆ ರೂಪಿಸಿರುವ ಯೋಜನೆಗಳ ಬಗ್ಗೆ ಮಾಹಿತಿ ಪಡೆದರು. ಇದೇ ವೇಳೆ, ಕೋಕಾಕೋಲಾದ ಪ್ರತಿನಿಧಿಗಳು 25 ದಶಲಕ್ಷ ಅಮೆರಿಕನ್ ಡಾಲರ್​​​ನಷ್ಟು ಬಂಡವಾಳವನ್ನು ಹೂಡಲಾಗುತ್ತದೆ ಮತ್ತು ಇದನ್ನು ಮುಂಬರುವ ದಿನಗಳಲ್ಲಿ 200 ದಶಲಕ್ಷ ಡಾಲರ್​​​ಗಳಿಗೆ ಹೆಚ್ಚಿಸಲಾಗುತ್ತದೆ. ಈ ಬಂಡವಾಳವನ್ನು ರೈತರಿಗೆ, ಗ್ರಾಮೀಣ ಪ್ರದೇಶದ ಜನರಿಗೆ ಶುದ್ಧ ಕುಡಿಯುವ ನೀರಿನ ಯೋಜನೆಗೆ ವಿನಿಯೋಗ ಮಾಡಲಾಗುತ್ತದೆ ಎಂದು ವಿವರಿಸಿದರು.

ಇದಕ್ಕೂ ಮುನ್ನ ಮುಖ್ಯಮಂತ್ರಿಗಳು ಸ್ಟ್ರಾಟೆಜಿಕ್ ಔಟ್ ಲುಕ್ ಇಂಡಿಯಾ ಫಾರ್ ಯುಎಸ್ ಡಾಲರ್ 5 ಟ್ರಿಲಿಯನ್ ಎಕಾನಮಿ ಫಾರ್ ಇಂಡಿಯಾ ಎಂಬ ಸಂವಾದದಲ್ಲಿ ಪಾಲ್ಗೊಂಡರು. ಈ ಸಂವಾದದಲ್ಲಿ ಕೇಂದ್ರ ರೈಲ್ವೆ ಮತ್ತು ವಾಣಿಜ್ಯ ಮತ್ತು ಕೈಗಾರಿಕೆ ಸಚಿವ ಪಿಯೂಷ್ ಗೋಯಲ್, ಎಸ್​​​ಬಿಐ ನ ಅಧ್ಯಕ್ಷ ರಜನೀಶ್ ಕುಮಾರ್ ಸೇರಿದಂತೆ ಮತ್ತಿತರ ಪ್ರಮುಖರು ಹಾಜರಿದ್ದರು.

ಯುಎಸ್ ಡಾಲರ್ 5 ಟ್ರಿಲಿಯನ್ ಎಕಾನಮಿ ಗುರಿ ತಲುಪಲು ಭಾರತದ ಎಲ್ಲಾ ರಾಜ್ಯಗಳು ಕೈಜೋಡಿಸುತ್ತಿವೆ. ನಮ್ಮ ರಾಜ್ಯ ಕರ್ನಾಟಕ 250 ಬಿಲಿಯನ್ ಯುಎಸ್ ಡಾಲರ್ ನಷ್ಟು ಜಿಡಿಪಿಯನ್ನು ಹೊಂದಿದ್ದು, ಶೇ.9 ರ ಪ್ರಮಾಣದಲ್ಲಿ ಬೆಳೆಯುತ್ತಿದೆ. ಈ ಹಿನ್ನೆಲೆಯಲ್ಲಿ ನಾವು ಇಲ್ಲಿ ವಿಶ್ವ ಆರ್ಥಿಕ ಸಮ್ಮೇಳನದ ಮೂಲಕ ನಮ್ಮ ರಾಜ್ಯಗಳಲ್ಲಿ ಹೂಡಿಕೆ ಮಾಡಲು ಉದ್ಯಮಿಗಳಿಗೆ ಮತ್ತು ವಾಣಿಜ್ಯೋದ್ಯಮಿಗಳಿಗೆ ಮುಕ್ತ ಆಹ್ವಾನ ನೀಡುತ್ತಿದ್ದೇವೆ ಎಂದು ಯಡಿಯೂರಪ್ಪ ತಿಳಿಸಿದರು.

ದಾವೋಸ್ ನ ಪ್ರವಾಸಿ ತಾಣಗಳಿಗೆ ಬಿಎಸ್​​ವೈ ಭೇಟಿ:ವಿಶ್ವ ಆರ್ಥಿಕ ಶೃಂಗದಲ್ಲಿ ಪಾಲ್ಗೊಂಡ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಮಾರೋಪ ಸಮಾರಂಭದ ನಂತರ ದಾವೋಸ್ ನ ಪ್ರವಾಸಿ ತಾಣಗಳಿಗೆ ಭೇಟಿ ನೀಡಿದರು.

ದಾವೋಸ್ ವಿಶ್ವ ಆರ್ಥಿಕ ಸಮ್ಮೇಳನ

ಭೂಲೋಕದ ಸ್ವರ್ಗ ಎಂದು ಕರೆಸಿಕೊಳ್ಳುವ ಸ್ವಿಟ್ಜರ್ಲೆಂಡ್‌‌ ಪ್ರವಾಸವನ್ನು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಪೂರ್ಣಗೊಳಿಸಿ ತಾಯ್ನಾಡಿನತ್ತ ಹೊರಟಿದ್ದಾರೆ. ದಾವೋಸ್​ ನ ಆರ್ಥಿಕ ಶೃಂಗ ಮುಗಿಸಿದ ನಂತರ ಸ್ಥಳೀಯ ಪ್ರವಾಸಿ ತಾಣಗಳಿಗೆ ಸಿಎಂ ಭೇಟಿ ನೀಡಿದರು. ಸ್ವಿಸ್ ನ ಪ್ರಕೃತಿ ಸೌಂದರ್ಯವನ್ನು ಸವಿದರು. ಕೊರೆಯುವ ಚಳಿಯ ನಡುವೆ ಸುರಿಯುವ ಮಂಜಿನ ಜೊತೆಯಲ್ಲಿ ವಿಂಟರ್ ಧಿರಿಸು ಧರಿಸಿ ದಾವೋಸ್ ಸುತ್ತಾಡಿದ ಸಿಎಂ ಬಿ.ಎಸ್.ಯಡಿಯೂರಪ್ಪ ನಂತರ ಭಾರತದತ್ತ ಪ್ರಯಾಣ ಆರಂಭಿಸಿದರು. ನಾಳೆ ಮಧ್ಯಾಹ್ನ 3.10 ಕ್ಕೆ ಬಿಎಸ್​​ವೈ ಬೆಂಗಳೂರು ತಲುಪಲಿದ್ದಾರೆ.

ABOUT THE AUTHOR

...view details