- ವಿಧಾನಸೌಧದಲ್ಲಿ ನೂತನ ಸಚಿವರ ಸಂಪುಟ ಸಭೆ ಆರಂಭ
- ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ಅನೌಪಚಾರಿಕ ಸಚಿವ ಸಂಪುಟ ಸಭೆ
- ನೂತನ ಸಚಿವರು ಸಂಪುಟ ಸಭೆಯಲ್ಲಿ ಭಾಗಿ
- ನೂತನ ಸಚಿವರಾದ ಜಗದೀಶ್ ಶೆಟ್ಟರ್, ಮಾಧು ಸ್ವಾಮಿ, ಶಶಿಕಲಾ ಜೊಲ್ಲೆ, ಸಿ.ಟಿ.ರವಿ, ಬಸವರಾಜ್ ಬೊಮ್ಮಾಯಿ, ಸಿಸಿ ಪಾಟೀಲ್, ಗೋವಿಂದ ಕಾರಜೋಳ, ಲಕ್ಷ್ಮಣ್ ಸವದಿ, ವಿ.ಸೋಮಣ್ಣ, ಪ್ರಭು ಚೌವಾಣ್, ಎಚ್.ನಾಗೇಶ್, ಕೆ.ಎಸ್.ಈಶ್ವರಪ್ಪ, ಶ್ರೀರಾಮುಲು ಸಂಪುಟ ಸಭೆಯಲ್ಲಿ ಭಾಗಿ
ಪ್ರಮಾಣವಚನ ಬೆನ್ನಲ್ಲೇ ವಿಧಾನಸೌಧದಲ್ಲಿ ನೂತನ ಸಚಿವರ ಸಂಪುಟ ಸಭೆ ಆರಂಭ
12:48 August 20
ಪ್ರಮಾಣವಚನ ಬೆನ್ನಲ್ಲೇ ವಿಧಾನಸೌಧದಲ್ಲಿ ನೂತನ ಸಚಿವರ ಸಂಪುಟ ಸಭೆ ಆರಂಭ
11:19 August 20
- ಶಶಿಕಲಾ ಜೊಲ್ಲೆ ಅವರು ಕೊನೆಯವರಾಗಿ ಬಿಎಸ್ವೈ ಸಚಿವ ಸಂಪುಟ ಸೇರಿದರು.
- ನಿಪ್ಪಾಣಿ ಶಾಸಕರಾಗಿರುವ ಶಶಿಕಲಾ ಜೊಲ್ಲೆ
- ಪತಿ ಅಣ್ಣಾ ಸಾಹೇಬ್ ಜೊಲ್ಲೆ ಚಿಕ್ಕೋಡಿ ಸಂಸದರಾಗಿದ್ದಾರೆ.
- ಪ್ರಭಾವಿ ನಾಯಕ ಉಮೇಶ್ ಕತ್ತಿ ಅವರನ್ನ ಬದಿಗೊತ್ತಿ ಸಚಿವರಾಗಿ ಪ್ರಮಾಣ ಸ್ವೀಕರಿಸುವಲ್ಲಿ ಶಶಿಕಲಾ ಜೊಲ್ಲೆ ಯಶಸ್ವಿಯಾಗಿದ್ದಾರೆ.
- ಬಿಜೆಪಿ ಸರ್ಕಾರದ ಏಕೈಕ ಮಹಿಳಾ ಸಚಿವರಾಗಿ ಅವರು ಅಧಿಕಾರ ಹಾಗೂ ಗೌಪ್ಯತೆ ಪ್ರಮಾಣ ಸ್ವೀಕರಿಸಿದರು.
11:16 August 20
- ಪ್ರಭು ಚೌಹಾಣ್ ಅವರು ಮೊದಲ ಬಾರಿಗೆ ಸಚಿವರಾಗಿ ಪ್ರಮಾಣವಚನ ಸ್ವೀಕಾರ
- ಸಂಸದ ಉಮೇಶ್ ಜಾಧವ್ ಅವರನ್ನು ಬಿಜೆಪಿಗೆ ಕರೆತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಚೌಹಾಣ್
11:13 August 20
- ಪಕ್ಷೇತರ ಶಾಸಕ ಹೆಚ್ ನಾಗೇಶ್ 15 ನೇ ಸಚಿವರಾಗಿ ಬಿಎಸ್ವೈ ಸಂಪುಟ ಸೇರಿದರು.
