ಬೆಂಗಳೂರು: ಕುಟುಂಬದ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸುವ ಹಿನ್ನೆಲೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರು ದೇವನಹಳ್ಳಿಗೆ ತೆರಳಿದ್ದಾರೆ.
ದೇವನಹಳ್ಳಿಗೆ ತೆರಳಿದ ಸಿಎಂ.. ಕುಟುಂಬದ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿ - yediyurappa Devanahalli visit news
ಸಿಎಂ ಪುತ್ರಿಯ ಮೊಮ್ಮಗನ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ತೆರಳಿದ್ದಾರೆ ಎಂದು ತಿಳಿದು ಬಂದಿದೆ..

Yediyurappa
ಇಂದು ಬೆಳಗ್ಗೆಯೇ ದೇವನಹಳ್ಳಿಗೆ ಬೆಂಗಾವಲು ವಾಹನ ಇಲ್ಲದೆ, ಸರ್ಕಾರಿ ಕಾರು ಬಿಟ್ಟು ಸ್ವಂತ ಕಾರಿನಲ್ಲಿ ತೆರಳಿದ್ದಾರೆ. ಸಿಎಂ ಪುತ್ರಿಯ ಮೊಮ್ಮಗನ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ತೆರಳಿದ್ದಾರೆ ಎಂದು ತಿಳಿದು ಬಂದಿದೆ.
ಇಂದು ಕುಟುಂಬದ ಕಾರ್ಯಕ್ರಮದಲ್ಲಿ ಭಾಗವಹಿಸುವ ಹಿನ್ನೆಲೆ ಪ್ರವಾಸ ಪಟ್ಟಿಯಲ್ಲಿ ಯಾವುದೇ ಮಾಹಿತಿ ನೀಡಿರಲಿಲ್ಲ. ಶಿಷ್ಟಾಚಾರದಂತೆ ಪ್ರವಾಸ ಕೈಗೊಂಡಲ್ಲಿ ಭದ್ರತಾ ವ್ಯವಸ್ಥೆಯ ಕಿರಿಕಿರಿ ಎದುರಾಗಲಿದೆ ಎನ್ನುವ ಕಾರಣಕ್ಕೆ ಬೆಂಗಾವಲು ವಾಹನ ಬಿಟ್ಟು ಸಿಎಂ ತೆರಳಿದ್ದಾರೆ.