ಕರ್ನಾಟಕ

karnataka

ETV Bharat / state

ರಾಜಧಾನಿಯಲ್ಲಿ ನಡೆದ ಅತಿ ಸುದೀರ್ಘ ಐಟಿ ರೇಡ್: ಉಮೇಶ್ ಆಪ್ತ ಸೋಮಶೇಖರ್ ಜೊತೆ ಹಲವರಿಗೆ ಕಾದಿದೆ ಶಾಕ್ - IT raid in bengaluru

ರಾಜಧಾನಿಯಲ್ಲಿ ಐಟಿ ಅಧಿಕಾರಿಗಳಿಂದ ಭ್ರಷ್ಟರ ಬೇಟೆ ಮುಂದುವರಿದಿದೆ. ಮಾಜಿ ಸಿಎಂ ಬಿ ಎಸ್​ ಯಡಿಯೂರಪ್ಪ ಆಪ್ತ ಉಮೇಶ್ ಮೇಲೆ ಐಟಿ ಅಧಿಕಾರಿಗಳು ಕಣ್ಣಿಟ್ಟಿದ್ದು, ಉಮೇಶ್ ಮನೆಯಲ್ಲಿ ಸಿಕ್ಕ ಸಾಕ್ಷಗಳ ಅನ್ವಯ ಒಬ್ಬೊಬ್ಬರಿಗೆ ಆದಾಯ ತೆರಿಗೆ ಇಲಾಖೆ ಶಾಕ್ ನೀಡುತ್ತಿದೆ.

bsy close aide umesh and somashekar to be face IT raid
ಐಟಿ ರೇಡ್

By

Published : Oct 9, 2021, 8:18 PM IST

ಬೆಂಗಳೂರು: ಮೂರು ದಿನ ನಡೆದ ಐಟಿ ದಾಳಿ ರಾಜಧಾನಿಯಲ್ಲಿ ನಡೆದ ಅತಿದೊಡ್ಡ ರೇಡ್ ಆಗಿದೆ. ಬಿಎಸ್​ವೈ ಆಪ್ತ ಉಮೇಶ್ ಮೇಲೆಯೇ ಐಟಿ ಫೋಕಸ್ ಮಾಡುತ್ತಿದೆ. ಉಮೇಶ್​ಗೆ ಸಂಬಂಧಿಸಿದ ಬಹುತೇಕ ಕಡೆ ದಾಳಿ ನಡೆದಿದೆ. ಉಮೇಶ್ ಜೊತೆ ವ್ಯವಹಾರ ಇಟ್ಟುಕೊಂಡಿದ್ದವರಿಗೆ ಗಾಳ ಹಾಕಲಾಗಿದೆ ಎನ್ನಲಾಗುತ್ತಿದೆ.

ಉಮೇಶ್ ಅತ್ಯಾಪ್ತರ ಲಿಸ್ಟ್ ಹೊಂದಿರುವ ಐಟಿ ಇಲಾಖೆ, ಆ ಲಿಸ್ಟ್ ಅನುಗುಣವಾಗಿಯೇ ದಾಳಿ ನಡೆಸುತ್ತಿದೆ. ಆ ಪಟ್ಟಿಯಲ್ಲಿ ಇನ್ನೂ ಹಲವು ಕಾಂಟ್ರಾಕ್ಟರ್ಸ್ ಇದ್ದಾರೆ ಎನ್ನುವ ಮಾಹಿತಿ ಹೊರ ಬಿದ್ದಿದೆ. ಉಮೇಶ್ ಮನೆಯಲ್ಲಿ ಸಿಕ್ಕ ಸಾಕ್ಷಗಳ ಅನ್ವಯ ಒಬ್ಬೊಬ್ಬರಿಗೆ ಆದಾಯ ತೆರಿಗೆ ಇಲಾಖೆ ಶಾಕ್ ನೀಡುತ್ತಿದೆ, ಈ ಪೈಕಿ ಮೊದಲು ಟಾರ್ಗೆಟ್ ಆಗಿರುವುದೇ ಸೋಮಶೇಖರ್ ಎನ್ನುತ್ತವೆ ಮೂಲಗಳು.

