ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ ವತಿಯಿಂದ ಆಯೋಜಿಸಿದ್ದ ಸೌರಶಕ್ತಿ ಚಾಲಿತ ಹಣ್ಣು ಮತ್ತು ತರಕಾರಿ ಮಾರಾಟ ಮಾಡುವ ‘ಅರ್ಕಾ ತ್ರಿಚಕ್ರ ಸೈಕಲ್‘ಗಳ ವಿತರಣೆ ಮಾಡಿದರು.
ಬೀದಿಬದಿ ವ್ಯಾಪಾರಿಗಳಿಗೆ ಸೌರಶಕ್ತಿ ಚಾಲಿತ ಅರ್ಕಾ ತ್ರಿಚಕ್ರ ಸೈಕಲ್ ವಿತರಣೆ ಮಾಡಿದ ಬಿಎಸ್ವೈ - Arka Tricycle Cycle
ಬೀದಿಬದಿ ತರಕಾರಿ ಹಾಗೂ ಹಣ್ಣು ಮಾರಾಟ ಮಾಡುವವರಿಗೆ ಅನುಕೂಲವಾಗುವಂತೆ ಸೌರಶಕ್ತಿ ಚಾಲಿತ ಸೈಕಲ್ಗಳನ್ನು ವಿತರಣೆ ಮಾಡಲಾಗಿದೆ. ಇದರಿಂದ ವ್ಯಾಪಾರಿಗಳು ಹಾಗೂ ಗ್ರಾಹಕರಿಬ್ಬರಿಗೂ ಅನುಕೂಲವಾಗಲಿದೆ ಎಂದು ಬಿಎಸ್ವೈ ತಿಳಿಸಿದ್ದಾರೆ.
ಸೌರಶಕ್ತಿ ಚಾಲಿತ ಅರ್ಕಾ ತ್ರಿಚಕ್ರ ಸೈಕಲ್ ವಿತರಣೆ ಮಾಡಿದ ಬಿಎಸ್ವೈ
ನಂತರ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು, ಬೀದಿಬದಿ ತರಕಾರಿ, ಹಣ್ಣು ವ್ಯಾಪಾರ ಮಾಡುವವರಿಗೆ ಇದು ಅನುಕೂಲವಾಗಲಿದೆ. ಸೌರಶಕ್ತಿ ಚಾಲಿತ ಸೈಕಲ್ 50 ಕಿಲೋ ಮೀಟರ್ವರೆಗೂ ಸಂಚಾರ ಮಾಡಲಿದೆ. ಇದರಿಂದ ವ್ಯಾಪಾರಿಗಳಿಗೆ ಅನುಕೂಲವಾಗಲಿದೆ. ತಾಜಾ ತರಕಾರಿ, ಹಣ್ಣುಗಳು ಗ್ರಾಹಕರ ಕೈಸೇರಲಿದೆ. ಇದರಿಂದ ವ್ಯಾಪಾರಿಗಳು ಹಾಗೂ ಗ್ರಾಹಕರಿಬ್ಬರಿಗೂ ಅನುಕೂಲವಾಗಲಿದೆ. ಇದರ ಸದುಪಯೋಗಪಡಿಸಿಕೊಳ್ಳಿ ಎಂದು ಕರೆ ನೀಡಿದರು.