- ನಾಗೇಶ ರಾಜ್ಯಪಾಲರಿಂದ ಪ್ರತಿಜ್ಞಾವಿಧಿ ಸ್ವೀಕರಿಸಿದರು
- ಕುಮಾರಸ್ವಾಮಿ ಸಂಪುಟದಲ್ಲಿ ಸಚಿವರಾಗಿ 21 ದಿನಕ್ಕೆ ರಾಜೀನಾಮೆ ನೀಡಿದ್ದ ನಾಗೇಶ್
11:09 August 20
- ಸಿಸಿ ಪಾಟೀಲ್ 14 ನೇ ಸಚಿವರಾಗಿ ಸಿಎಂ ಯಡಿಯೂರಪ್ಪ ಅವರ ಸಚಿವ ಸಂಪುಟ ಸೇರ್ಪಡೆಯಾದರು.
- ಕಳೆದ ಚುನಾವಣೆಯಲ್ಲಿ ಸೋತಿದ್ದ ಇವರು, ಈ ಬಾರಿ ಮತ್ತೊಮ್ಮೆ ಸಚಿವರಾಗಿ ಪ್ರಮಾಣ ಸ್ವೀಕರಿಸಿದರು.
11:08 August 20
- ಇದೇ ಮೊದಲ ಬಾರಿಗೆ ಬಿಎಸ್ವೈ ಸಚಿವ ಸಂಪುಟ ಸೇರುತ್ತಿರುವ ಜೆ ಸಿ ಮಾಧುಸ್ವಾಮಿ
- 13ನೇಯವರಾಗಿ ಬಿಎಸ್ವೈ ಸಂಪುಟ ಸೇರಿದ ಮಾಧುಸ್ವಾಮಿ
- ಬಾಯಿತಪ್ಪಿ ಮುಖ್ಯಮಂತ್ರಿ ಎಂದ ಮಾಧುಸ್ವಾಮಿ
- ಚಿಕ್ಕನಾಯಕನಹಳ್ಳಿ ಶಾಸಕರಾದ ಮಾಧುಸ್ವಾಮಿ, ಬಿಜೆಪಿ ಪರ ಸದನದಲ್ಲಿ ಸತ್ವಯುತ ಹಾಗೂ ಅಧಿಕಾರಯುತವಾಗಿ ಮಾತನಾಡುತ್ತಿದ್ದರು.
- ಬಿಜೆಪಿಯಲ್ಲಿ ರಾಜ್ಯದ ಸಂಸದೀಯ ಪಟುವಾಗಿ ಗುರುತಿಸಿಕೊಂಡಿರುವ ಮಾಧುಸ್ವಾಮಿ
11:06 August 20
- 12ನೇ ಸಚಿವರಾಗಿ ಕೋಟಾ ಶ್ರೀನಿವಾಸ್ ಪೂಜಾರಿ ಅಧಿಕಾರ ಸ್ವೀಕಾರ
- ರಾಜ್ಯಪಾಲ ವಜೂಭಾಯಿ ವಾಲಾ ಅವರಿಂದ ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣ ಸ್ವೀಕಾರ
- ದೇವರ ಹೆಸರಲ್ಲಿ ಕೋಟಾ ಶ್ರೀನಿವಾಸ್ ಪೂಜಾರಿ ಪ್ರಮಾಣ
11:03 August 20
- 11ನೇ ಸಚಿವರಾಗಿ ಶಿಗ್ಗಾವಿ ಶಾಸಕ ಬಸವರಾಜ ಬೊಮ್ಮಾಯಿ ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣ ಸ್ಪೀಕರಿಸಿದರು
- ದೇವರ ಹೆಸರಲ್ಲಿ ಬಸವರಾಜ ಬೊಮ್ಮಾಯಿ ಅಧಿಕಾರ ಸ್ವೀಕಾರ
- ಈ ಹಿಂದೆಯೂ ಬಿಎಸ್ವೈ ಸರ್ಕಾರದಲ್ಲಿ ಜಲಸಂಪನ್ಮೂಲ ಸಚಿವರಾಗಿ ಕೆಲಸ ಮಾಡಿದ್ದರು.
