ಬೆಂಗಳೂರು: ಕರ್ನಾಟಕ ಪ್ರಿಮಿಯರ್ ಲೀಗ್(ಕೆಪಿಎಲ್ )ಮ್ಯಾಚ್ ಫಿಕ್ಸಿಂಗ್ ಪ್ರಕರಣದ ತನಿಖೆ ನಡೆಸುತ್ತಿರುವ ಸಿಸಿಬಿ ತಂಡ ಇದೀಗ ಮತ್ತೆ ಕೆಪಿಎಲ್ನಲ್ಲಿ ಫಿಕ್ಸಿಂಗ್ ಪ್ರಕರಣದಲ್ಲಿ ಭಾಗಿಯಾದ ಬೆಂಗಳೂರು ಬ್ರಿಗೇಡಿಯರ್ಸ್ ತಂಡದ ಬ್ಯಾಟ್ಸ್ಮನ್ ನಿಶಾಂತ್ ಶೇಖಾವತ್ನ್ನು ವಶಪಡಿಸಿಕೊಂಡು ತನಿಖೆ ಚುರುಕುಗೊಳಿಸಿದ್ದಾರೆ.
ಕೆಪಿಎಲ್ ಮ್ಯಾಚ್ ಫಿಕ್ಸಿಂಗ್ ಪ್ರಕರಣ: ಸಿಸಿಬಿ ವಶಕ್ಕೆ ಬ್ರಿಗೇಡಿಯರ್ಸ್ ಟೀಂನ ಬ್ಯಾಟ್ಸ್ಮನ್ - ಕೆಪಿಎಲ್ ಮ್ಯಾಚ್ ಫಿಕ್ಸಿಂಗ್ ಪ್ರಕರಣದ ತನಿಖೆ ಸುದ್ದಿ
ಕೆಪಿಎಲ್ ಮ್ಯಾಚ್ ಫಿಕ್ಸಿಂಗ್ ಪ್ರಕರಣದ ತನಿಖೆ ನಡೆಸುತ್ತಿರುವ ಸಿಸಿಬಿ ತಂಡ ಇದೀಗ ಬ್ಯಾಟ್ಸ್ಮನ್ ನಿಶಾಂತ್ ಶೇಖಾವತ್ ಅವರನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.
ಈತ ಈಗಾಗ್ಲೇ ಬಂಧಿತನಾದ ಬೆಳಗಾವಿ ಪ್ಯಾಂಥರ್ಸ್ ತಂಡದ ಮಾಲೀಕ ಅಲಿ ಅಸ್ಪಾಕ್ ತಾರ ಹಾಗೂ ಬೌಲಿಂಗ್ ಕೋಚ್ಗಳ ಜೊತೆ ಸೇರಿಕೊಂಡು ಮ್ಯಾಚ್ ಫಿಕ್ಸಿಂಗ್ ಮಾಡುತ್ತಿದ್ದ. ಹೀಗಾಗಿ ಸಿಸಿಬಿ ತಂಡ ನಿಶಾಂತ್ ಶೇಖಾವತ್ ಅವರನ್ನು ಬಂಧಿಸಿ ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ. ಬೆಂಗಳೂರು ಬ್ರಿಗೇಡಿಯರ್ಸ್ ತಂಡದ ಬ್ಯಾಟ್ಸಮನ್ ಆಗಿರುವ ಕಾರಣ ಬ್ರಿಗೇಡಿಯರ್ಸ್ ತಂಡದವರು ಏನಾದ್ರು ಮ್ಯಾಚ್ ಫಿಕ್ಸಿಂಗ್ ಪ್ರಕರಣದಲ್ಲಿ ಭಾಗಿಯಾಗಿದ್ದರೇ ಅನ್ನೋದರ ಕುರಿತು ಬಂಧಿತ ಆರೋಪಿಯಿಂದ ಮಾಹಿತಿ ಕಲೆ ಹಾಕ್ತಿದ್ದಾರೆ.
ಕೆಪಿಎಲ್ ಬೆನ್ನಟ್ಟಿದ ಸಿಸಿಬಿಗೆ ಒಬ್ಬರ ಹಿಂದೆ ಒಬ್ಬರು ಪ್ರತಿಷ್ಠಿತ ತಂಡದ ಆಟಗಾರರು ಪ್ರಕರಣದಲ್ಲಿ ಸಿಕ್ಕಿ ಹಾಕಿಕೊಳ್ತಿರುವುದು ನಿಜಕ್ಕೂ ಅಚ್ಚರಿಯಾಗಿದೆ. ಹೀಗಾಗಿ ಈ ಪ್ರಕರಣದಲ್ಲಿ ಹಲವಾರು ಮಂದಿ ಭಾಗಿಯಾಗಿರುವ ಗುಮಾನಿ ಮೇರೆಗೆ ಸಿಸಿಬಿ ಹೆಚ್ಚುವರಿ ಆಯುಕ್ತ ಸಂದೀಪ್ ಪಾಟೀಲ್ ಅವರ ನೇತೃತ್ವದ ತಂಡ ಇನ್ನಷ್ಟು ಮಂದಿಯನ್ನು ಬೆನ್ನಟ್ಟಿದೆ.