ಕರ್ನಾಟಕ

karnataka

ETV Bharat / state

ಕಡಲೆಕಾಯಿ ಪರಿಷೆ ಮೇಲೆ‌ ಕೊರೊನಾ‌ ಕರಿ ನೆರಳು: ಈ ಬಾರಿ ಜಾತ್ರೆಗೆ ಬ್ರೇಕ್​​ - Bangalore kadalekai parishe

ಬಸವನಗುಡಿ ಅಂದ್ರೆ ಎಲ್ಲರಿಗೂ ನೆನಪಾಗುವುದು ಐತಿಹಾಸಿಕ ಕಡಲೆಕಾಯಿ ಪರಿಷೆ. ಎರಡು ದಿನಗಳ ಕಾಲ ನಡೆಯುವ ಈ ಪರಿಷೆಯಲ್ಲಿ ಜನ ಸಾಗರವೇ ಹರಿದು ಬರುತ್ತೆ. ಆದರೆ ಈ ಬಾರಿ‌ ಕಡಲೆಕಾಯಿ ಪರಿಷೆಗೆ ಬ್ರೇಕ್ ಬಿದ್ದಿದೆ.

ಪರಿಷೆ
ಪರಿಷೆ

By

Published : Dec 7, 2020, 3:38 PM IST

ಬೆಂಗಳೂರು: ಈ ವರ್ಷ ಕೊರೊನಾ‌ ಕರಿ ನೆರಳು ಎಲ್ಲಾ‌ ಆಚರಣೆಗಳ ಮೇಲೆ‌ ಬಿದ್ದಿದ್ದು,‌ ಕಡಲೆಕಾಯಿ ಪರಿಷೆ ಕೂಡ ಇದರಿಂದ ಹೊರತಾಗಿಲ್ಲ. ಇನ್ನು ಮುಂಬರುವ ಹೊಸ ವರ್ಷಕ್ಕೆ ಬ್ರಿಗೇಡ್ ರಸ್ತೆಯಲ್ಲಿನ ಆಚರಣೆಗೂ ಕೂಡ ಬಿಬಿಎಂಪಿ ಬ್ರೇಕ್ ಹಾಕಿದೆ.

ಬಸವನಗುಡಿಯ ಸ್ಥಳೀಯ ನಾಯಕರು ಹಾಗೂ ದೇವಸ್ಥಾನದ ಆಡಳಿತ ಮಂಡಳಿ ಜನರ ಹಿತದೃಷ್ಟಿಯಿಂದ ಜಾತ್ರೆಯನ್ನು ನಡೆಸಲು ಹಿಂದೇಟು ಹಾಕಿದ್ದಾರೆ. ಈ ಬಾರಿ ಸರಳವಾಗಿ ಹಬ್ಬವನ್ನು ಆಚರಿಸಲಾಗುತ್ತಿದ್ದು, ದೇವರಿಗೆ ಸರಳ‌ ಪೂಜೆ ಮಾಡಲಾಗುತ್ತೆ. ಇನ್ನು ಭಕ್ತರಿಗೆ ಮುಂಜಾನೆ 6ರಿಂದ ರಾತ್ರಿ 9ರವರೆಗೆ ದರ್ಶನ‌ ಪಡೆಯಲು ಅವಕಾಶ‌ ಕಲ್ಪಿಸಲಾಗಿದೆ. ಈ ಬಾರಿ‌ ಭಕ್ತರಿಗೆ ಪ್ರಸಾದ ವಿನಿಯೋಗ ಕೂಡ ಇಲ್ಲ. ಕೇವಲ‌ ದರ್ಶನ ಮಾಡಲು ಮಾತ್ರ ಸಾಧ್ಯವಿದೆ. ಇನ್ನು ದೇವಸ್ಥಾನದ ಆವರಣದಲ್ಲಿ ಜನದಟ್ಟಣೆ‌ ಆಗದಂತೆ ಪೋಲಿಸರನ್ನು ನಿಯೋಜಿಸಲಾಗಿದೆ.

ಈ ಬಾರಿ ಕಡಲೆಕಾಯಿ ಪರಿಷೆಗೆ ಬ್ರೇಕ್

ಪ್ರತೀ ಬಾರಿ ಪರಿಷೆ ಅಂದ್ರೆ ಕೇವಲ‌ ಕರ್ನಾಟಕದ ರೈತರಷ್ಟೇ ಅಲ್ಲದೆ ಪಕ್ಕದ ರಾಜ್ಯಗಳ ರೈತರೂ ಕೂಡ ಇಲ್ಲಿಗೆ ಬಂದು ಒಂದು ವಾರಗಳ ಕಾಲ ತಾವು ಬೆಳೆದ ಕಡೆಲೆಕಾಯಿ ಮಾರಾಟ ಮಾಡುತ್ತಿದ್ದರು. ಆದರೆ ಈ ಬಾರಿ ರೈತರು ಹಾಗೂ ಬೀದಿಬದಿ ವ್ಯಾಪಾರಿಗಳು ಯಾವುದೇ ಸ್ಟಾಲ್‌ಗಳನ್ನು ಇಡದಂತೆ ದೇವಸ್ಥಾನ ಆಡಳಿತ ಮಂಡಳಿ ಸೂಚನೆ ನೀಡಿದೆ.

ಕಾರ್ತಿಕ ಮಾಸದ ಕೊನೆಯ ಸೋಮವಾರದಂದು ಕಡಲೆಕಾಯಿ ಪರಿಷೆಯನ್ನು ಬಸವನಗುಡಿಯಲ್ಲಿ ಪ್ರತೀ ವರ್ಷ ಬಹಳ ವಿಜೃಂಭಣೆಯಿಂದ ಆಚರಿಸಲಾಗತ್ತಿತ್ತು.‌ ದೇವರಿಗೆ ವಿಶೇಷ ಪೂಜೆಗಳು, ಕಡಲೆಕಾಯಿಯಲ್ಲಿ ಅಭಿಷೇಕ, ಪಂಚಾಮೃತದ ಅಭಿಷೇಕ ಸೇರಿದಂತೆ ಹಲವಾರು ಅಭಿಷೇಕಗಳನ್ನು ಮಾಡಿ ದೇವರನ್ನು ಹೂವಿನಿಂದ ಅಲಂಕರಿಸಲಾಗುತ್ತಿತ್ತು. ಜೊತೆಗೆ ದೇವಾಲಯಕ್ಕೆ ಬರುವ ಭಕ್ತಾದಿಗಳಿಗೆ ಪ್ರಸಾದ ವಿನಿಯೋಗ ವ್ಯವಸ್ಥೆ ಕೂಡ‌ ಮಾಡಲಾಗುತ್ತಿತ್ತು. ಆದರೆ ಈ ಬಾರಿ ಕೊರೊನಾದಿಂದಾಗಿ ಎಲ್ಲದಕ್ಕೂ ಬ್ರೇಕ್ ಬಿದ್ದಿದೆ.

ABOUT THE AUTHOR

...view details