11:00 August 20
- 10ನೇ ಸಚಿವರಾಗಿ ಚಿಕ್ಕಮಗಳೂರು ಶಾಸಕ ಸಿ.ಟಿ. ರವಿ ರಾಜ್ಯಪಾಲರಿಂದ ಪ್ರತಿಜ್ಞಾವಿಧಿ ಸ್ವೀಕಾರ
- ಶೆಟ್ಟರ್ ಸಚಿವ ಸಂಪುಟದಲ್ಲಿ ಉನ್ನತ ಶಿಕ್ಷಣ ಸಚಿವರಾಗಿದ್ದ ಸಿ.ಟಿ. ರವಿ
10:58 August 20
- 9ನೇಯವರಾಗಿ ಗೋವಿಂದರಾಜನಗರದ ಶಾಸಕ ವೀರಣ್ಣ ಸೋಮಣ್ಣ ಪ್ರಮಾಣ ವಚನ ಸ್ಪೀಕರಿಸಿದರು.
- ಬಸವಾದಿ ಪ್ರಮುಖರ ಹೆಸರಲ್ಲಿ ಪ್ರಮಾಣ ಸ್ವೀಕರಿಸಿದ ಸೋಮಣ್ಣ
- ಲಿಂಗಾಯತ ನಾಯಕರಾದ ಇವರು, ಸಿದ್ಧಗಂಗಾ ಮಠದ ಅನುಯಾಯಿ
- ಬೆಂಗಳೂರು ನಗರದ ಪ್ರಭಾವಿ ನಾಯಕ ಎಂದು ಪ್ರಸಿದ್ಧ
10:55 August 20
- 8ನೇ ಸಚಿವರಾಗಿ ಎಸ್. ಸುರೇಶ್ಕುಮಾರ್ ಅಧಿಕಾರ ಸ್ವೀಕಾರ
- ಈ ಹಿಂದೆ ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವರಾಗಿ ಕೆಲಸ ಮಾಡಿದ್ದರು
- ದೇವರ ಹೆಸರಲ್ಲಿ ಪ್ರಮಾಣ ಸ್ವೀಕಾರ
- ನೂತನ ಸಚಿವರಾಗಿ ರಾಜ್ಯಪಾಲರಿಂದ ಪ್ರತಿಜ್ಞಾವಿಧಿ ಸ್ವೀಕರಿಸಿದರು
10:52 August 20
- ಬಿ. ಶ್ರೀರಾಮುಲು 7ನೇಯವರಾಗಿ ಬಿಎಸ್ವೈ ಸಂಪುಟ ಸೇರ್ಪಡೆ
- ರಾಜ್ಯಪಾಲರಿಂದ ಅಧಿಕಾರ ಮತ್ತು ಗೌಪ್ಯತೆ ಸ್ವೀಕರಿಸಿದರು
- ದೇವರ ಹೆಸರಲ್ಲಿ ಶ್ರೀರಾಮುಲು ಪ್ರಮಾಣ
- ಈ ಹಿಂದೆ ಆರೋಗ್ಯ ಸಚಿವರಾಗಿ ಕಾರ್ಯ ನಿರ್ವಹಿಸಿದ್ದ ಬಿ. ಶ್ರೀರಾಮುಲು
10:48 August 20
- ಜಗದೀಶ್ ಶೆಟ್ಟರ್ರಿಂದ ಪ್ರಮಾಣ ವಚನ ಸ್ವೀಕಾರ
- ದೇವರ ಹೆಸರಲ್ಲಿ ಶೆಟ್ಟರ್ ಪ್ರಮಾಣ
- ಈ ಹಿಂದೆ ಸಿಎಂ ಸ್ಥಾನ ನಿರ್ವಹಿಸಿದ್ದ ಜಗದೀಶ್ ಶೆಟ್ಟರ್
- ಈ ಹಿಂದಿನ ಬಿಎಸ್ವೈ ಸರ್ಕಾರದಲ್ಲಿ ಸ್ಪೀಕರ್ ಆಗಿದ್ದ ಜಗದೀಶ್ ಶೆಟ್ಟರ್
10:46 August 20
- ಐದನೇ ಸಚಿವರಾಗಿ ಬೆಂಗಳೂರು ನಗರದ ಪ್ರಬಲ ನಾಯಕ ಜಾಲಹಳ್ಳಿ ರಾಮಯ್ಯ ಅಶೋಕ್ ಪ್ರಮಾಣ
