ಕರ್ನಾಟಕ

karnataka

ETV Bharat / state

ಹೋಟೆಲ್​ನಲ್ಲಿ ಕುಳಿತು ಆಹಾರ ಸೇವಿಸುವ ವ್ಯವಸ್ಥೆ ಸ್ಥಗಿತ: ಏನಂತಾರೆ ಮಾಲೀಕರು?

ಸಾರ್ವಜನಿಕರಿಗೆ ಹೋಟೆಲ್​ ಒಳಗಡೆ ಊಟದ ವ್ಯವಸ್ಥೆ ನೀಡುವುದು ಸುರಕ್ಷಿತವಲ್ಲ ಎಂಬುದನ್ನು ಅರಿತ ಮಾಲೀಕರು, ನಗರದಲ್ಲಿ ಕೊರೊನಾ ನಿಯಂತ್ರಣಕ್ಕೆ ಬರುವವರೆಗೆ ತಾತ್ಕಲಿಕವಾಗಿ ಟೇಬಲ್ ವ್ಯವಸ್ಥೆ ನಿಲ್ಲಿಸಲು ನಿರ್ಧರಿಸಿದ್ದು ,ಪಾರ್ಸಲ್ ವ್ಯವಸ್ಥೆ ಮುಂದುವರಿಸುವುದಾಗಿ ಮಾಲೀಕ ಅರುಣ್ ಅಡಿಗ ತಿಳಿಸಿದ್ದಾರೆ.

Breakdown of food intake system in hotel
ವಿದ್ಯಾರ್ಥಿ ಭವನ ಹೋಟೆಲ್​ನಲ್ಲಿ ಕುಳಿತು ಆಹಾರ ಸೇವಿಸುವ ವ್ಯವಸ್ಥೆ ಸ್ಥಗಿತ

By

Published : Jun 24, 2020, 12:39 PM IST

Updated : Jun 24, 2020, 1:46 PM IST

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಕೊರೊನಾ ದಿನೇ ದಿನೆ ಹೆಚ್ಚುತ್ತಿರುವ ಹಿನ್ನೆಲೆ ಜೂನ್​ 27 ರಿಂದ ಕೆಲವು ದಿನಗಳ ಮಟ್ಟಿಗೆ ಗಾಂಧಿ ಬಜಾರ್​​​​​​ನ ವಿದ್ಯಾರ್ಥಿ ಭವನ ಹೋಟೆಲ್​ನಲ್ಲಿ ಸಾರ್ವಜನಿಕರು ಕುಳಿತು ಆಹಾರ ಸೇವಿಸುವ ವ್ಯವಸ್ಥೆಯನ್ನು ತಡೆಹಿಡಿಯಲು ಮಾಲೀಕರು ನಿರ್ಧರಿಸಿದ್ದಾರೆ.

ವಿದ್ಯಾರ್ಥಿ ಭವನ ಹೋಟೆಲ್

ಜೂನ್ 08 ರಿಂದ ಹೊಸ ಟೇಬಲ್ ವ್ಯವಸ್ಥೆ ಮೂಲಕ ಗ್ರಾಹಕರಿಗೆ ಮತ್ತೆ ಊಟದ ವ್ಯವಸ್ಥೆ ಆರಂಭಿಸಿತ್ತು. ಅಲ್ಲದೇ ಎಂದಿನಂತೆ ಹೋಟೆಲ್​ಗೆ ಆಗಮಿಸುತ್ತಿದ್ದ ಗ್ರಾಹಕರು ದೋಸೆಯನ್ನು ಸವಿಯುತ್ತಿದ್ದರು. ಇದೀಗ ಕೊರೊನಾ ತನ್ನ ವ್ಯಾಪ್ತಿಯನ್ನು ವಿಸ್ತರಿಸಿರುವುದರಿಂದ ಮಾಲೀಕರು ಆತಂಕಕ್ಕೀಡಾಗಿದ್ದಾರೆ.

ಹೋಟೆಲ್​ನಿಂದ ಗ್ರಾಹಕರಿಗೆ ಮನವಿ
ಸಾರ್ವಜನಿಕರಿಗೆ ಹೋಟೆಲ್​​ ಒಳಗಡೆ ಊಟದ ವ್ಯವಸ್ಥೆ ಮಾಡುವುದು ಸುರಕ್ಷಿತವಲ್ಲ ಎಂಬುದನ್ನು ಅರಿತ ಮಾಲೀಕರು, ನಗರದಲ್ಲಿ ಕೊರೊನಾ ನಿಯಂತ್ರಣಕ್ಕೆ ಬರುವವರೆಗೆ ತಾತ್ಕಲಿಕವಾಗಿ ಟೇಬಲ್ ವ್ಯವಸ್ಥೆಯನ್ನು ನಿಲ್ಲಿಸಲು ನಿರ್ಧರಿಸಿದ್ದು ,ಪಾರ್ಸಲ್ ವ್ಯವಸ್ಥೆ ಮುಂದುವರಿಸುವುದಾಗಿ ಮಾಲೀಕ ಅರುಣ್ ಅಡಿಗ ತಿಳಿಸಿದ್ದಾರೆ.
Last Updated : Jun 24, 2020, 1:46 PM IST

ABOUT THE AUTHOR

...view details