ಬೆಂಗಳೂರು:ರಾಜ್ಯದ ಜನತೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಟ್ವೀಟ್ ಮೂಲಕ ಯುಗಾದಿ ಹಬ್ಬಕ್ಕೆ ಶುಭಾಶಯ ತಿಳಿಸಿದ್ದಾರೆ.
ಟ್ವೀಟ್ ಮೂಲಕ ಯುಗಾದಿ ಹಬ್ಬದ ಶುಭ ಕೋರಿದ ಸಿಎಂ - yadiyurappa tweet news
ರಾಜ್ಯದ ಜನತೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ , ಕೃಷಿ ಸಚಿವ ಬಿ.ಸಿ.ಪಾಟೀಲ್ ಟ್ವೀಟ್ ಮೂಲಕ ಶುಭಾಶಯ ಕೋರಿದ್ದಾರೆ.
ಹೊಸ ಸಂವತ್ಸರ ಸರ್ವರಿಗೆ ಶುಭ ತರಲಿ. ಕೊರೊನ ಸೋಂಕು ಹರಡುವಿಕೆ ತಡೆಗಟ್ಟಲು ಮನೆಗಳಲ್ಲಿಯೇ ಯುಗಾದಿಯ ಸಂಭ್ರಮ ಆಚರಿಸಿ. ಜನರು ತಮ್ಮ ತಮ್ಮ ಮನೆಗಳಲ್ಲೇ ಸರಳವಾಗಿ ಯುಗಾದಿ ಆಚರಿಸಿ ಸಿಎಂ ಟ್ವೀಟ್ ಮೂಲಕ ಕರೆ ನೀಡಿದ್ದಾರೆ.
ಯುಗದ ಆದಿಯು ತರಲೆಂದಿಗೂ ಹರುಷ. ನೋವುಗಳೆಲ್ಲಾ ನಲಿವುಗಳಾಗಲಿ, ಹೊಸಯುಗದ ಹೆಜ್ಜೆಗೆ ಮಹಾಮಾರಿಯು ತೊಲಗಲಿ.
ಸುಖ ಸಮೃದ್ಧಿ ಹೆಚ್ಚಲಿ. ರೈತರೆಲ್ಲರ ಬಾಳು ಬೆಳಕಾಗಲಿ. ಜಗವು ಬೆಳಗಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳೋಣ, ಮಹಾಮಾರಿಯನ್ನು ಎದುರಿಸೋಣ, ಎಲ್ಲರಿಗೂ ಶಾರ್ವರಿ ನಾಮ ಸಂವತ್ಸರದ ಶುಭಾಶಯಗಳು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಪತ್ರಿಕಾ ಹೇಳಿಕೆ ಮೂಲಕ ಶುಭ ಕೋರಿದ್ದಾರೆ.