- ಒಕ್ಕಲಿಗ ಸಮಾಜದ ಪ್ರಭಾವಿ ನಾಯಕ ಆರ್.ಅಶೋಕ್
- ಪ್ರಮುಖವಾಗಿ ಬೆಂಗಳೂರು ಮಹಾನಗರದಲ್ಲಿ ಬಿಜೆಪಿ ಪ್ರಬಲವಾಗಿ ಬೇರೂರಲು ಶ್ರಮ ಹಾಕಿದ ನಾಯಕ
- ಆಪರೇಷನ್ ಕಮಲ ಹಾಗೂ ಈ ಬಾರಿ ಸರ್ಕಾರ ರಚನೆಯಲ್ಲಿ ಸದ್ದಿಲ್ಲದೇ ಪ್ರಮುಖ ಪಾತ್ರ ವಹಿಸಿದ್ದ ಆರ್ ಅಶೋಕ್
10:44 August 20
- ಈಶ್ವರಪ್ಪ ಅವರೂ ದೇವರ ಹೆಸರಿನಲ್ಲಿಯೇ ಪ್ರಮಾಣ ಸ್ವೀಕಾರ
- ನಾಲ್ಕನೇಯವರಾಗಿ ಬಿಜೆಪಿ ಮುಖಂಡ, ಶಿವಮೊಗ್ಗ ನಗರ ಶಾಸಕ ಕೆಎಸ್ ಈಶ್ವರಪ್ಪ ಪ್ರಮಾಣ
- ಯಡಿಯೂರಪ್ಪ ಜೊತೆ ಸೇರಿ ರಾಜ್ಯಾದ್ಯಂತ ಪಕ್ಷ ಕಟ್ಟುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಈಶ್ವರಪ್ಪ
- ಸಂತೋಷ್ ಬಣದಲ್ಲಿ ಗುರುತಿಸಿಕೊಂಡಿದ್ದ ಈಶ್ವರಪ್ಪ
10:43 August 20
ಜೆ.ಸಿ ಮಾಧುಸ್ವಾಮಿ ರಾಜಕೀಯ ಹಾದಿ
- ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಇದುವರೆಗೆ ನಾಲ್ಕು ಬಾರಿ ಶಾಸಕರಾಗಿ ಆಯ್ಕೆ
- ಒಂದು ಬಾರಿ ಕೆಎಂಎಫ್ ಅಧ್ಯಕ್ಷರಾಗಿ ಕೆಲಸ ಮಾಡಿದ ಅನುಭವ
- ಇದೇ ಮೊದಲ ಬಾರಿಗೆ ಬಿಜೆಪಿ ಪಕ್ಷದಿಂದ ಚುನಾಯಿತರಾಗಿದ್ದಾರೆ.
- ಈ ಹಿಂದೆ ಜನತಾದಳ, ಜೆಡಿಯು ನಿಂದ ಮತ್ತು ಪಕ್ಷೇತರ ಶಾಸಕರಾಗಿ ತಲಾ ಒಂದು ಬಾರಿ ಶಾಸಕರಾಗಿ ವಿಧಾನಸಭೇ ಪ್ರವೇಶಿಸಿದ್ದರು.
- 1954ರ ಆಗಸ್ಟ್ 5ರಂದು ಜನಿಸಿರುವ ಮಧುಸ್ವಾಮಿ ತಂದೆ
- ಚಂದ್ರಶೇಖರಯ್ಯ ಮೂಲತಃ ರೈತಾಪಿ ಕುಟುಂಬದವರು.
- ಬಿ.ಎಸ್ಸಿ, ಎಂಎ, ಎಲ್.ಎಲ್.ಬಿ ವ್ಯಾಸಂಗ ಮಾಡಿರುವ ಮಾಧುಸ್ವಾಮಿ ಕೆಲಕಾಲ ವಕೀಲರಾಗಿ ಕೆಲಸ ಮಾಡಿದ್ದಾರೆ.
- 1989 ರಲ್ಲಿ ಜನತಾದಳದಿಂದ ಸ್ಪರ್ಧಿಸಿ 26291 ಮತಗಳಿಂದ ಗೆಲುವು ಸಾಧಿಸಿದ್ದರು.
