ಬೆಂಗಳೂರು: ಮಹಾತ್ಮಾ ಗಾಂಧೀಜಿ ಅವರ 150ನೇ ಹುಟ್ಟುಹಬ್ಬಕ್ಕೆ ದೇಶದ ಪ್ರಖ್ಯಾತ ಗಾಯಕ ಗಾಯಕಿಯರಿಂದ ಬಾಪೂಜಿ ನೆಚ್ಚಿನ 'ವೈಷ್ಣವ ಜನತೋ..' ಗೀತೆಯನ್ನು ಹಾಡಿಸಿರುವ ಈಟಿವಿ ಭಾರತದ ಕಾರ್ಯವನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಶ್ಲಾಘಿಸಿದ್ದಾರೆ.
ಗಾಂಧೀಜಿಯವರ ಮೆಚ್ಚಿನ ಹಾಡಾದ 'ವೈಷ್ಣವ ಜನತೋ..' ಸುಂದರವಾದ ವೀಡಿಯೋ ಗೀತೆ ರಚಿಸುವ ಮೂಲಕ ಮಹಾತ್ಮ ಗಾಂಧಿಯವರಿಗೆ ಹೃತ್ಪೂರ್ವಕ ಗೌರವ ಸಲ್ಲಿಸಿದ್ದಕ್ಕಾಗಿ ಈಟಿವಿ ಭಾರತ್‌ಗೆ ಅಭಿನಂದಿಸುತ್ತೇನೆ. ನಮ್ಮ ಶ್ರೇಷ್ಠ ಗಾಯಕರು ಮತ್ತು ಸುಂದರ ನಿರ್ಮಾಣದ ಅದ್ಭುತ ಚಿತ್ರಣವು ಮಹಾತ್ಮ ಗಾಂಧೀಜಿಗೆ ಒಂದು ದೊಡ್ಡ ಗೌರವ ಕೊಟ್ಟಂತಾಗಿದೆ ಎಂದು ಸಿಎಂ ಬಿಎಸ್‌ವೈ ಮುಖ್ಯಮಂತ್ರಿಗಳ ಅಧಿಕೃತ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡಿದ್ದಾರೆ.
ಐಪಿಎಸ್ ಅಧಿಕಾರಿ ಡಾ.ಭೀಮಾಶಂಕರ್ ಎಸ್. ಗುಳೇದ್ ಪ್ರಶಂಸೆ:
‘ಮಹಾತ್ಮಾ ಗಾಂಧೀಜಿ ನೆಚ್ಚಿನ ಭಜನೆಗಳಲ್ಲೊಂದಾದ 'ವೈಷ್ಣವೋ ಜನತೋ..' ಭಜನೆಯ ಹಾಡನ್ನು ವಿನೂತನವಾಗಿ ಚಿತ್ರೀಕರಿಸಿದ ಈಟಿವಿ ಭಾರತ ತಂಡಕ್ಕೆ ಅಭಿನಂದನೆಗಳು. ಬಾಪೂಜಿ 150 ಜನ್ಮ ದಿನಾಚರಣೆಯ ವಿಶೇಷ ಸಂದರ್ಭದಲ್ಲಿ ವಿಭಿನ್ನವಾಗಿ ಮೂಡಿ ಬಂದಿರುವ ಈ ಹಾಡು ದೇಶದ ಎಲ್ಲಾ ಜನರನ್ನೂ ಸೆಳೆಯಲಿದೆ ಎಂದು ಭೀಮಾಶಂಕರ್ ತಮ್ಮ ಅಧಿಕೃತ ಟ್ವೀಟರ್ ಖಾತೆಯಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.