ಬೆಂಗಳೂರು: ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಬೆಂಗಾವಲು ವಾಹನ ಚಾಲಕರಾಗಿದ್ದ ತಿರುಮಲೇಶ್ ನಿನ್ನೆ ರಾತ್ರಿ 11 ಗಂಟೆಗೆ ಕರ್ತವ್ಯ ಮುಗಿಸಿ ಮನೆಗೆ ತೆರಳಿದ್ದು, ಹೃದಯಾಘಾತದಿಂದ ನಿಧನರಾಗಿದ್ದಾರೆ. ಇವರು 15 ವರ್ಷಗಳಿಂದ ಯಡಿಯೂರಪ್ಪ ಅವರ ಬಳಿಯೇ ಬೆಂಗಾವಲು ಸಿಬ್ಬಂದಿಯಾಗಿ ಕರ್ತವ್ಯದಲ್ಲಿದ್ದರು.
ಬೆಂಗಾವಲು ವಾಹನ ಚಾಲಕ ನಿಧನ: ಸಂತಾಪ ಸೂಚಿಸಿದ ಬಿಎಸ್ವೈ..! - ಬೆಂಗಾವಲು ವಾಹನ ಚಾಲಕ ತಿರುಮಲೇಶ್
15 ವರ್ಷಗಳಿಂದ ಯಡಿಯೂರಪ್ಪ ಅವರ ಬಳಿಯೇ ಬೆಂಗಾವಲು ಸಿಬ್ಬಂದಿಯಾಗಿ ಕರ್ತವ್ಯದಲ್ಲಿದ್ದ ಚಾಲಕ ತಿರುಮಲೇಶ್ ನಿಧನಕ್ಕೆ ಮಾಜಿ ಸಿಎಂ ಯಡಿಯೂರಪ್ಪ ಸಂತಾಪ ಸೂಚಿಸಿದ್ದಾರೆ.
ಚಾಲಕ ತಿರುಮಲೇಶ್
ತಮ್ಮ ಬೆಂಗಾವಲು ವಾಹನ ಚಾಲಕ ತಿರುಮಲೇಶ್ ನಿಧನಕ್ಕೆ ಮಾಜಿ ಸಿಎಂ ಯಡಿಯೂರಪ್ಪ ಸಂತಾಪ ಸೂಚಿಸಿದ್ದಾರೆ. ಇವರ ಅಕಾಲಿಕ ಅಗಲಿಕೆ ದುಃಖ ಭರಿಸುವ ಶಕ್ತಿಯನ್ನು ಅವರ ಕುಟುಂಬಕ್ಕೆ ಭಗವಂತ ಕರುಣಿಸಲಿ ಎಂದಿದ್ದಾರೆ.
ಇದನ್ನೂ ಓದಿ :ಅಷ್ಟೊಂದು ಪ್ರೀತಿ ಇದ್ರೆ ಬಿಎಸ್ವೈ ಅವ್ರನ್ನು ಸಿಎಂ ಮಾಡ್ತೀವಿ ಎಂದು ಬಿಜೆಪಿ ಘೋಷಿಸಲಿ: ಎಂಬಿಪಿ