- 1997 ರಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ 33768 ಮತಗಳಿಂದ ಜಯಭೇರಿ ಭಾರಿಸಿದ್ದರು.
- 2004 ರಲ್ಲಿ ಜೆಡಿಯು ಪಕ್ಷದಿಂದ ಸ್ಪರ್ಧಿಸಿ 43040 ಮತಗಳಿಂದ ಗೆದ್ದಿದ್ದರು.
- 2018ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ 69,612 ಮತಗಳಿಂದ ಜಯಶಾಲಿಯಾಗಿದ್ದಾರೆ.
10:40 August 20
- ಲಕ್ಷ್ಮಣ್ ಸಂಗಪ್ಪ ಸವದಿ ಪ್ರಮಾಣ
- ಮೂರನೇಯವರಾಗಿ ಪ್ರಮಾಣ ಸ್ವೀಕರಿಸಿದ ಸವದಿ
- ದೇವರ ಹೆಸರಲ್ಲಿ ಪ್ರಮಾಣ ವಚನ ಸ್ವೀಕಾರ
10:37 August 20
- ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಅಶ್ವತ್ಥನಾರಾಯಣ
- ದೇವರ ಹೆಸರಲ್ಲಿ ಅಶ್ವತ್ಥ ನಾರಾಯಣ್ ಪ್ರಮಾಣ
- ಅಶ್ವತ್ಥ ನಾರಾಯಣರಿಂದ ಪ್ರಮಾಣ ವಚನ ಸ್ವೀಕಾರ
10:32 August 20
- ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ಪೀಕರಿಸಿದ ಕಾರಜೋಳ
- ಗೋವಿಂದ ಕಾರಜೋಳ ಕ್ಯಾಬಿನೆಟ್ ಸಚಿವರಾಗಿ ಅಧಿಕಾರ ಸ್ವೀಕಾರ
- ಗೋವಿಂದ ಕಾರಜೋಳ ಪ್ರಥಮವಾಗಿ ಪ್ರಮಾಣ ವಚನ ಸ್ವೀಕಾರ
- ಸಿಎಂ ಬಿಎಸ್ವೈ ಜೊತೆಗೆ ರಾಜ್ಯಪಾಲರ ಉಪಸ್ಥಿತಿ
- ಪ್ರಮಾಣ ವಚನ ಕಾರ್ಯಕ್ರಮ ಆರಂಭ
10:18 August 20
ಬಸವರಾಜ್ ಬೊಮ್ಮಾಯಿ ಬೆಳೆದು ಬಂದ ಹಾದಿ ಇದು
ಬಸವರಾಜ ಬೊಮ್ಮಾಯಿ
ಜನನ : 28 ಜನವರಿ 1960.
ಜನ್ಮಸ್ಥಳ : ಧಾರವಾಡ ಜಿಲ್ಲೆಯ ಹುಬ್ಬಳ್ಳಿ
ವಿದ್ಯಾರ್ಹತೆ: ಮೆಕ್ಯಾನಿಕಲ್ ಇಂಜಿನಿಯರಿಂಗ್.
ರಾಜಕೀಯ ಸ್ಥಾನಮಾನ : 1997 ಮತ್ತು 2003 ಎರಡು ಬಾರಿ ವಿಧಾನ ಪರಿಷತ್ ಸದಸ್ಯರಾಗಿ ಕೆಲಸ.
2008, 2013 ಮತ್ತು 2018ರಲ್ಲಿ ಶಿಗ್ಗಾಂವಿ ಕ್ಷೇತ್ರದಿಂದ ಸತತ ಮೂರು ಬಾರಿ ಶಾಸಕರಾಗಿ ಆಯ್ಕೆ.
ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರದ ಅವಧಿಯಲ್ಲಿ ಜಲಸಂಪನ್ಮೂಲ ಸಚಿವರಾಗಿ ಕೆಲಸ.ಃoಜಥಿ:ಬಸವರಾಜ ಬೊಮ್ಮಾಯಿ
10:14 August 20
ಸಿಸಿ ಪಾಟೀಲ್ಗೆ 2 ನೇ ಬಾರಿಗೆ ಸಚಿವರಾಗುವ ಭಾಗ್ಯ
ಚಂದ್ರಗೌಡ ಚನ್ನಪ್ಪಗೌಡ ಪಾಟೀಲ್( ಸಿ.ಸಿ.ಪಾಟೀಲ್)
ಕ್ಷೇತ್ರ : ನರಗುಂದ
ಜಾತಿ : ಪಂಚಮಸಾಲಿ (ಲಿಂಗಾಯತ)
ಎಷ್ಟು ಬಾರಿ ಗೆದ್ದಿದ್ದಾರೆ:
- 2004, 2008 ಹಾಗೂ 2018 ರಲ್ಲಿ 3 ಬಾರಿ ವಿಧಾನಸಭೆಯ ನರಗುಂದ ಶಾಸಕರಾಗಿ ಆಯ್ಕೆಯಾಗಿದ್ದಾರೆ
- ತಮ್ಮ ರಾಜಕೀಯ ಜೀವನವನ್ನು 1995 ರಲ್ಲಿ ಬೆಳಗಾವಿ ಜಿಲ್ಲಾ ಪಂಚಾಯತಿ ಸದಸ್ಯರಾಗೋ ಮೂಲಕ ಆರಂಭ ಮಾಡಿದ್ರು. ಅಲ್ಲದೇ ಆಗ್ಲೇ ಆರೋಗ್ಯ ಹಾಗೂ ಶಿಕ್ಷಣ ಸ್ಥಾಯಿ ಅಧ್ಯಕ್ಷರಾಗಿಯೂ ಸಹ ಸೇವೆ ಸಲ್ಲಿಸಿದ್ದಾರೆ.
- ನಂತರ 6 ವರ್ಷಗಳ ಕಾಲ ಸವದತ್ತಿಯ ಮಲಪ್ರಭಾ ಕೋ-ಆಪರೇಟಿವ್ ಮಿಲ್ ನ ನಿರ್ದೇಶಕರಾಗಿ, ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.
- ನವಲಗುಂದದ ರೇಣುಕಾದೇವಿ ಮೆಕ್ಕೆಜೋಳ ಸಂಸ್ಕರಣಾ ಘಟಕದ ಸಂಸ್ಥಾಪಕ ನಿರ್ದೇಶಕರಾಗಿ 6 ವರ್ಷ ಸೇವೆ ಸಲ್ಲಿಸಿದ್ದಾರೆ.
- 2007 ಫೆಬ್ರವರಿಯಿಂದ 2007 ನವಂಬರ್‍ವರೆಗೆ ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಕೆಲಸ ಮಾಡಿದ ಅನುಭವವಿದೆ.
- ಜೂನ್ 25 2016 ರಿಂದ ಇಲ್ಲಿಯವರೆಗೆ ಗದಗ ಜಿಲ್ಲಾ ಬಿಜೆಪಿ ಅಧ್ಯಕ್ಷರಾಗಿ ಕೆಲಸ ನಿರ್ವಹಿಸ್ತಿದ್ದಾರೆ.
10:06 August 20
- ಸಚಿವರುಗಳ ಬೆಂಬಲಿಗರು, ಕುಟುಂಬಸ್ಥರ ಆಗಮನ
- ಪಾಸ್ ಇದ್ದವರನ್ನ ಮಾತ್ರ ಒಳಗಡೆ ಬಿಡುತ್ತಿರುವ ಪೊಲೀಸರು
- ಪ್ರತಿಯೊಬ್ಬರನ್ನೂ ತಪಾಸಣೆ ನಡೆಸಿದ ಬಳಿಕವಷ್ಟೇ ಪ್ರವೇಶಕ್ಕೆ ಅನುಮತಿ
- ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿಭಧ್ರತೆ
- ರಾಜಭವನಕ್ಕೆ ಅರವಿಂದ್ ಲಿಂಬಾವಳಿ ಆಗಮನ..
