ಕರ್ನಾಟಕ

karnataka

ETV Bharat / state

ಕಲಿಕೆಯಲ್ಲಿ ಹಿಂದೆ ಬಿದ್ದ ಬಾಲಕಿಗೆ 'ಬಾಸುಂಡೆ' ಶಿಕ್ಷೆ ... ಶಿಕ್ಷಕರ ವಿರುದ್ಧ ಪೋಷಕರಿಂದ ದೂರು - ಬೆಂಗಳೂರು ನವಚೈತನ್ಯ ಪಬ್ಲಿಕ್ ಸ್ಕೂಲ್‌

ಕಲಿಕೆಯಲ್ಲಿ ಹಿಂದೆ ಇರುವ ಕಾರಣ ತಮ್ಮ ಮಗಳಿಗೆ ಥಳಿಸಿದ್ದಲ್ಲದೇ ಮಾನಸಿಕ ಹಿಂಸೆ ನೀಡಿ ಬೆದರಿಕೆ ಹಾಕಿದ್ದಾರೆ ಎಂದು ಶಾಲಾ ಪ್ರಾಂಶುಪಾಲೆ ಹಾಗೂ ಶಿಕ್ಷಕರ ವಿರುದ್ಧ ಪೋಷಕರೊಬ್ಬರು ಬ್ಯಾಡರಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.‌

Brutal punishment to the student for being dull in studies
ಕಲಿಕೆಯಲ್ಲಿ ಹಿಂದೆ ಇರೋದೇ ಕಾರಣ,,,,ಮಗುವಿನ ಮೈಮೇಲೆ ಬಾಸುಂಡೆಗಳ ಸುರಿಮಳೆ

By

Published : Dec 12, 2019, 8:40 PM IST

ಬೆಂಗಳೂರು:ಶಾಲಾ ಪ್ರಾಂಶುಪಾಲೆ ಹಾಗೂ ಶಿಕ್ಷಕ ತಮ್ಮ ಮಗಳಿಗೆ ಥಳಿಸಿದ್ದಲ್ಲದೇ, ಹಿಂಸೆ ನೀಡಿದ್ಸಿದಾರೆ ಎಂದು ಆರೋಪಿಸಿ ವಿದ್ಯಾರ್ಥಿನಿಯ ಪೋಷಕರೊಬ್ಬರು ಬ್ಯಾಡರಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.‌

ಪೋಷಕರಿಂದ ದೂರು...

ನಗರದ ನವಚೈತನ್ಯ ಪಬ್ಲಿಕ್ ಸ್ಕೂಲ್​​ನಲ್ಲಿ 1ನೇ ತರಗತಿಯಲ್ಲಿ ವ್ಯಾಸಾಂಗ ಮಾಡುತ್ತಿರುವ ಬಾಲಕಿ ಮೇಲೆ ಪ್ರಾಂಶುಪಾಲರು, ಶಿಕ್ಷಕ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಕಲಿಕೆಯಲ್ಲಿ ಹಿಂದೆ ಇರುವ ಕಾರಣ ಶಾಲೆಯ ಪ್ರಾಂಶುಪಾಲೆ ಶೋಭಾ ಹಾಗೂ ಶಿಕ್ಷಕ ಶ್ರೀನಿವಾಸ್ ಕಳೆದ ಕೆಲ ತಿಂಗಳಿಂದ ಬಾಲಕಿಗೆ ಹಿಂಸೆ ನೀಡಿದ್ದಾರೆ ಎಂದು ಪೋಷಕರು ದೂರಿದ್ದಾರೆ.

ಅಷ್ಟೇಅಲ್ಲದೇ ಮಗುವಿಗೆ ಮೈತುಂಬಾ ಬಾಸುಂಡೆ ಬರುವಂತೆ ಥಳಿಸಿದ್ದು, ಇದನ್ನ ಪ್ರಶ್ನಿಸಿದ್ದಕ್ಕೆ ನಮಗೇ ಬೆದರಿಕೆ ಹಾಕುತ್ತಿದ್ದಾರೆ ಎಂದು ಪೋಷಕರು ಪ್ರಕರಣ ದಾಖಲು ಮಾಡಿದ್ದಾರೆ. ಇದೇ ವೇಳೆ ಮಗಳ‌ ಮೇಲೆ ನಡೆದ ಹಲ್ಲೆಯ ಸಾಕ್ಷಿಯಾಗಿ ಗಾಯದ ಗುರುತುಗಳ ಪೋಟೊವನ್ನು ಪೊಲೀಸರಿಗೆ ನೀಡಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ABOUT THE AUTHOR

...view details