ಕರ್ನಾಟಕ

karnataka

ETV Bharat / state

ಸ್ಪೀಕರ್ ಆದೇಶದ ಹಿಂದೆ ಭ್ರಷ್ಟಾಚಾರದ ವಾಸನೆ ಕಾಣುತ್ತಿದೆ: ಹೆಚ್.ಕೆ.ಪಾಟೀಲ್​ - ವಿಧಾನಸಭೆಯ ಸಮಿತಿಗಳಿಗೆ ಅಧ್ಯಯನ, ಪ್ರವಾಸ, ಸ್ಥಳ ಭೇಟಿ ರದ್ದು

ಕೋವಿಡ್-19 ಸೋಂಕು ಹರಡುತ್ತಿರುವ ಕಾರಣ ವಿಧಾನಸಭೆಯ ಸಮಿತಿಗಳಿಗೆ ಅಧ್ಯಯನ ಪ್ರವಾಸ, ಸ್ಥಳ ಭೇಟಿಗೆ ಅವಕಾಶ ನಿರಾಕರಿಸಿರುವ ಆದೇಶಕ್ಕೆ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಅಧ್ಯಕ್ಷ ಹೆಚ್.ಕೆ.ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

HK Patil
ಹೆಚ್.ಕೆ.ಪಾಟೀಲ್​

By

Published : May 28, 2020, 12:41 PM IST

ಬೆಂಗಳೂರು: ಕೊರೊನಾ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ವಿಧಾನಸಭೆಯ ಸಮಿತಿಗಳಿಗೆ ಅಧ್ಯಯನ, ಪ್ರವಾಸ, ಸ್ಥಳ ಭೇಟಿಗೆ ತಡೆಯೊಡ್ಡಿರುವ ವಿಧಾನಸಭೆ ಕಾರ್ಯದರ್ಶಿ ವಿಶಾಲಾಕ್ಷಿಯರು ಆದೇಶಕ್ಕೆ ಹೆಚ್‌.ಕೆ.ಪಾಟೀಲ್ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಸಾರ್ವಜನಿಕ ಲೆಕ್ಕಪತ್ರ ಸಮಿತಿ ಅಧ್ಯಕ್ಷ ಹೆಚ್.ಕೆ.ಪಾಟೀಲ್

ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಾರ್ವಜನಿಕ ಲೆಕ್ಕ ಪತ್ರ ಸಮಿತಿಯಿಂದ ಆಸ್ಪತ್ರೆ, ಏರ್​​ಪೋರ್ಟ್, ಬಸ್ ನಿಲ್ದಾಣಕ್ಕೆ ಭೇಟಿ ನೀಡಲು ನಿರ್ಧರಿಸಲಾಗಿತ್ತು. ತನಿಖೆ ಮಾಡಿ ನಿರ್ಣಯ ಮಾಡಲು ತಿರ್ಮಾನಿಸಿದ್ದೇವೆ‌. ನಮ್ಮ ಕರ್ವತ್ಯ ನಿರ್ವಹಿಸುವುದಕ್ಕೆ ಸಭಾಧ್ಯಕ್ಷರು ಯಾವುದಕ್ಕೂ ಅಡ್ಡಿ ಪಡಿಸಬಾರದು. ನಮಗೆ ಪರಿಶೀಲನೆಗೆ ಅಡ್ಡಿ ಪಡಿಸಿದರೆ ಅದು ಜನದ್ರೋಹಿ ನೋಟಿಫಿಕೇಷನ್ ಆಗುತ್ತದೆ. ತಕ್ಷಣ ಈ ನೋಟಿಫಿಕೇಷನ್ ಹಿಂಪಡೆಯಬೇಕೆಂದು ಆಗ್ರಹಿಸಿದರು.

ಲೆಕ್ಕಪತ್ರ ಸಮಿತಿ ಸದಸ್ಯರು ಭೇಟಿ ನೀಡಬಾರದು. ಯಾವುದೇ ಸ್ಥಳಗಳಿಗೆ ಹೋಗಬಾರದು ಎಂದು ಆದೇಶ ನೀಡಿದ್ದಾರೆ. ತಪಾಸಣೆ ಅಡ್ಡಿಪಡಿಸುವ ಸ್ಪೀಕರ್ ತೀರ್ಮಾನ ಸರಿಯಲ್ಲ. ಭ್ರಷ್ಟಾಚಾರಕ್ಕೆ ಬೆಂಬಲ ನೀಡಲು ಸ್ಪೀಕರ್ ತೀರ್ಮಾನ ಮಾಡಿದಂತಾಗುತ್ತದೆ ಎಂದಿದ್ದಾರೆ.

ಇಂದು ಆಸ್ಪತ್ರೆಗಳಿಗೆ ಭೇಟಿ ಮಾಡಿ ಕೇಳಿ ಬರುತ್ತಿರುವ ಆರೋಪಗಳ ಬಗ್ಗೆ ಮಾಹಿತಿ ಪಡೆದು ತನಿಖೆ ಮಾಡಿ ನಿರ್ಣಯ ಕೈಗೊಳ್ಳಲು ತೀರ್ಮಾನಿಸಿದ್ದೆವು. ಆದರೆ ಈ ನಡುವೆ ಸ್ಪೀಕರ್ ಕಚೇರಿಯಿಂದ ಅಧಿಸೂಚನೆ ಹೊರ ಬಿದ್ದಿದ್ದು, ಲೆಕ್ಕಪತ್ರ ಸಮಿತಿ ಸದಸ್ಯರು ಯಾವುದೇ ಸ್ಥಳಗಳಿಗೆ ಹೋಗಬಾರದು ಎಂದು ಆದೇಶ ನೀಡಿದ್ದಾರೆ.

ಒಂದು ಕಾಲ ಇತ್ತು ಬರ ಬಂದರೆ ಸಾಕು ಅಂತ ಹೇಳ್ತಿದ್ರು. ಈಗ ಕೋವಿಡ್-19 ಬಂದ್ರೆ ಸಾಕು ಅನ್ನೋ ಕಾಲ ಬಂದಿದೆ. ಈ ಸಂಕಷ್ಟದಲ್ಲೂ ಭ್ರಷ್ಟಾಚಾರದ ವಾಸನೆ ಕಾಣ್ತಿದೆ. ಇಂತಹ ಸಂದರ್ಭದಲ್ಲಿ ನಮ್ಮ ಲೆಕ್ಕಪತ್ರ ಸಮಿತಿ ಭೇಟಿ ಮಾಡುವುದು ಅಗತ್ಯ. ಅಲ್ಲದೇ ಸಂವಿಧಾನದ ಅಡಿಯಲ್ಲಿ ಸಮಿತಿ ವಿಚಾರದಲ್ಲಿ ಸ್ಪೀಕರ್ ಮಧ್ಯ ಪ್ರವೇಶ ಸರಿಯಲ್ಲ. ಕೂಡಲೇ ಸ್ಪೀಕರ್ ಆದೇಶ ಹಿಂಪಡೆಯಬೇಕು ಎಂದು ಆಗ್ರಹಿಸಿದ್ದಾರೆ.

ABOUT THE AUTHOR

...view details