ಕರ್ನಾಟಕ

karnataka

ETV Bharat / state

ಸುಪ್ರೀಂಕೋರ್ಟ್‌ ತೀರ್ಪು ಸ್ವಾಗತಾರ್ಹ,17 ಕ್ಷೇತ್ರಗಳನ್ನೂ ನಾವೇ ಗೆಲ್ಲುತ್ತೇವೆ: ಬಿಎಸ್‌ವೈ ವಿಶ್ವಾಸ

17 ಕ್ಕೆ ಹದಿನೇಳು ಕ್ಷೇತ್ರವನ್ನು ಗೆಲ್ಲಲು ಸಿದ್ಧತೆ ಪ್ರಾರಂಭವಾಗಿದೆ. ನಾಳೆಯಿಂದಲೇ ಎಲ್ಲಾ ಸಚಿವರು, ಮುಖಂಡರು ಜವಾಬ್ದಾರಿ ತೆಗೆದುಕೊಂಡು ಅಭ್ಯರ್ಥಿಗಳನ್ನು ಗೆಲ್ಲಿಸುವ ಕೆಲಸ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

ಬಿ.ಎಸ್.ಯಡಿಯೂರಪ್ಪ

By

Published : Nov 13, 2019, 1:18 PM IST

Updated : Nov 13, 2019, 1:27 PM IST

ಬೆಂಗಳೂರು:ಅನರ್ಹ ಶಾಸಕರ ಕುರಿತು ಸುಪ್ರೀಂಕೋರ್ಟ್‌ ನೀಡಿರುವ ತೀರ್ಪನ್ನು ಸಿಎಂ ಬಿ.ಎಸ್.ಯಡಿಯೂರಪ್ಪ ಸ್ವಾಗತಿಸಿದ್ದಾರೆ. ಹಿಂದಿನ ಸ್ಪೀಕರ್ ರಮೇಶ್‌ ಕುಮಾರ್, ಸಿದ್ದರಾಮಯ್ಯ ಜೊತೆ ಸೇರಿಕೊಂಡು ಕುತಂತ್ರ, ಷಡ್ಯಂತ್ರ ಮಾಡಿದ್ದರು. ಇದಕ್ಕೆ ಸ್ಪಷ್ಟವಾದ ತೀರ್ಪನ್ನು ಸುಪ್ರೀಂಕೋರ್ಟ್​ ಕೊಟ್ಟಿದೆ ಎಂದು ಅವರು ಹೇಳಿದ್ದಾರೆ.

ಬಿ.ಎಸ್.ಯಡಿಯೂರಪ್ಪ, ಮುಖ್ಯಮಂತ್ರಿ

ಇಡೀ ದೇಶವೇ ಸುಪ್ರೀಂಕೋರ್ಟ್ ತೀರ್ಪಿಗೆ ಕಾತುರತೆಯಿಂದ ಕಾಯುತ್ತಿತ್ತು. ಅನರ್ಹಗೊಂಡ 17 ಜನ ಶಾಸಕರೂ ಸ್ಪರ್ಧೆ ಮಾಡಬಹುದು, ಯಾವುದೇ ಅಡ್ಡಿಯಾಗುವುದಿಲ್ಲ ಎಂಬ ತೀರ್ಪನ್ನು ನಾವು ಸ್ವಾಗತ ಮಾಡುತ್ತೇವೆ. 17 ಕ್ಕೆ ಹದಿನೇಳು ಕ್ಷೇತ್ರವನ್ನೂ ಗೆಲ್ಲಲು ಸಿದ್ಧತೆ ಪ್ರಾರಂಭವಾಗಿದೆ. ನಾಳೆಯಿಂದಲೇ ಎಲ್ಲಾ ಸಚಿವರು, ಮುಖಂಡರು ಜವಾಬ್ದಾರಿ ತೆಗೆದುಕೊಂಡು ಗೆಲ್ಲಿಸುವ ಕೆಲಸ ಮಾಡುತ್ತೇವೆ ಎಂದಿದ್ದಾರೆ.

ಇನ್ನು ಶರತ್ ಬಚ್ಚೇಗೌಡ ನಡೆಗೆ ಸಿಎಂ ಕಿಡಿಕಾರಿದ್ದು, ಯಾರು ನಮ್ಮ ಜೊತೆ ಇರುತ್ತಾರೋ ಅವರ ಬಗ್ಗೆ ನಾನು ಮಾತನಾಡುತ್ತೇನೆ. ಬೇರೆಯವರ ಬಗ್ಗೆ ನಾನು ಮಾತಾಡುವುದಿಲ್ಲ ಎಂದು ಗರಂ ಆದ್ರು. ನಾಳೆ ಹೊಸಕೋಟೆಯಿಂದ ನಾಮಪತ್ರ ಸಲ್ಲಿಕೆಗೆ ಶರತ್ ಬಚ್ಚೇಗೌಡ ಮುಂದಾಗಿದ್ದಾರೆ. ಈ ಮೂಲಕ ಪರೋಕ್ಷವಾಗಿ ಶರತ್ ಬಚ್ಚೇಗೌಡ ಹೇಗಾದರೂ ಮಾಡಿಕೊಳ್ಳಲಿ ಎಂದು ಸಿಎಂ ತಿಳಿಸಿದ್ದಾರೆ.

ಟಿಕೆಟ್ ಬಗ್ಗೆ ಯಾರಿಗೆ ಅಂತ ಚರ್ಚಿಸಿ ನಿರ್ಧಾರ ಮಾಡುತ್ತೇವೆ. ರಾಷ್ಟ್ರೀಯ ನಾಯಕರ ಜೊತೆಗೂ ಚರ್ಚಿಸುತ್ತೇವೆ. ಇಂದು ಕೋರ್ ಕಮಿಟಿ ಸಭೆ ಇದೆ. ಟಿಕೆಟ್ ಯಾರಿಗೆ ಕೊಡಬೇಕು ಅಂತ ಚರ್ಚೆ ಮಾಡುತ್ತೇವೆ. ಇಂದು ಸಂಜೆ ಅನರ್ಹ ಶಾಸಕರು ಬೆಂಗಳೂರಿಗೆ ವಾಪಸ್ ಬರುತ್ತಾರೆ. ಅವರ ಜೊತೆಗೂ ನಾವು ಸಮಾಲೋಚನೆ ಮಾಡುತ್ತೇವೆ ಎಂದಿದ್ದಾರೆ.

Last Updated : Nov 13, 2019, 1:27 PM IST

ABOUT THE AUTHOR

...view details