ಬೆಂಗಳೂರು: ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆಯ ಸಮಸ್ಯೆ ಹೊಸತೇನಲ್ಲ. ನಗರದ ಸರ್ಕಾರಿ ಆಸ್ಪತ್ರೆಗಳ ಸಮಸ್ಯೆಗೆ ಇನ್ಮುಂದೆ ಬ್ರೇಕ್ ಹಾಕಲು ಆರೋಗ್ಯ ಸಚಿವರೇ ಮುಂದಾಗಿದ್ದಾರೆ. ವೈದ್ಯರ ಸಂಖ್ಯೆ ಹೆಚ್ಚಿಸಲು ಆರೋಗ್ಯ ಸಚಿವರು ಪ್ಲಾನ್ ಮಾಡಿದ್ದು, ಈ ಮೂಲಕ ಸರ್ಕಾರಿ ಆಸ್ಪತ್ರೆಗಳ ಸಮಸ್ಯೆ ಬಗೆಹರಿಸಲು ಆರೋಗ್ಯ ಸಚಿವ ಶ್ರೀರಾಮುಲು ಮುಂದಾಗಿದ್ದಾರೆ.
ಸರ್ಕಾರಿ ಆಸ್ಪತ್ರೆಗಳ ವೈದ್ಯರ ಸಮಸ್ಯೆಗೆ ಬ್ರೇಕ್.. ಆರೋಗ್ಯ ಸಚಿವರ ಹೊಸ ಪ್ಲಾನ್! - ಆರೋಗ್ಯ ಸಚಿವ ಶ್ರೀರಾಮುಲು
ಬೆಂಗಳೂರು ನಗರದ ಸರ್ಕಾರಿ ಆಸ್ಪತ್ರೆಗಳ ಸಮಸ್ಯೆಗೆ ಇನ್ಮುಂದೆ ಬ್ರೇಕ್ ಹಾಕಿ ಅವನ್ನು ಬಗೆಹರಿಸಲು ಆರೋಗ್ಯ ಸಚಿವ ಶ್ರೀರಾಮುಲು ಮುಂದಾಗಿದ್ದಾರೆ.

ಆರೋಗ್ಯ ಸಚಿವ ಶ್ರೀರಾಮುಲು
ಆರೋಗ್ಯ ಸಚಿವರ ಹೊಸ ಪ್ಲಾನ್..
ಅಂದ ಹಾಗೇ, ನಗರದ ಸರ್ಕಾರಿ ಆಸ್ಪತ್ರೆಗಳಿಗೆ 950 ನರ್ಸಿಂಗ್ ಸ್ಟಾಫ್, ಸಾವಿರಕ್ಕೂ ಹೆಚ್ಚು ವೈದ್ಯರ ಸೇವೆ ಹೆಚ್ಚಿಸಲು ತಯಾರಿ ನಡೆದಿದೆ. ಶೀಘ್ರದಲ್ಲೇ ಹೆಚ್ಚುವರಿ ವೈದ್ಯರ ನೇಮಕಕ್ಕೆ ಮುಂದಾಗಲಿದ್ದು, DHO ಮೂಲಕ ನೇರ ನೇಮಕಾತಿಗೆ ಸಚಿವ ಶ್ರೀರಾಮುಲು ಆದೇಶ ಹೊರಡಿಸಲಿದ್ದಾರೆ.
ಈ ಮೂಲಕ ಕೆಲವೇ ದಿನಗಳಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿನ ವೈದ್ಯರ ಕೊರತೆ ನೀಗುತ್ತಾ ಅನ್ನೋದನ್ನು ಕಾದು ನೋಡಬೇಕಿದೆ. ಎಂಬಿಬಿಎಸ್ ಜಾಗವನ್ನು ಭರ್ತಿ ಮಾಡಲಿದ್ದು, ಎಲ್ಲೆಡೆ ಉತ್ತಮ ಆರೋಗ್ಯ ಸೇವೆ ನೀಡಲು ಚಿಂತಿಸಲಾಗಿದೆ.