ಕರ್ನಾಟಕ

karnataka

ETV Bharat / state

ಕೊರೊನಾ ಮಹಾಮಾರಿ: ಜ್ಯೋತಿಷಿ ಬ್ರಹ್ಮಾಂಡ ಗುರೂಜಿಯಿಂದ ವಿಶೇಷ ಯಾಗ - corona news

ಕೊರೊನಾ ಕತ್ತಲೆ ಹೋಗಲಾಡಿಸಲು ಏಪ್ರಿಲ್ 5 ರ ರಾತ್ರಿ 9 ಗಂಟೆಗೆ ಜ್ಯೋತಿ ಬೆಳಗಿಸಿ ಎಂದು ಪ್ರಧಾನಿ ಮೋದಿ ಕರೆ ನೀಡಿದ್ದಾರೆ. ಈ ಬಗ್ಗೆ ಸರ್ಕಾರಗಳು, ಜನರು ಒಗ್ಗಟ್ಟಾಗಿ ಕೊರೊನಾ ವಿರುದ್ಧ ಹೋರಾಡಬೇಕಿದೆ ಎಂದು ಗುರೂಜಿ ಹೇಳಿದರು.

ಯಾಗ ಪೂಜೆ ಮಾಡಿದ ಬ್ರಹ್ಮಾಂಡ ಗುರೂಜಿ
ಯಾಗ ಪೂಜೆ ಮಾಡಿದ ಬ್ರಹ್ಮಾಂಡ ಗುರೂಜಿ

By

Published : Apr 3, 2020, 5:26 PM IST

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಭೀತಿ ಹಿನ್ನೆಲೆ ನಗರದ ಬಿನ್ನಿಮಿಲ್ ಬಳಿಯ ಅಂಗಾಳ ಪರಮೇಶ್ವರಿ ದೇವಸ್ಥಾನದಲ್ಲಿ ಜ್ಯೋತಿಷಿ ಬ್ರಹ್ಮಾಂಡ ಗುರೂಜಿ ಯಾಗ ನೆರವೇರಿಸಿದರು.

ದೇಶದ ಜನತೆ ಕ್ಷೇಮವಾಗಿರಲಿ ಎಂದು ಮಹಾಯಾಗ ನಡೆಸಲಾಗಿದೆ ಎಂದು ಗುರೂಜಿ ಹೇಳಿದರು. ಏಪ್ರಿಲ್ 5 ರಂದು ಎಲ್ಲರೂ ತಮ್ಮ ಮನೆಯಲ್ಲಿ ಎಣ್ಣೆಯ ದೀಪ ಹಚ್ಚಿ. ದೇವಿಯನ್ನು ಆರಾಧಿಸಿ, ಎಲ್ಲವೂ ಸರಿಯಾಗಲಿದೆ. ಇನ್ನು ಐದು ರೋಗಗಳು ಪ್ರಪಂಚದಲ್ಲಿ ಬರಲಿವೆ. ಎರಡು ರೋಗಗಳಿಗೆ ನಾವು ಹೀಗೆ ಕುಗ್ಗಿದ್ರೆ ಹೇಗೆ?. ಎಲ್ಲವನ್ನು ಎದುರಿಸಲು ನಾವು ಪಣ ತೊಡಬೇಕೆಂದು ಅವರು ಹೇಳಿದರು.

ABOUT THE AUTHOR

...view details