ಬೆಂಗಳೂರು: ಪಾರಿವಾಳ ಹಿಡಿಯಲು ಹೋಗಿದ್ದ ಇಬ್ಬರು ಬಾಲಕರಿಗೆ ಹೈ ಟೆನ್ಷನ್ ತಂತಿ ತಗುಲಿದ್ದು ಗಂಭೀರವಾಗಿ ಗಾಯಗೊಂಡಿದ್ದವರ ಪೈಕಿ ಓರ್ವ ಬಾಲಕ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ. ಸುಪ್ರೀತ್ ಸಾವನ್ನಪ್ಪಿದ ಬಾಲಕನೆಂದು ತಿಳಿದುಬಂದಿದೆ.
ಪಾರಿವಾಳದ ಆಸೆಗೆ ಹೋಯ್ತು ಜೀವ: ಚಿಕಿತ್ಸೆ ಪಡೆಯುತ್ತಿದ್ದ ಬಾಲಕ ಸಾವು - A boy died for the desire of pigeon
ಚಂದನ್ ಹಾಗೂ ಸುಪ್ರೀತ್ ಮನೆ ಮೇಲೆ ಏರಿ ಕಬ್ಬಿಣದ ರಾಡ್ನಿಂದ ಪಾರಿವಾಳ ಹಾರಿಸುವಾಗ ಹೈ ಟೆನ್ಷನ್ ತಂತಿ ತಗುಲಿ ಗಂಭೀರವಾಗಿ ಗಾಯಗೊಂಡಿದ್ದರು.
ಸಾವನ್ನಪ್ಪಿದ ಬಾಲಕ ಸುಪ್ರೀತ್
ನಂದಿನಿ ಲೇಔಟ್ನ ವಿಜಯನಂದನಗರದಲ್ಲಿ ಡಿಸೆಂಬರ್ 1ರ ಮಧ್ಯಾಹ್ನ 11 ವರ್ಷದ ಬಾಲಕರಾದ ಚಂದನ್ ಹಾಗೂ ಸುಪ್ರೀತ್ ಮನೆ ಮೇಲೇರಿ ಪಾರಿವಾಳ ಹಿಡಿಯಲು ಮುಂದಾಗಿದ್ದರು. ಈ ಸಂದರ್ಭದಲ್ಲಿ ಕಬ್ಬಿಣದ ರಾಡ್ನಿಂದ ಪಾರಿವಾಳ ಹಾರಿಸುವಾಗ ವಿದ್ಯುತ್ ತಂತಿಗೆ ತಗುಲಿ ಗಂಭೀರವಾಗಿ ಗಾಯಗೊಂಡಿದ್ದರು. ಖಾಸಗಿ ಆಸ್ಪತ್ರೆಯಲ್ಲಿ ಇಬ್ಬರು ಬಾಲಕರು ಚಿಕಿತ್ಸೆ ಪಡೆಯುತ್ತಿದ್ದರು. ದುರದೃಷ್ಟವಶಾತ್ ಚಿಕಿತ್ಸೆ ಫಲಕಾರಿಯಾಗದೆ ಸುಪ್ರೀತ್ ಸಾವನ್ನಪ್ಪಿದ್ದಾನೆ.
ಇದನ್ನೂ ಓದಿ:ಉಡುಪಿ ರಸ್ತೆ ಅಪಘಾತ : ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ಯುವಕ