- ರಾಜಭವನ ರಸ್ತೆಯಲ್ಲಿ ವಾಹನ ಸಂಖ್ಯೆ ಜಾಸ್ತಿಯಾಗ್ತಿರೋ ಹಿನ್ನೆಲೆಯಲ್ಲಿ ಟ್ರಾಫಿಕ್ ಪೊಲೀಸರಿಂದ ವಾಹನಗಳ ನಿಯಂತ್ರಣ
10:03 August 20
- ರಾಜಭವನ ಸುತ್ತಮುತ್ತ ಬಿಗಿ ಪೊಲೀಸ್ ಭದ್ರತೆ
- 8 ಜನ ಡಿಸಿಪಿ ನೇತೃತ್ವದಲ್ಲಿ 800ಕ್ಕೂ ಹೆಚ್ಚು ಪೊಲೀಸರ ನಿಯೋಜನೆ
- ರಾಜಭವನ, ವಿಧಾನಸೌಧ ಸುತ್ತಲೂ ಪೊಲೀಸ್ ಭದ್ರತೆ
- ಬೆಳಗ್ಗೆ 8 ರಿಂದ ಮಧ್ಯಾಹ್ನ 2 ಗಂಟೆಯವರೆಗೂ ರಾಜಭವನ ರಸ್ತೆ ಪ್ರವೇಶ ನಿರ್ಬಂಧ
- ರಾಜಭವನ ಪ್ರವೇಶಕ್ಕೆ ಪಾಸ್ ಇರುವವರಿಗೆ ಮಾತ್ರ ಅವಕಾಶ
- ಸಂಚಾರ ದಟ್ಟಣೆಯಾಗದಂತೆ ತಿಮ್ಮಯ್ಯ ಸರ್ಕಲ್ ನಿಂದ ರಾಜಭವನ ಮಾರ್ಗ ಬದಲಾವಣೆ
- ಕ್ವೀನ್ಸ್ ರಸ್ತೆ ಮೂಲಕ ರಾಜಭವನ ರಸ್ತೆಗೆ ಮಾರ್ಗ ಬರುವ ವಾಹನಗಳ ಸಂಚಾರ ಬದಲಾವಣೆ
09:44 August 20
- ಧವಳಗಿರಿ ನಿವಾಸದಿಂದ ಹೊರಟ ಸಿಎಂ ಬಿಎಸ್ವೈ, ಆಂಜನೇಯ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ವಿಧಾನಸೌಧಕ್ಕೆ ತೆರಳಲಿರುವ ಸಿಎಂ
- ರಾಜಭವನಕ್ಕೆ ಹೊರಟ ಸಿಎಂ, ಧವಳಗಿರಿ ನಿವಾಸದಿಂದ ರಾಜಭವನದತ್ತ ಸಿಎಂ ಪ್ರಯಾಣ
- ರಾಜ್ಯದ ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುತ್ತೇನೆ. ನಮ್ಮ ಮೊದಲ ಆದ್ಯತೆ ಪ್ರವಾಹ ಭಾದಿತ ಜನರ ಸಮಸ್ಯೆ ಗೆ ಸ್ಪಂದಿಸುವುದಾಗಿದೆ. ನನ್ನ ಮೇಲೆ ನಂಬಿಕೆಯಿಟ್ಟು ಜವಾಬ್ದಾರಿ ನೀಡಿದ ಪ್ರಧಾನಿ ಮೋದಿ, ಅಮಿತ್ ಷಾ ಹಾಗೂ ಯಡಿಯೂರಪ್ಪ ಅವರಿಗೆ ಆಬಾರಿ : ಕೆ.ಎಸ್. ಈಶ್ವರಪ್ಪ
ಬಿಎಸ್ವೈ ಸಂಪುಟದಲ್ಲಿ ಲಿಂಗಾಯತರಿಗೆ ಸಿಂಹಪಾಲು... ಯಾರಿಗೆ ಎಷ್ಟು ಸ್ಥಾನ?
