ಕರ್ನಾಟಕ

karnataka

ETV Bharat / state

ನಾಳೆ ಬಿಎಸ್ಇ ಸಭೆಯಲ್ಲಿ ದಿನದ ಕಾರ್ಯ ಕಲಾಪದ ಚರ್ಚೆ ನಡೆಯಲಿದೆ : ಸ್ಪೀಕರ್ ಕಾಗೇರಿ - ನಾಳೆಯಿಂದ ಚಳಿಗಾಲದ ಅಧಿವೇಶನ ಆರಂಭ

ಕೋವಿಡ್ ಹಿನ್ನೆಲೆಯಲ್ಲಿ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನ ತೆಗೆದುಕೊಂಡಿದ್ದೇವೆ. ಕಲಾಪ ಚೆನ್ನಾಗಿ ನಡೆಯುವ ಅಗತ್ಯತೆ ಇದೆ. ಇಷ್ಟೆಲ್ಲ ವ್ಯವಸ್ಥೆ ಮಾಡಿ ಕಲಾಪ ಚೆನ್ನಾಗಿ ನಡೆಯಲಿಲ್ಲ ಅಂದ್ರೆ ಹೇಗೆ?. ಹೀಗಾಗಿ, ಎಲ್ಲಾ ಶಾಸಕರಿಗೂ ನಾನು ಮನವಿ ಮಾಡಿಕೊಳ್ಳುತ್ತೇನೆ ಎಂದರು..

ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ
ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ

By

Published : Dec 12, 2021, 7:22 PM IST

ಬೆಂಗಳೂರು :ನಾಳೆಯಿಂದ ಚಳಿಗಾಲದ ಅಧಿವೇಶನ ಆರಂಭವಾಗಲಿದೆ. ಎಲ್ಲಾ ರೀತಿಯ ಸಿದ್ದತೆಗಳನ್ನ ಮಾಡಿಕೊಳ್ಳಲಾಗಿದೆ ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದ್ದಾರೆ.

ಸುವರ್ಣವಿಧಾನಸೌಧದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ನಾಳೆ ಬೆಳಗ್ಗೆ 10.30ಕ್ಕೆ ಬಿಎಸ್​​ಇ ಮೀಟಿಂಗ್ ನಡೆಯಲಿದೆ. ಎಲ್ಲಾ ಪಕ್ಷದ ಸದಸ್ಯರು ಭಾಗವಹಿಸಲಿದ್ದಾರೆ. ಸಭೆಯ ಎಲ್ಲಾ ದಿನದ ಕಾರ್ಯ ಕಲಾಪದ ವಿವರಗಳನ್ನ ಚರ್ಚೆ ಮಾಡಲಾಗುತ್ತೆ.

ಸಭೆಯಲ್ಲಿ ಚರ್ಚೆ ಮಾಡಿ ಕಾರ್ಯಕಲಾಪದ ವಿವರ ಪಡೆಯಲಾಗುತ್ತೆ. ಸರ್ಕಾರ ಇದುವರೆಗೂ ಯಾವ ಯಾವ ಬಿಲ್ ಮಂಡಿಸಲಿದೆ ಅನ್ನೋದು ಕಳುಹಿಸಿಲ್ಲ. ಬಿಲ್ ಕಳಿಸ್ತೀವಿ ಅಂತಾ ಹೇಳಿದ್ದಾರೆ, ಇದುವರೆಗೂ ಬಂದಿಲ್ಲ ಎಂದರು.

ನಾಳೆಯೊಳಗೆ ಕಳಿಸುತ್ತೇವಿ ಅಂತೀ ಮೌಖಿಕವಾಗಿ ತಿಳಿಸಿದ್ದಾರೆ. ಈ ಅಧಿವೇಶನದಲ್ಲಿ ಎರಡು ದಿನವಾದರು ಉತ್ತರ ಕರ್ನಾಟಕ ಭಾಗದ ವಿಷಯ ಚರ್ಚೆ ಮಾಡಬೇಕು ಅಂತೀ ಸಲಹೆಗಳು ಬಂದಿವೆ. ಬಿಎಸ್ಇ ಮೀಟಿಂಗ್‌ನಲ್ಲಿ ಇದರ ಬಗ್ಗೆ ಚರ್ಚೆ ಮಾಡುತ್ತೇವೆ.

ಕೋವಿಡ್ ಹಿನ್ನೆಲೆಯಲ್ಲಿ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನ ತೆಗೆದುಕೊಂಡಿದ್ದೇವೆ. ಕಲಾಪ ಚೆನ್ನಾಗಿ ನಡೆಯುವ ಅಗತ್ಯತೆ ಇದೆ. ಇಷ್ಟೆಲ್ಲ ವ್ಯವಸ್ಥೆ ಮಾಡಿ ಕಲಾಪ ಚೆನ್ನಾಗಿ ನಡೆಯಲಿಲ್ಲ ಅಂದ್ರೆ ಹೇಗೆ?. ಹೀಗಾಗಿ, ಎಲ್ಲಾ ಶಾಸಕರಿಗೂ ನಾನು ಮನವಿ ಮಾಡಿಕೊಳ್ಳುತ್ತೇನೆ ಎಂದರು.

ಎಲ್ಲರು ಸಕ್ರಿಯವಾಗಿ ಚರ್ಚೆಯಲ್ಲಿ ಪಾಲ್ಗೊಳ್ಳಿ. ನಿಯಮಾನುಸಾರ ಎಲ್ಲರಿಗೂ ಚರ್ಚೆಗೆ ಅವಕಾಶ ಮಾಡಿಕೊಡುತ್ತೇನೆ. ಬೆಳಗಾವಿಯಲ್ಲಿ ಅಧಿವೇಶನ ನಡೆಯುತ್ತೆ ಅಂತಾ ಗೈರಾಗೋದು ಸರಿಯಲ್ಲ. ಬೆಳಗಾವಿ ಅಧಿವೇಶನದಲ್ಲಿ ಎಲ್ಲಾ ಶಾಸಕರು ಪಾಲ್ಗೊಳ್ಳಿ ಎಂದು ಮನವಿ ಮಾಡಿಕೊಂಡರು.

ABOUT THE AUTHOR

...view details