ಬೆಂಗಳೂರು: ಸಾಫ್ಟ್ ಲ್ಯಾಂಡಿಂಗ್ ವೇಳೆ ಚಂದ್ರಯಾನ -2 ಭಾಗವಾದ ವಿಕ್ರಂ ಲ್ಯಾಂಡರ್ ಇಸ್ರೋದ ನಿಯಂತ್ರಣ ಕಳೆದುಕೊಂಡಿದೆ. ಇದು ಯಶಸ್ಸಿನ ಮುಂದೂಡಿಕೆ ಮಾತ್ರ. ನಾವು ನಿಮ್ಮೊಂದಿಗಿದ್ದೇವೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಟ್ವೀಟ್ ಮೂಲಕ ಇಸ್ರೋ ವಿಜ್ಞಾನಿಗಳಿಗೆ ಧೈರ್ಯ ತುಂಬಿದ್ದಾರೆ.
ಚಂದ್ರಯಾನ ಯಶಸ್ಸು ಮುಂದೂಡಿಕೆಯಾಗಿದೆಯಷ್ಟೇ: ಸಿಎಂ ಟ್ವೀಟ್ - ಚಂದ್ರನ ದಕ್ಷಿಣ ದೃವ
ಇದು ಯಶಸ್ಸಿನ ಮುಂದೂಡಿಕೆ ಮಾತ್ರ. ನಾವು ನಿಮ್ಮೊಂದಿಗಿದ್ದೇವೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಟ್ವೀಟ್ ಮೂಲಕ ಇಸ್ರೋ ವಿಜ್ಞಾನಿಗಳಿಗೆ ಧೈರ್ಯ ತುಂಬಿದ್ದಾರೆ.
ಸಿಎಂ ಟ್ವೀಟ್
ಜಗತ್ತಿನ ಯಾವ ರಾಷ್ಟ್ರವೂ ಪ್ರಯತ್ನ ನಡೆಸದ ಚಂದ್ರನ ದಕ್ಷಿಣ ದೃವದಲ್ಲಿ ಲ್ಯಾಂಡ್ ಮಾಡುವ ಧೈರ್ಯ ತೋರಿದ್ದಕ್ಕೆ ಇಸ್ರೋ ಬಗ್ಗೆ ನಮಗೆ ಹೆಮ್ಮೆಯಾಗುತ್ತಿದೆ. ನಿಮ್ಮ ಸಾಮರ್ಥ್ಯ ಮತ್ತು ಸಾಧನೆಗಳು ಯಾವಾಗಲೂ ನಮ್ಮ ದೇಶವನ್ನು ಎತ್ತರದ ಸ್ಥಾದಲ್ಲಿ ನಿಲ್ಲಿಸಲಿವೆ. ಈಗ ಆಗಿರುವುದು ಚಂದ್ರಯಾನ ಯಶಸ್ಸಿನ ಮುಂದೂಡಿಕೆ ಮಾತ್ರ ಎಂದು ಸಿಎಂ ಬಿಎಸ್ವೈ ಟ್ವೀಟ್ ಮಾಡಿದ್ದಾರೆ.