- ನಾನು ಬಿಜೆಪಿಗೆ ಸೇರಿ ಹನ್ನೆರಡು ವರ್ಷವಾಯಿತು. ಪಕ್ಷ ನನ್ನ ಸೇವೆ ಗುರುತಿಸಿ ಜವಾಬ್ದಾರಿ ನೀಡಿದೆ ಯಾವುದೇ ಖಾತೆ ನೀಡಿದರೂ ಸಮರ್ಥವಾಗಿ ನಿಬಾಯಿಸುತ್ತೇನೆ : ವಿ.ಸೋಮಣ್ಣ
09:40 August 20
- ನಾನು ಖಾತೆಗಾಗಿ ಕ್ಯಾತೆ ಮಾಡುವವನಲ್ಲ. ಮುಖ್ಯಮಂತ್ರಿ ಗಳು ಯಾವುದೇ ಜವಾಬ್ದಾರಿ ವಹಿಸಿದರೂ ಅದನ್ನು ನಿಬಾಯಿಸುತ್ತೇನೆ. ಸಂಪುಟ ವಿಸ್ತರಣೆ ದೊಡ್ಡ ಕಸರತ್ತು. ಅದನ್ನು ನಮ್ಮ ನಾಯಕರು ಯಶಸ್ವಿ ಯಾಗಿ ನಿರ್ವಹಿಸಿದ್ದಾರೆ : ಸುರೇಶ್ ಕುಮಾರ್
ಕೊನೆಗೂ ರಚನೆಯಾಗ್ತಿದೆ ಬಿಎಸ್ವೈ ಸಂಪುಟ... ಪ್ರಮಾಣಕ್ಕೆ ಕ್ಷಣಗಣನೆ..!
- ಪಕ್ಷ ನನಗೆ ಈ ಹಿಂದೆ ಉಪಮುಖ್ಯಮಂತ್ರಿ, ಗೃಹ, ಸಾರಿಗೆ ಇಲಾಖೆಗಳ ಜವಾಬ್ದಾರಿ ನೀಡಿತ್ತು. ಮಂತ್ರಿ ಸ್ಥಾನ ನನಗೆ ಹೊಸದೇನಲ್ಲ. ಪಕ್ಷ ಅಧಿಕಾರಕ್ಕೆ ಬರಬೇಕೆಂಬುದು ನಮ್ಮ ಆಶಯವಾಗಿತ್ತು. ಅದು ಈಗ ಸಫಲವಾಗಿದೆ. ಸಚಿವ ಸ್ಥಾನ ಸಿಗದವರು ನಿರಾಶರಾಗಬಾರದು. ಮುಂದಿನ ದಿನಗಳಲ್ಲಿ ಎಲ್ಲರಿಗೂ ಅವಕಾಶ ಸಿಗಲಿದೆ. ಅಭಿವೃದ್ಧಿ ವಿಚಾರದಲ್ಲಿ ಯಾವುದೇ ತಾರತಮ್ಯ ಮಾಡದೇ ಎಲ್ಲರನ್ನೂ ಒಗ್ಗೂಡಿಸಿ ಸರ್ಕಾರ ನಡೆಸುತ್ತೇವೆ: ಆರ್.ಅಶೋಕ್
- ನನಗೆ ಯಾವುದೇ ನಿಖರವಾದ ಹುದ್ದೆಯ ಆಸೆಗಳಿಲ್ಲ. ಜನರ ಸೇವೆ ಮಾಡುವ ಕಾರ್ಯ ದೊರೆತಿರುವುದೇ ನನ್ನ ಭಾಗ್ಯ. ನಿಷ್ಠೆಯಿಂದ ವಹಿಸಿದ ಖಾತೆಯನ್ನು ನಿಭಾಯಿಸುತ್ತೇನೆ: ಶ್ರೀರಾಮುಲು
09:00 August 20
ಬಿಎಸ್ವೈ ಸಂಪುಟ ರಚನೆ
ಏಕಾಂಗಿಯಾಗಿ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ್ದ ಬಿ. ಎಸ್ ಯಡಿಯೂರಪ್ಪ 20ಕ್ಕೂ ಹೆಚ್ಚು ದಿನಗಳ ಬಳಿಕ 17 ಮಂದಿ ನೂತನ ಸಚಿವರೊಂದಿಗೆ ಸಚಿವ ಸಂಪುಟವನ್ನ ವಿಸ್ತರಣೆ ಮಾಡುತ್ತಿದ್ದಾರೆ. ಮೊದಲ ಹಂತದಲ್ಲಿ 17 ಸಚಿವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಪ್ರಮಾಣವಚನ ಸ್ವೀಕರಿಸಲಿರುವ ಸಚಿವರ ಅಂತಿಮ ಪಟ್ಟಿಯನ್ನು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸೋಮವಾರ ರಾತ್ರಿಯೇ ರಾಜ್ಯಪಾಲರಿಗೆ ಕಳುಹಿಸಿಕೊಟ್ಟಿದ್ದಾರೆ.