ಉಮೇಶ್ ಮತ್ತು ಸೋಮಶೇಖರ್ ನಡುವಿನ ವ್ಯವಹಾರ:

ಉಮೇಶ್ ಮತ್ತು ಸೋಮಶೇಖರ್ ನಡುವಿನ ವ್ಯವಹಾರ ಎಂತಹುದು, ಅಕ್ರಮಗಳ ದಾಖಲೆಗಳ ಬಗ್ಗೆ ಮತ್ತು ಉಮೇಶ್ ಈವರೆಗೆ ಹೊಂದಿರುವ ಟೆಂಡರ್​ಗಳ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ. ಆತ ಪಡೆದ ಒಟ್ಟು ಟೆಂಡರ್​​ಗಳು ಮತ್ತು ಅವುಗಳ ಒಟ್ಟು ಮೊತ್ತದ ಬಗ್ಗೆ ಆದಾಯ ತೆರಿಗೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ:ಮುಂದುವರೆದ ಐಟಿ ರೇಡ್: ಪ್ರಭಾವಿ ಕುಳಗಳಿಗೆ ಜಾರಿ ನಿರ್ದೇಶನಾಲಯದ ಭಯ ಆರಂಭ

ಟೆಂಡರ್​ಗಳಿಗೆ ಸಂಬಂಧಿಸಿದ ಕಮಿಷನ್ ಹಿಸ್ಟರಿ, ವ್ಯವಹಾರಗಳ ಟ್ರಾನ್ಸಾಕ್ಷನ್ ಬಗ್ಗೆ ದಾಖಲೆಗಳನ್ನು ಕಲೆ ಹಾಕಿದೆ. ಉಮೇಶ್​​ಗೆ ಸೇರಿದ ಬ್ಯಾಂಕ್ ಸ್ಟೇಟ್ಮೆಂಟ್ಸ್ ಕೂಡ ಪರಿಶೀಲನೆ ನಡೆಸಲಾಗುತ್ತಿದೆ. ಟೆಂಡರ್ ಪ್ರೊಸಿಜರ್ ಸರ್ಕಾರದ ಅಧಿಸೂಚನೆಯಂತೆ ಆಗಿತ್ತಾ? ಟೆಂಡರ್​ಗಳಲ್ಲೂ ಗೋಲ್​ಮಾಲ್​​ ನಡೆಸಲಾಗ್ತಿತ್ತಾ? ಹೀಗೆ ಹತ್ತಾರು ಅನುಮಾನಗಳ ಬಗ್ಗೆ ಐಟಿ ತನಿಖೆ ನಡೆಸುತ್ತಿದೆ ಎನ್ನುವ ಮಾಹಿತಿ ದೊರೆತಿದೆ.

ಉಮೇಶ್ ಆಪ್ತ ಸೋಮಶೇಖರ್ ರೀತಿಯಲ್ಲಿ ಹಲವರಿಗೆ ಕಾದಿದೆ ಶಾಕ್:

ಉಮೇಶ್ ಜೊತೆ ವ್ಯವಹಾರ ಹೊಂದಿರುವವರಿಗೂ ಐಟಿ ನೋಟಿಸ್ ಸಾಧ್ಯತೆ ಕಂಡು ಬರುತ್ತಿದ್ದು ಟೆಂಡರ್​ಗಳಿಗೆ ಸಂಬಂಧಿಸಿದಂತೆ, ಹಣ ವರ್ಗಾವಣೆ, ಆ ಹಣ ವರ್ಗಾವಣೆಗೆ ಸಂಬಂಧಿಸಿದ ದಾಖಲೆಗಳನ್ನು ಐಟಿ ಇಲಾಖೆಯ ಅಧಿಕಾರಿಗಳು ಕೇಳಿದ್ದಾರೆ.
ಸೂಕ್ತ ದಾಖಲೆಗಳನ್ನು ನೀಡದಿದ್ದರೆ ಐಟಿ ಕಂಟಕ ಫಿಕ್ಸ್ ಆಗಲಿದೆ. ಬೃಹತ್ ಪ್ರಮಾಣದ ಗೋಲ್​​ಮಾಲ್​​ ಕಂಡು ಬಂದರೆ ಇಡಿ ಎಂಟ್ರಿ ಕೊಡಲಿದೆ ಎನ್ನಲಾಗುತ್ತಿದೆ. ಇಡಿ ಎಂಟ್ರಿಯಾದರೆ ಭ್ರಷ್ಟರಿಗೆ ಜೈಲೂಟ ಕಟ್ಟಿಟ್ಟ ಬುತ್ತಿ ಎನ್ನಲಾಗುತ್ತಿದೆ.

ಸದ್ಯ ದಾಳಿಯ ಸಂಬಂಧ ಐಟಿಯಿಂದ ಹೆಚ್ಚುವರಿ ಸಾಕ್ಷ ಕಲೆಹಾಕಲಾಗುತ್ತಿದೆ. ಸೂಕ್ತ ದಾಖಲೆ ಪತ್ರಗಳನ್ನು ಸಂಗ್ರಹಿಸುತ್ತಿರುವ ಐಟಿ ಟೀಂನ ದಾಳಿ ಮುಂದುವರೆಸಿದೆ.

ABOUT THE AUTHOR

...view details